Bike wheeling : ಸಿಗಂದೂರು ಸೇತುವೆಯಲ್ಲಿ ಯುವಕನ ವೀಲಿಂಗ್ : ನಂತರ ಆಗಿದ್ದೇನು
ಶಿವಮೊಗ್ಗ : ಸಿಗಂದೂರು ಸೇತುವೆ ಮೇಲೆ ಯುವಕನೊಬ್ಬ ಬೈಕ್ ವೀಲಿಂಗ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ.
ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯ ದಿನ ಯುವಕನೊಬ್ಬ ನಿಂಜಾ ಎಂಬ ಹೆಸರಿನ ಸ್ಪೋರ್ಟ್ ಬೈಕ್ನಲ್ಲಿ ಹೈ ಸ್ಪೀಡ್ನಲ್ಲಿ ವೀಲಿಂಗ್ ಮಾಡಿದ್ದ. ನಂತರ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಪೊಲೀಸರು ಆ ಬೈಕ್ನ್ನು ಸೀಜ್ ಮಾಡಿ ಆತನಿಗೆ 5 ಸಾವಿರ ಫೈನ್ ಹಾಕಿದ್ದಾರೆ. ನಂತರ ಆತ ರಸ್ತೆಗಳಲ್ಲಿ ಈ ರೀತಿಯ ಸಾಹಸ ದೃಶ್ಯಗಳನ್ನು ಮಾಡಬೇಡಿ ಎಂದು ತಪ್ಪೊಪ್ಪಿಗೆಯ ವಿಡಿಯೋ ಮಾಡಿದ್ದಾನೆ, ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
View this post on Instagram