Bhadravathi Court Death Sentence Teacher ಭದ್ರಾವತಿ, malenadu today news : August 23 2025 : ಮಹತ್ವದ ಪ್ರಕರಣವೊಂದರಲ್ಲಿ ಭದ್ರಾವತಿ ಕೋರ್ಟ್ ಆರೋಪಿಗಳಿಬ್ಬರಿಗೆ ಮರಣದಂಡನೆ ವಿಧಿಸಿದೆ. ಈ ಪ್ರಕರಣದಲ್ಲಿ ಓರ್ವ ಮಹಿಳೆ ಸೇರಿ ಇಬ್ಬರಿಗೆ ಕೋರ್ಟ್ ಮರಣದಂಡನೆ ವಿಧಿಸಿದೆ. ಪ್ರಕರಣದ ವಿವರವನ್ನು ಗಮನಿಸುವುದಾದರೆ, ವಿವರ ಇಲ್ಲಿದೆ. ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ 2016 ರಲ್ಲಿ ದಾಖಲಾಗಿರುವ ಪ್ರಕರಣ ಇದಾಗಿ. ಐಪಿಸಿ ಸೆಕ್ಷನ್ 302,201,34 ಅಡಿಯಲ್ಲಿ ದಾಖಲಾಗಿದ್ದ ಕೇಸ್ನಲ್ಲಿ, ಅಜಾದ್ ಅಹಮದ್ ಎಂಬವರು ದೂರು ನೀಡಿದ್ದರು. ಅವರ ಹೇಳಿಕೆ ಆದರಿಸಿ ಎಫ್ಐಆರ್ ದಾಖಲಾಗಿತ್ತು.

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
ನ್ಯೂಟೌನ್ ಪೊಲೀಸ್ ಸ್ಟೇಷನ್ ಭದ್ರಾವತಿ
ದೂರುದಾರ ಅಜಾದ್ ಅಹಮದ್ ರವರ ಅಣ್ಣ ಇಮ್ತಿಯಾಜ್ ಶಿಕ್ಷಕರಾಗಿದ್ದರು, ಅವರು ಲಕ್ಷ್ಮೀ ಎಂಬ ಶಿಕ್ಷಕಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಇಮ್ತಿಯಾಜ್ ಸೊರಬದಲ್ಲಿ ಹಾಗೂ ಲಕ್ಷ್ಮೀ ಭದ್ರಾವತಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ನಡುವೆ ಐದುವರ್ಷಗಳ ದಾಂಪತ್ಯದಲ್ಲಿ ಮತ್ತೊಬ್ಬ ಎಂಟ್ರಿಯಾಗಿದ್ದ. ಲಕ್ಷ್ಮೀಯ ಬಾಲ್ಯ ಸ್ನೇಹಿತ ಕೃಷ್ಣಮೂರ್ತಿ ಎಂಬಾತ ಲಕ್ಷ್ಮೀ ಜೊತೆಗೆ ಸಲುಗೆ ಬೆಳೆಸಿದ್ದಷ್ಟೆ ಅಲ್ಲದೆ ಲಕ್ಷ್ಮೀ ನೆಲಸಿದ್ದ ಮನೆಯ ಪಕ್ಕದಲ್ಲಿಯೇ ಈತನು ಮನೆ ಮಾಡಿಕೊಂಡಿದ್ದ.
ಇವರಿಬ್ಬರ ನಡುವಿನ ಸಲುಗೆ ಪತಿ ಇಮ್ತಿಯಾಜ್ಗೆ ಗೊತ್ತಾಗಿ ಜಗಳ ತೆಗೆದಿದ್ದ. ಇದರ ನಡುವೆ 07-07-2016 ರಂದು ಲಕ್ಷ್ಮೀಯನ್ನು ಇಮ್ತಿಯಾಜ್ ಹಬ್ಬಕ್ಕೆ ಮನೆ ಬರುವಂತೆ ಕರೆದುಕೊಂಡು ಬರಲು ಭದ್ರಾವತಿಗೆ ಬಂದಿದ್ದ. ಈ ಸಂದರ್ಭದಲ್ಲಿ ಲಕ್ಷ್ಮೀ ಹಾಗೂ ಕೃಷ್ಣಮೂರ್ತಿ ಇಮ್ತಿಯಾಜ್ರನ್ನ ಹೊಡೆದು ಕೊಂದು, ಬಳಿಕ ಆತನ ಶವವನ್ನು ಭದ್ರಾ ನದಿಗೆ ಎಸೆದಿದ್ದರು.
ಈ ಬಗ್ಗೆ ಸ್ವತಃ ಲಕ್ಷ್ಮೀ ಘಟನೆ ನಡೆದ ಮರುದಿನ ಇಮ್ತಿಯಾಜ್ರ ಸಹೋದರ ಅಜಾದ್ರಿಗೆ ತಿಳಿಸಿ, ಪತಿಯ ಜೊತೆಗೆ ಜಗಳವಾಯ್ತು, ಆಕಸ್ಮಿಕವಾಗಿ ಅವರಿಗೆ ಹೊಡೆದೆ, ಅವರು ಸತ್ತುಹೋದರು, ಪಕ್ಕದ ಮನೆಯವರಿಗೆ ವಿಷಯ ತಿಳಿಸಿದೆ. ಬಳಿಕ ಎಲ್ಲರೂ ಸೇರಿಕೊಂಡು ಹೆಣವನ್ನು ಹೊಳೆಗೆ ಎಸೆದವು.
ನಾನು ಸತ್ತುಹೋಗಬೇಕು ಎಂದುಕೊಂಡಿದ್ದೆ. ಆದರೆ ಮಗು ಚಿಕ್ಕದು, ಅದರ ಭವಿಷ್ಯಕ್ಕಾಗಿ ನಾನು ಬದುಕಬೇಕಿದೆ. ಈಗ ನೀನೆ ನನ್ನನ್ನು ಕಾಪಾಡಬೇಕು ಎಂದಿದ್ದಾರೆ. ವಿಷಯ ಕೇಳಿ ಶಾಕ್ ಆಗಿದ್ದ ಅಜಾದ್, ಅಲ್ಲಿಂದ ಹೊರಬಂದು ಸಂಬಂಧಿಕರಿಗೆ ವಿಷಯ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದರು.

ಆದರೆ, ತನಿಖೆ ನಡೆಸಿದ್ದ ಪೊಲೀಸರಿಗೆ ಇಮ್ತಿಯಾಜ್ರ ಕೊಲೆ ಅನೈತಿಕ ಸಂಬಂಧದ ಕಾರಣಕ್ಕಾಗಿ ನಡೆದಿದ್ದು ಗೊತ್ತಾಗಿದೆ. ಲಕ್ಷ್ಮೀ ಹಾಗೂ ಕೃಷ್ಣಮೂರ್ತಿ ಇಬ್ಬರು ಸೇರಿಕೊಂಡು ಕಬ್ಬಿಣದ ಪೈಪ್ನಿಂದ ಇಮ್ತಿಯಾಜ್ಗೆ ಹೊಡೆದು ಕೊಲೆ ಮಾಡಿದ್ದರು. ಬಳಿಕ ಆತನ ಶವವನ್ನು ಬೆಡ್ಶೀಟ್ನಲ್ಲಿ ಸುತ್ತಿ ನೈಲಾನ್ ದಾರದಿಂದ ಕಟ್ಟಿ ಇನ್ನೋವಾ ಕಾರಿನಲ್ಲಿ ತೆಗೆದುಕೊಂಡು ಹೋಗಿ ಭದ್ರಾನದಿಗೆ ಬಿಸಾಡಿದ್ದರು. ಈ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಶಿಕ್ಷಕ ಇಮ್ತಿಯಾಜ್ ಪತ್ನಿ ಲಕ್ಷ್ಮಿ, ಆಕೆಯ ಪ್ರಿಯಕರ ಕೃಷ್ಣಮೂರ್ತಿ ಅಲಿಯಾಸ್ ಕಿಟ್ಟಿ, ಶಿವರಾಜ್ ಅಲಿಯಾಸ್ ಶಿವು ಎಂಬುವವರನ್ನ ಬಂಧಿಸಿದ್ದರು.
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..
Bhadravathi Court Death Sentence Teacher
ಭದ್ರಾವತಿ ಕೋರ್ಟ್
ಈ ಪ್ರಕರಣದ ತನಿಖೆಯನ್ನು ಅಂದಿನ ತನಿಖಾಧಿಕಾರಿ ಸಿಪಿಐ ಚಂದ್ರಶೇಖರ್ ಟಿಕೆ ನಡೆಸಿದ್ದರು, ಪ್ರಕರಣದ ಪೂರ್ಣ ತನಿಖೆ ಮುಗಿಸಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಪ್ರಬ್ಲಿಕ್ ಪ್ರಾಸಿಕ್ಯೂಟರ್ ರತ್ನಮ್ಮ ವಾದ ಮಂಡಿಸಿದ್ದರು. ಪ್ರಕರಣ ವಿಚಾರಣೆ, ನಾಲ್ಕನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯ ಭದ್ರಾವತಿ ಪೀಠಾಸೀನ ಪೀಠದಲ್ಲಿ ನಡೆದಿದ್ದು ಇದೀಗ ತೀರ್ಪು ಹೊರಬಿದ್ದಿದೆ. ನ್ಯಾಯಾದೀಶರಾದ ಇಂದಿರಾ ಮೈಲಾಸ್ವಾಮಿ ಚೆಟ್ಟಿಯಾರ್ ರವರು ಪ್ರಕರಣದಲ್ಲಿ 120ಬಿ ಸೆಕ್ಷನ್ ಅಡಿಯಲ್ಲಿ ಒಂದು ಮತ್ತು ಎರಡನೇ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. 302 ಸೆಕ್ಷನ್ ಅಡಿಯಲ್ಲಿ ಒಂದನೇ ಆರೋಪಿ ಶಿಕ್ಷಕಿ ಲಕ್ಷ್ಮೀ ಹಾಗೂ ಎರಡನೇ ಆರೋಪಿ ಕೃಷ್ಣಮೂರ್ತಿಗೆ ಮರಣದಂಡನೆ ವಿಧಿಸಿದ್ದಾರೆ. 201 ಐಪಿಸಿ ಸೆಕ್ಷನ್ ಅಡಿಯಲ್ಲಿ ಮೂವರು ಆರೋಪಿಗಳಿಗೆ ಏಳು ವರ್ಷ ಶಿಕ್ಷೆ ವಿಧಿಸಿದ್ದಾರೆ.
ಇದನ್ನ ಸಹ ಓದಿ : ಬೆಂಗಳೂರು-ಸಿಗಂದೂರು ನಡುವೆ ಕೆಎಸ್ಆರ್‌ಟಿಸಿ ನಾನ್ ಎಸಿ ಸ್ಲೀಪರ್ ಬಸ್! ರೂಟ್, ಟಿಕೆಟ್ ದರ ತಿಳಿದುಕೊಳ್ಳಿ https://malenadutoday.com/bengaluru-sigandur-non-ac-sleeper-bus-route/
Bhadravathi Court Death Sentence Teacher
