ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 29 2025 : Bengaluru Engineer ಖಾಲಿ ಜಾಗದ ಮಾರಾಟದ ವಿಚಾರದಲ್ಲಿ ಬೆಂಗಳೂರು ಮೂಲದ ಇಂಜಿನಿಯರ್ ಒಬ್ಬರಿಗೆ 20 ಲಕ್ಷ ರೂಪಾಯಿ ವಂಚಿಸಿದ ಘಟನೆ ಸಂಬಂಧ ಭದ್ರಾವತಿ ತಾಲ್ಲೂಕು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಸದ್ಯ ವಿಚಾರಣೆ ನಡೆಯುತ್ತಿದ್ದು, ದಾಖಲಾಗಿರುವ ಎಫ್ಐಆರ್ ನ ಪ್ರಕಾರ, ಇಲ್ಲಿನ ಜೇಡಿಕಟ್ಟೆಯಲ್ಲಿ ಬೆಂಗಳೂರು ಮೂಲದ ಇಂಜಿನಿಯರ್ ಖಾಲಿಜಾಗ ಖರೀದಿಗೆ ಮುಂದಾಗಿದ್ದಾರೆ. ಇದಕ್ಕಾಗಿ ಸ್ಥಳೀಯ ಟೀಂ ಒಂದು ವ್ಯಾಪಾರ ನಡೆಸಿದ್ದು, ಖರೀದಿಗೆ ಸಂಬಂಧಿಸಿದಂತೆ ಡೀಲ್ ಮಾಡಿಕೊಂಡಿದೆ. ಅಲ್ಲದೆ ಶುದ್ಧಕ್ರಯ ಪತ್ರ ನೀಡಿ 20 ಲಕ್ಷ ರೂಪಾಯಿ ಪಡೆದಿದೆ. ಈ ನಡುವೆ ಖಾಲಿಜಾಗದ ದಾಖಲೆ ನೀಡದೇ ನೆಪ ಹೇಳಿದ ಟೀಂ ಬಳಿಕ ಖಾಲಿಜಾಗವೊಂದನ್ನ ತೋರಿಸಿ ಇದೇ ಜಾಗವನ್ನು ದಾಖಲೆ ಮಾಡಿಕೊಡುವುದಾಗಿ ಹೇಳಿತ್ತಂತೆ. ಇದೆಲ್ಲದರ ಬಳಿಕ ಜಾಗ ಖರೀದಿಸಿದ ಇಂಜಿನಿಯರ್ ಖಾಲಿ ಜಾಗಕ್ಕೆ ಬೇಲಿ ಹಾಕಲು ಮುಂದಾದಾಗ, ಅಲ್ಲಿದ್ದ ಅಡ್ಡಿಪಡಿಸಿದ್ದರಷ್ಟೆ ಅಲ್ಲದೆ ಜಾಗ ಗೋಮಾಳದ್ದು ಎಂದು ತಿಳಿಸಿದ್ದಾರೆ. ಆಗ ಅನುಮಾನಗೊಂಡು ಬೆಂಗಳೂರಿನ ಇಂಜಿನಿಯರ್ ಸರ್ಕಾರಿ ಇಲಾಖೆಯಲ್ಲಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಖರೀದಿಸಿದ ಜಾಗ ಸರ್ಕಾರಿ ಜಾಗ ಎಂಬುದು ಗೊತ್ತಾಗಿ, ತಮಗೆ ಮೋಸವಾಗಿದ್ದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಈ ಕುರಿತು ವಿಚಾರಣೆ ನಡೆಯುತ್ತಿದೆ. Bengaluru Engineer

Bengaluru Engineer Cheated of 20 Lakhs for Gomala Land
ಇದನ್ನು ಸಹ ಓದಿ ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!