ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು!

Malenadu Today

KARNATAKA NEWS/ ONLINE / Malenadu today/ Nov 6, 2023 SHIVAMOGGA NEWS

Chikkamagaluru |  ಚಿಕ್ಕಮಗಳೂರು ಜಿಲ್ಲೆಯು ಅಜ್ಜಂಪುರ ತಾಲ್ಲೂಕಿನಲ್ಲಿರುವ ವಸತಿ ಶಾಲೆಯೊಂದರಲ್ಲಿ 8 ನೇ ಕ್ಲಾಸ್ ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿದ್ದಾರೆ. ಇದ್ದಕ್ಕಿದ್ದಂತೆ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 

13 ವರ್ಷದ ಉಷಾ ಮೃತ ವಿದ್ಯಾರ್ಥಿನಿ, ತಲೆಸುತ್ತುಬಂದು ಬಿದ್ದಿದ್ದ ಈಕೆಯನ್ನು ತಕ್ಷಣವೇ ಅಜ್ಜಂಪುರ ಪ್ರಾಥಮಿಕ ಕೇಂದ್ರಕ್ಕೆ ಕರೆತಂದು ದಾಖಲಿಸಲಾಗಿದೆ. ಆದರೆ, ಅಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು. ಆನಂತರ ಮೃತದೇಹವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿತ್ತು. 

READ : ಇದು ತೀರ್ಥಹಳ್ಳಿ ತೂಗುಸೇತುವೆಯಲ್ಲ! ಹಾಗಾದರೆ ಎಲ್ಲಿಯದು? ಶಿವಮೊಗ್ಗದಲ್ಲಿ ಈ ಸ್ಪಾಟ್ ಎಲ್ಲಿದೆ ಗೆಸ್ ಮಾಡಿ!

ಟಿಬಿ ಖಾಯಿಲೆಯಿಂದ ಉಷಾ ಬಳಲುತ್ತಿದ್ದು, ಈ ಬಗ್ಗೆ ಪೋಷಕರಿಗೆ ಮಾಹಿತಿಯು ತಿಳಿಸಲಾಗಿತ್ತು.ಅದೇ ಕಾರಣದಿಂದ ಅಸ್ವಸ್ಥಗೊಂಡು ಕುಸಿದುಬಿದ್ದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 


Share This Article