ಹೆಂಡತಿಯನ್ನು ಅಡ್ಮಿಟ್‌ ಮಾಡಿದ್ದಕ್ಕೆ ಸಿಟ್ಟು, ಮೆಗ್ಗಾನ್‌ ಆಸ್ಪತ್ರೆಯೊಳಗೆ ಮಹಿಳೆ ಮೇಲೆ ಹಲ್ಲೆ!

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 22, 2025 ‌‌ 

ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಪೊಲೀಸರು, ಸೆಕ್ಯುರಿಟಿ ಗಾರ್ಡ್ ಹಾಗೂ ಆಸ್ಪತ್ರೆಯ ಸಿಬ್ಬಂದಿಯ ಎದುರಲ್ಲೆ ವ್ಯಕ್ತಿಯೊಬ್ಬ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯ ಮೊಬೈಲ್‌ ದೃಶ್ಯಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. 

- Advertisement -

ಘಟನೆಯ ವಿವರ

ಲಭ್ಯ ಮಾಹಿತಿ ಪ್ರಕಾರ, ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ಪತ್ನಿಯಿಂದ ಪೆಟ್ಟು ತಿಂದ್ದು ಅಸ್ವಸ್ಥಳಾಗಿದ್ದ ಮಹಿಳೆಯನ್ನು ಇನ್ನೊಬ್ಬ ಮಹಿಳೆ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗಾಗಿ ದಾಖಲಿಸಿದ್ದರು. ಇದೇ ವೇಳೆ ಅಲ್ಲಿಗೆ ಬಂದ ಸಂತ್ರಸ್ತ ಮಹಿಳೆಯ ಪತಿರಾಯ ತನ್ನ ಹೆಂಡತಿಯನ್ನು ಆಸ್ಪತ್ರೆಗೆ ತಂದು ಅಡ್ಮಿಟ್‌ ಮಾಡಿಸಲು ನಿನ್ಯಾರು? ನನ್ನ ಹೆಂಡತಿಯನ್ನು ನೋಡಿಕೊಳ್ಳುವುದು ನನಗೆ ಗೊತ್ತಿದೆ, ನೀನಿನ್ನು ಹೊರಡು ಎನ್ನುತ್ತಾರೆ. ಆಗ ಸಂತ್ರಸ್ತ ಮಹಿಳೆಯು ನೆರವು ನೀಡಿದ ಮಹಿಳೆಯ ಕೈಯನ್ನು ಗಟ್ಟಿಯಾಗಿ ಹಿಡಿದಿದ್ದಳು. ಹೀಗಾಗಿ ಆಕೆಯು ಅಲ್ಲಿಂದ ಹೋಗಲು ನಿರಾಕರಿಸುತ್ತಾಳೆ. ಆಗ ಕೆರಳಿದ ವ್ಯಕ್ತಿ ಆಕೆಯ ಮೇಲೆ ಹಲ್ಲೆ ಮಾಡುತ್ತಾನೆ. ಈ ವೇಳೆ ಅಲ್ಲಿಯೇ ಇದ್ದ ಪೊಲೀಸ್‌ ಸಿಬ್ಬಂದಿ ವ್ಯಕ್ತಿಯ ಶರ್ಟ್‌ ಹಿಡಿದು ಅಲ್ಲಿಂದ ಎಳೆದೊಯ್ಯುತ್ತಾನೆ. ಅಷ್ಟರಲ್ಲಿ ಸಿಟ್ಟಿಗೆದ್ದ ಮಹಿಳೆಯು ಹಲ್ಲೆ ಮಾಡುತ್ತಾರೆ. ಈ ಎಲ್ಲಾ ಘಟನೆಗಳ ಬಳಿಕ ಸ್ಥಳದಲ್ಲಿದ್ದ ಅಸ್ವಸ್ಥಗೊಂಡಿದ್ದ ಮಹಿಳೆಯ ಪುತ್ರ ನಡೆದಿದ್ದನ್ನ ಕಂಡು ಕಣ್ಣೀರು ಹಾಕುತ್ತಿದ್ದ ದೃಶ್ಯ ಮೊಬೈಲ್‌ ಕ್ಯಾಮರಾಗಳಲ್ಲಿ ರೆಕಾರ್ಡ್‌ ಆಗಿದ್ದು, ದೃಶ್ಯ ಮನಕರಗಿಸುತ್ತಿದೆ.

SUMMARY | woman assaulted by man in meggan hospital

KEY WORDS |‌   woman assaulted by man in meggan hospital

Share This Article
Leave a Comment

Leave a Reply

Your email address will not be published. Required fields are marked *