Shivamogga morning news  | ತೀರ್ಥಹಳ್ಳಿ ಸಾಗರ ಹೊಳೆಹೊನ್ನೂರನಲ್ಲಿ ನಿನ್ನೆ ಏನಾತು ಓದಿ |

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 17, 2025 ‌‌ 

ತೀರ್ಥಹಳ್ಳಿಯಲ್ಲಿ ಹೋಟೆಲ್‌ ಮಾಲೀಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಆಘಾತ  ಮಾಡಿಸುತ್ತಿದೆ. ಇಲ್ಲಿನ ಬಾಳೇಬೈಲಿನಲ್ಲಿ ಕೇವಲ 34 ವರ್ಷದ ಮಿಥುನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊನ್ನೆತಾಳು ಪಂಚಾಯಿತಿ ಹಂಡಿಗೆಯ ನಿವಾಸಿಯಾದ ಇವರು ನಾನ್‌ವೆಜ್‌ ಹೋಟೆಲ್‌ ನಡೆಸ್ತಿದ್ದರು. ವ್ಯಾಪಾರದಲ್ಲಿ ನುಕ್ಸಾನ್‌ ಆದ ಹಿನ್ನೆಲೆಯಲ್ಲಿ ಹೀಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಈ ಸಂಬಂದ ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತ ಸಾಗರ ತಾಲ್ಲೂಕುನಲ್ಲಿ ಆಟೊದಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಣಿಕೆ ಮಾಡುತ್ತಿರುವುದ್ದಾಗ ನಗರ ಠಾಣೆ ಪೊಲೀಸರು ರೇಡ್‌ ಮಾಡಿದ್ದಾರೆ.  ನಗರದ ಸೊರಬ ರಸ್ತೆಯ ಗಡದಯ್ಯ ಲೇಔಟ್ ಬಳಿ ರೇಡ್‌ ಮಾಡಿದ ಪೊಲೀಸರು  ಆಟೊ ಸಮೇತ 84 ಕೆ.ಜಿ ಗೋಮಾಂಸ ವಶಕ್ಕೆ ಪಡೆದಿದ್ದಾರೆ. ಆರೋಪಿ ಪರಾರಿಯಾಗಿದ್ದೂ, ಉಳಿದಂತೆ ಕೇಸ್‌ ರಿಜಿಸ್ಟರ್‌ ಆಗಿದೆ.

ಈ ಬದಿ ಹೊಳೆಹೊನ್ನೂರು ಪೊಲೀಸರು ಕಳುವಾಗಿದ್ದ 6 ಕ್ವಿಂಟಲ್‌ ಅಡಿಕೆ, ಮೂರು ಬೈಕ್ ಹಾಗೂ ಒಂದು ಓಮ್ನಿ ವಾಹನ ಸೇರಿದಂತೆ ಮೂವರು ಕಳ್ಳರನ್ನ ಬಂಧಿಸಿದ್ದಾರೆ. ಭದ್ರಾವತಿಯ ಸಾಜಿದ್ (25) ಕೂಡ್ಲಿಯ ಜಮೀರ್ ಶೇಖ್ (24) ಹಾಗೂ ಚನ್ನಗಿರಿಯ ಮಹಮ್ಮದ್ ಮಹೀಬುಲ್ಲಾ (23) ಬಂಧಿತರು. ಶ್ರೀನಿವಾಸಪುರದ ರಮೇಶ ಎಂಬುವರ ಮನೆಯಲ್ಲಿದ್ದ ಕಳುವಾಗಿದ್ದ ಅಡಿಕೆ ಕೇಸ್‌ ಇದಾಗಿದೆ   

SUMMARY |  shivamogga morning news 

KEY WORDS |‌  shivamogga morning news 

Leave a Comment