ಖಾಸಗಿ ಬಸ್ ನಿಲ್ದಾಣದ ಬಳಿ ಮಲಗಿದ್ದ ವ್ಯಕ್ತಿ ಸಾವು | ಹೆಸರು ಮನೋಜ್‌ |

13

SHIVAMOGGA | MALENADUTODAY NEWS 

- Advertisement -

ಮಲೆನಾಡು ಟುಡೆ ಡಿಜಿಟಲ್‌ ನ್ಯೂಸ್‌ ಮೀಡಿಯಾ 

Sep 12, 2024  shimoga police 

ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ಬಳಿ ಸುಸ್ತಾಗಿ ಮಲಗಿದ್ದ ಸುಮಾರು25 ರಿಂದ 30 ವರ್ಷ ವಯಸ್ಸಿನ ಪುರುಷನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ಅವರು ಇದೆ ಸೆಪ್ಟೆಂಬರ್‌ 07 ರಂದು ಮೃತಪಟ್ಟಿದ್ದಾರೆ. ಇದೀಗ ಅವರ ಗುರುತು ಪತ್ತೆಗಾಗಿ ಪೊಲೀಸರು ಪ್ರಕಟಣೆಯನ್ನು ನೀಡಿದ್ದಾರೆ. 

 

ಪೊಲೀಸ್‌ ಪ್ರಕಟಣೆ shivamogga police

ಮೃತ ವ್ಯಕ್ತಿಯು ಆಸ್ಪತ್ರೆಗೆ ದಾಖಲಾದ ವೇಳೆ ತನ್ನ ಹೆಸರು ಮನೋಜ್ ಎಂದು ತಿಳಿಸಿರುತ್ತಾನೆ. ಮೃತನು ಸುಮಾರು 5.10 ಅಡಿ ಎತ್ತರ, ಕೋಲುಮುಖ, ಗೋಧಿ ಮೈ ಬಣ್ಣ, ಸಾಧಾರಣ ಮೈ ಕಟ್ಟು, ಬಲಗೈ ಮೇಲೆ ದಿವ್ಯಾ ಎಂಬ ಹಚ್ಚೆ ಗುರುತು, 3 ಇಂಚು ಉದ್ದದ ಕಪ್ಪು ಕೂದಲು ಮತ್ತು 2 ಇಂಚು ಉದ್ದ ಕಪ್ಪು ಗಡ್ಡ, ಮೀಸೆ ಬಿಟ್ಟಿದ್ದಾನೆ.

 ನೀಲಿ ಬಣ್ಣದ ಬಿಳಿ ಚುಕ್ಕೆಗಳಿರುವ ತುಂಬು ತೋಳಿನ ಶರ್ಟ್, ಕಪ್ಪು ಮತ್ತು ಬಿಳಿ ಬಣ್ಣದ ತುಂಬು ತೋಳಿನ ಟೀ ಶರ್ಟ್ ಮತ್ತು ಕಂದು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. 

ದೊಡ್ಡಪೇಟೆ ಪೋಲಿಸ್ ಠಾಣೆ dodapete police station 

 ಈ ವ್ಯಕ್ತಿಯ ವಾರಸುದಾರರು ಯಾರದರು ಇದ್ದಲ್ಲಿ ದೊಡ್ಡಪೇಟೆ ಪೋಲಿಸ್ ಠಾಣೆ ದೂ.ಸಂ. 08182 261414 ಅಥವಾ ಮೊ.ನಂ. 9611761255 ನ್ನು ಸಂಪರ್ಕಿಸಿ ಮಾಹಿತಿಯನ್ನು ನೀಡುವಂತೆ ಶಿವಮೊಗ್ಗ ದೊಡ್ಡಪೇಟೆ ಪೋಲಿಸ್ ಠಾಣೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

shimoga hindu mahasaba Ganapati | ಗಣೇಶಪ್ಪರ ಮನೆಯಿಂದ ಬಂದ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ | ಏನಿದೆ ಈ ಸಲ ವಿಶೇಷ | ವಿಸರ್ಜನೆ ಯಾವಾಗ?

naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ 

Share This Article
Leave a Comment

Leave a Reply

Your email address will not be published. Required fields are marked *