ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಅಬ್ಬಲಗೆರೆ ಸಮೀಪ ಈಶ್ವರವನದ ಎದುರಿನ ತುಂಗಾ ಚಾನೆಲ್ನಲ್ಲಿ (Tunga Channel) ಈಜಲು ತೆರಳಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಯೊಬ್ಬ ನೀರುಪಾಲಾಗಿರುವ ಘಟನೆ ಇಂದು ಸಂಜೆ ನಡೆದಿದೆ. ಘಟನೆಯಲ್ಲಿ ನೀರುಪಾಲಾಗಿರುವ ಬಾಲಕನಿಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಸ್ಥಳೀಯರು ಅಗ್ನಿಶಾಮಕ ದಳ ಸಿಬ್ಬಂದಿಗೆ ನೆರವಾಗುತ್ತಿದ್ದಾರೆ. ನೀರುಪಾಲಾಗಿರುವ ಬಾಲಕನನ್ನು ಬೊಮ್ಮನಕಟ್ಟೆ ನಿವಾಸಿ ಕೃಷ್ಣ ಎನ್ನಲಾಗಿದೆ.
ಸ್ಥಳೀಯ ನಿವಾಸಿ ಮಂಜುನಾಥ್ ಎನ್ನುವವರು ಮಲೆನಾಡು ಟುಡೆಗೆ ನೀಡಿದ ಮಾಹಿತಿ ಪ್ರಕಾರ, ಇವತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇತ್ತು. ಇಲ್ಲಿಯೇ ಗೋಪಾಳದಲ್ಲಿ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದ ಆರು ಜನ ವಿದ್ಯಾರ್ಥಿಗಳು ಬೊಮ್ಮನಕಟ್ಟೆಯಿಂದ ಅಬ್ಬಲಗೆರೆ ಸಮೀಪದಲ್ಲಿ ಹರಿಯುವ ತುಂಗಾ ಚಾನಲ್ಗೆ ಈಜಲೆಂದೆ ಬಂದಿದ್ದಾರೆ.
ಈ ನಡುವೆ ಆರು ವಿದ್ಯಾರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿ ಮೊದಲು ಇಬ್ಬರು ವಿದ್ಯಾರ್ಥಿಗಳು ಬಟ್ಟೆ ಕಳಚಿ ಈಜಲೆಂದು ನೀರಿಗೆ ಹಾರಿದ್ದಾರೆ. ಆದರೆ ನೀರಿನ ರಭಸ ಹೆಚ್ಚಾಗಿದ್ದರಿಂದ ಇಬ್ಬರಿಗೂ ಈಜಲು ನಿಯಂತ್ರಣ ಸಾಕಾಗದೇ ಕೈ ಸೋತಿದ್ದಾರೆ. ಇಬ್ಬರನ್ನು ಸಹ ನೀರು ಎಳೆದುಕೊಂಡು ಹೋಗಲು ಆರಂಭಿಸಿದ್ದಾರೆ. ಇದೇ ವೇಳೆ ಅಲ್ಲಿಯೇ ಎತ್ತಿಗೆ ಮೈ ತೊಳೆಯುತ್ತಿದ್ದವರು ಎತ್ತಿನ ಹಗ್ಗವನ್ನೇ ಎಳೆದು ವಿದ್ಯಾರ್ಥಿಗಳತ್ತ ಎಸೆದು ಬಿಸಾಡಿದ್ದಾರೆ. ಇದನ್ನ ಹಿಡಿದ ಓರ್ವ ವಿದ್ಯಾರ್ಥಿಯನ್ನ ಅಲ್ಲಿದ್ದವರು ಎಳೆದು ದಡಕ್ಕೆ ಹಾಕಿದ್ದಾರೆ.
ಆದರೆ ಇನ್ನೊಬ್ಬ ವಿದ್ಯಾರ್ಥಿ ಕೃಷ್ಣ ಎಂಬಾತನಿಗೆ ಎಸೆದ ಹಗ್ಗ ಕೈಗೆ ಸಿಗಲಿಲ್ಲ. ಅಲ್ಲಿಯೇ ಇದ್ದ ಕರೆಂಟ್ ಕಂಬವನ್ನ ಹಿಡಿಯಲು ಮುಂದಾದ ವಿದ್ಯಾರ್ಥಿಗೆ ಕಂಬಕ್ಕೆ ಸುತ್ತಿದ್ದ ಹೂವಿನ ದಾರ ಸಿಕ್ಕಿದೆ. ಅದನ್ನ ಹಿಡಿದಿನಾದರೂ, ನೀರಿನ ಫೋರ್ಸ್ಗೆ ಆತ ಕೊಚ್ಚಿಕೊಂಡು ಹೋಗಿದ್ದಾನೆ. ಸುಮಾರೂ 100 -150 ಅಡಿ ದೂರ ಹೋಗುವರೆಗೂ ಸ್ಥಳೀಯರು ವಿದ್ಯಾರ್ಥಿಯನ್ನ ಕಾಪಾಡುವ ಪ್ರಯತ್ನ ಮಾಡಿದ್ದಾರೆ. ಆನಂತರ ಅಗ್ನಿಶಾಮಕ ದಳಕ್ಕೆ ಕರೆಸಿಕೊಂಡಿದ್ದಾರೆ. ಸದ್ಯ ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
