1.45 ಕೋಟಿ ಲೋನ್​ ಫ್ರೀ, ವಾಪಸ್ ಕಟ್ಟಂಗಿಲ್ಲ ಎಂಬ ಬಾಯಿಮಾತು ನಂಬಿದ್ದಕ್ಕೆ ಆಗಿದ್ದು ಜೀವ ಸಂಕಟ

ಹಂಚಿಕೊಳ್ಳಿ
WhatsApp Facebook X Telegram
shivamogga crime news iamge
shivamogga police

Shivamogga Businessman / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸಮಾಜ ಕಲ್ಯಾಣ ಇಲಾಖೆಯ ಸಬ್ಸಿಡಿ ಯೋಜನೆಯ ಅಡಿಯಲ್ಲಿ ಸರ್ಕಾರಿ ಸಾಲ ಮಂಜೂರು ಮಾಡಿಸಿಕೊಡುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ ಬರೋಬ್ಬರಿ 7.50 ಲಕ್ಷ ರೂಪಾಯಿ ಪಡೆದು ವಂಚಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ತುಮಕೂರು ಮೂಲದ ವ್ಯಕ್ತಿ ಈ ವಂಚನೆ ಎಸಗಿದ್ದು, ಈತ ಆರಂಭದಲ್ಲಿ, ತಾನೊಬ್ಬ ಮಾಜಿ ಸಚಿವರೊಬ್ಬರ ಆಪ್ತ ಕಾರ್ಯದರ್ಶಿ ಎಂದು ಉದ್ಯಮಿಗೆ ಪರಿಚಯಿಸಿಕೊಂಡಿದ್ದ. ಅಲ್ಲದೆ, ತನಗೆ ರಾಜಕೀಯದ ಹಿರಿಯ ನಾಯಕರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ನಿಕಟ ಸಂಪರ್ಕ ಇದೆ , ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಬ್ಸಿಡಿ ಯೋಜನೆಯಡಿ ಬರೋಬ್ಬರಿ 1.45 ಕೋಟಿ ರೂಪಾಯಿ ಸಾಲ ಮಂಜೂರು ಮಾಡಿಸಿಕೊಡುತ್ತೇನೆ ಅಂತಾ ಉದ್ಯಮಿಯನ್ನು ನಂಬಿಸಿದ್ದ. ಅಲ್ಲದೆ ಸಾಲದ ಹಣ ಮರಳಿ ಸರ್ಕಾರಕ್ಕೆ ಮರುಪಾವತಿ ಮಾಡುವ ಅಗತ್ಯವು ಇಲ್ಲ ಎಂದಿದ್ದ. ಉದ್ಯಮಿ ಸಹ ಈತನ ಮಾತು ನಂಬಿದ್ದರು.

ಇನ್ನೂ ನಂಬಿಕೆಯನ್ನು ತನ್ನೊಳಗೆ ಡಿಪಾಸಿಟ್ ಮಾಡಿಸಿಕೊಂಡ ಆರೋಪಿ, ಸಾಲ ಮಂಜೂರಾತಿಗಾಗಿ ಅಧಿಕಾರಿಗಳಿಗೆ ಲಂಚ ನೀಡಬೇಕು ಎಂದು ಸುಳ್ಳು ಹೇಳಿ ಆಗಾಗ ಅಂತಾ ಒಟ್ಟಾರೆ 7.50 ಲಕ್ಷ ರೂಪಾಯಿ ಹಣವನ್ನು ಉದ್ಯಮಿಯಿಂದ ಪಡೆದುಕೊಂಡಿದ್ದ. ಆನಂತರ ಸಾಲ ಬಂದು ಅಕೌಂಟ್​ಗೆ ಜಮೆ ಆಗುತ್ತೆ ಎಂದ ಆಸಾಮಿ ಫೋನ್​ ರಿಸೀವ್ ಮಾಡುವುದನ್ನೆ ಬಿಟ್ಟಿದ್ದ. ಹೀಗಾಗಿ ಅನುಮಾನಗೊಂಡು ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಕೇಸ್ ತನಿಖೆ ನಡೆಸ್ತಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor