ಹುಲ್ಲಿನ ಬಣವೆಯಲ್ಲಿದ್ದ 10 ಅಡಿ ಉದ್ದದ, 15 ಕೆಜಿ ತೂಕದ ಬೃಹತ್ ಹೆಬ್ಬಾವು ರಕ್ಷಣೆ!

ಹಂಚಿಕೊಳ್ಳಿ
WhatsApp Facebook X Telegram
Python Rescued in Bhadravathi
Python Rescued in Bhadravathi

Python Rescued ಭದ್ರಾವತಿ : ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ರೈತರೊಬ್ಬರ ಮನೆಯ ಹುಲ್ಲಿನ ಬಣವೆಯಲ್ಲಿ ಅಡಗಿ ಕುಳಿತಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಯಶಸ್ವಿಯಾಗಿ ರಕ್ಷಿಸಿ, ಕಾಡಿಗೆ ಬಿಡಲಾಗಿದೆ.  ನ ಕೂಡ್ಲಿಗೆರೆಯ ನಿವಾಸಿಯಾದ ರಾಜಣ್ಣ ಎಂಬುವವರ ಮನೆಯ ಆವರಣದಲ್ಲಿರುವ ಹುಲ್ಲಿನ ಬಣವೆಯಲ್ಲಿ ಈ ಹಾವು ಸೇರಿಕೊಂಡಿತ್ತು. 

ಶಿವಮೊಗ್ಗ: ಸ್ವಂತ ಮಗ, ಸ್ನೇಹಿತರಿಂದಲೇ ಮನೆಯಲ್ಲಿ ಕಳ್ಳತನ? ಪೊಲೀಸರಿಗೆ ದೂರು ನೀಡಿದ ತಂದೆ!

ಇದರಿಂದ ಆತಂಕಗೊಂಡ ಕುಟುಂಬಸ್ಥರು ತಕ್ಷಣವೇ ಭದ್ರಾವತಿಯ ಉರಗ ಸಂರಕ್ಷಕರಾದ ಬೆನ್ಸನ್ ಸುರಗಿತೋಪು ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಸ್ನೇಕ್ ಬೆನ್ಸನ್ ಅವರು, ಅತ್ಯಂತ ಕಾರ್ಯಾಚರಣೆ ನಡೆಸಿ ಹುಲ್ಲಿನ ಬಣವೆಯಲ್ಲಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ರಕ್ಷಣೆ ಮಾಡಲಾದ ಈ ಹೆಬ್ಬಾವು ಸುಮಾರು 10 ಅಡಿ ಉದ್ದವಿದ್ದು, ಬರೋಬ್ಬರಿ 15 ಕೆಜಿ ತೂಕವಿತ್ತು ಎಂದು ತಿಳಿದುಬಂದಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor