ಶಾಸಕರ ಖರೀದಿ ವಿವಾದ: ಅವರ್ಯಾರು ಸಹ ಪಕ್ಷ ಕಟ್ಟೋಗೆ ಬಿಜೆಪಿಗೆ ಬಂದಿರಲಿಲ್ಲ: ಕೆ.ಎಸ್. ಈಶ್ವರಪ್ಪ 

ಹಂಚಿಕೊಳ್ಳಿ
WhatsApp Facebook X Telegram
KS Eshwarappa Clarifies on 17 MLA Bribery Statement
KS Eshwarappa Clarifies on 17 MLA Bribery Statement

KS Eshwarappa ಶಿವಮೊಗ್ಗ: ಹಣ ಪಡೆದು 17 ಜನ ಶಾಸಕರು ಬಿಜೆಪಿಗೆ ಬಂದಿದ್ದರು ಎಂಬ ತಮ್ಮದೇ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸುತ್ತಿದ್ದಂತೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಇಂದು ಶಿವಮೊಗ್ಗದಲ್ಲಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ತಾವು ಯಾವುದೇ ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಈ ಮಾತು ಹೇಳಿಲ್ಲ, ಬದಲಿಗೆ ಪ್ರಸ್ತುತ ರಾಜಕೀಯದಲ್ಲಿ ನಡೆಯುತ್ತಿರುವ ಹಣದ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಇವತ್ತು ಏನೆಲ್ಲಾ ನಡೀತು ಇ-ಪೇಪರ್​​ ಓದಿ

ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ನಡೆದ ರಾಜ್ಯಸಭೆ ಹಾಗೂ ಎಂಎಲ್‌ಸಿ ಚುನಾವಣೆಯ ಅಡ್ಡಮತದಾನದ ಕುರಿತು ನಾನು ಮಾತನಾಡಿದ್ದೆ. ಈ ವೇಳೆ ಬಿ.ಸಿ. ಪಾಟೀಲ್, ಅಥವಾ ಶಿವರಾಂ ಹೆಬ್ಬಾರ್ ಅವರ ಹೆಸರನ್ನು ನಾನು ಎಲ್ಲೂ ಪ್ರಸ್ತಾಪಿಸಿಲ್ಲ. ಆದರೆ, ಕೆಲವರು ನನ್ನ ಹೇಳಿಕೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿ ರಾಜಕೀಯ ಮಾಡುತ್ತಿದ್ದಾರೆ. ಅಂದು ಆ ಶಾಸಕರು ಬಂದಿದ್ದಕ್ಕೇ ಬಿಜೆಪಿ ಅಧಿಕಾರಕ್ಕೆ ಬಂದಿತು ಎಂದು ಕೆಲವರು ವಾದಿಸುತ್ತಿದ್ದಾರೆ; ಆದರೆ ಅವರ್ಯಾರೂ ಪಕ್ಷ ಕಟ್ಟುವ ಉದ್ದೇಶದಿಂದ ಬಿಜೆಪಿಗೆ ಬಂದಿರಲಿಲ್ಲ ಎಂದು ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಸರ್ಕಾರದ ನಡೆಗೂ ಎಚ್ಚರಿಕೆ ನೀಡಿದ ಅವರು, ಇತ್ತೀಚಿನ ಎಂಎಲ್‌ಸಿ ಚುನಾವಣೆಯಲ್ಲಿ ಇದೇ ಕಾಂಗ್ರೆಸ್ ಸರ್ಕಾರ ಕೂಡ ಶಾಸಕರನ್ನು ಖರೀದಿಸಿರುವುದುನಿಜ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ತಕ್ಷಣ ಈ ಕುದುರೆ ವ್ಯಾಪಾರವನ್ನು ಗಮನಿಸಬೇಕಿದೆ. ರಾಜಕೀಯದಲ್ಲಿ ಇದೇ ರೀತಿ ಶಾಸಕರ ಖರೀದಿ ಪ್ರಕ್ರಿಯೆ ಮುಂದುವರಿದರೆ, ರಾಜ್ಯದ ಈಗಿನ ಕಾಂಗ್ರೆಸ್ ಸರ್ಕಾರವೂ ಪತನವಾಗುವುದು ನೂರಕ್ಕೆ ನೂರು ಗ್ಯಾರಂಟಿ ಎಂದು ಭವಿಷ್ಯ ನುಡಿದರು.

KS Eshwarappa Clarifies on 17 MLA Bribery Statement

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor