KS Eshwarappa ಶಿವಮೊಗ್ಗ : ಅಯೋಧ್ಯೆ ರಾಮಮಂದಿರದಲ್ಲಿ ಭಕ್ತರು ನೀಡಿದ್ದ ದೇಣಿಗೆ ಹಣ ಹಾಗೂ ಆಭರಣಗಳು ಕಳ್ಳತನವಾಗಿರುವ ಆರೋಪ ದೇಶದಾದ್ಯಂತ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು, ಕುಟುಂಬದಲ್ಲಿ ಒಬ್ಬರು ತಪ್ಪು ಮಾಡಿದರೆ ಎಲ್ಲರನ್ನೂ ದೂಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಡ್ಡಮತದಾನ! ಶಿವಮೊಗ್ಗದ ಇಬ್ಬರು ಶಾಸಕರಿಂದಲೇ ಕಾಂಗ್ರೆಸ್ಗೆ ವೋಟ್ : ಆರ್ಎಂ ಮಂಜುನಾಥ ಗೌಡ
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಸೂಕ್ಷ್ಮ ವಿಚಾರದಲ್ಲಿ ಅನೇಕರು ಆರ್‌ಎಸ್‌ಎಸ್ ಹಾಗೂ ಬಿಜೆಪಿಯನ್ನು ಎಳೆದು ತರುತ್ತಿದ್ದಾರೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ರಾಜಕಾರಣ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಆದರೆ, ತಪ್ಪು ಯಾರೇ ಮಾಡಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಲೇಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವುದು ಪ್ರಪಂಚದಾದ್ಯಂತ ಇರುವ ರಾಮ ಭಕ್ತರಿಗೆ ತೀವ್ರ ಆಘಾತವನ್ನುಂಟು ಮಾಡಿದೆ ಮತ್ತು ಇದರಿಂದ ನಮಗೆಲ್ಲರಿಗೂ ಬಹಳ ನೋವಾಗಿದೆ ಎಂದು ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು. 500 ವರ್ಷಗಳ ಹಿಂದೆ ಬಾಬರ್ ಬಾಬರಿ ಮಸೀದಿ ಕಟ್ಟಿದ್ದ ಜಾಗದಲ್ಲಿ ಭವ್ಯವಾದ ರಾಮಮಂದಿರವನ್ನು ನಿರ್ಮಿಸಲಾಗಿದ್ದು, ಇದಕ್ಕೆ ಸರ್ಕಾರದ ಯಾವುದೇ ಹಣವನ್ನು ಬಳಸದೆ ರಾಮ ಭಕ್ತರೇ ಸಾವಿರಾರು ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದರು.
ಪ್ರಸ್ತುತ ಮಂದಿರದಲ್ಲಿ ಸಿಸಿ ಟಿವಿ ಕ್ಯಾಮರಾವನ್ನು ತಿರುಚಿ, ಸುಮಾರು 200 ಬೆಳ್ಳಿ ಇಟ್ಟಿಗೆಗಳು ಹಾಗೂ ಬಂಗಾರಗಳನ್ನು ಕಳುವು ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಆಡಳಿತ ವೈಫಲ್ಯದಿಂದಲೇ ಇಷ್ಟರ ಮಟ್ಟಿಗೆ ಕಳ್ಳತನ ನಡೆದಿದ್ದು, ಈ ಲೂಟಿ ಪ್ರಕರಣವು ರಾಮ ಭಕ್ತರಿಗೆ ಹಾಗೂ ಸರ್ಕಾರಕ್ಕೆ ದೊಡ್ಡ ಎಚ್ಚರಿಕೆಯನ್ನು ನೀಡಿದೆ. ಕಳ್ಳತನದ ಈ ಘಟನೆಯನ್ನು ಕೇಂದ್ರ ಸರ್ಕಾರ ಹಗುರವಾಗಿ ತೆಗೆದುಕೊಂಡಿಲ್ಲ ಎಂದ ಅವರು, ಲೂಟಿಕೋರರನ್ನು ತಕ್ಷಣವೇ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ರಾಮಮಂದಿರ ಕಟ್ಟುವ ಬದಲು ಶಾಲೆ ಆಸ್ಪತ್ರೆ ಕಟ್ಟಬಹುದಿತ್ತು ಎಂದು ರಾಮಮಂದಿರಕ್ಕೆ ವಿರೋಧ ವ್ಯಕ್ತಪಡಿಸಿದವರು ಸಹ ರಾಮ ಮಂದಿರದ ಲೂಟಿ ಬಗ್ಗೆ ಮಾತನಾಡುತ್ತಿದ್ದಾರೆ. ಇದರ ಮೂಲಕ ಅವರು ರಾಮ ಮಂದಿರದ ಬಗ್ಗೆ ಮಾತನಾಡುತ್ತಿರುವುದು ನನಗೆ ಸಂತೋಷ ತಂದಿದೆ ಎಂದರು.
