ವಾಜಪೇಯಿ ಲೇಔಟ್ ರಿಂಗ್ ರಸ್ತೆ ಕಾಮಗಾರಿಗೆ ಚಾಲನೆ: 1000 ಫ್ಲಾಟ್, 2 ಮಾಲ್ ನಿರ್ಮಾಣಕ್ಕೆ ಸೂಡಾ ಪ್ಲಾನ್

ಹಂಚಿಕೊಳ್ಳಿ
WhatsApp Facebook X Telegram
SUDA Starts Vajpayee Layout Ring Road
SUDA Starts Vajpayee Layout Ring Road

SUDA ಶಿವಮೊಗ್ಗ: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಿಂದ ಗೆಜ್ಜೇನಹಳ್ಳಿ-ಸೋಮಿನಕೊಪ್ಪ ರಸ್ತೆಗೆ ಲಿಂಕ್ ಕಲ್ಪಿಸುವ ರಿಂಗ್ ರಸ್ತೆ ಕಾಮಗಾರಿಗೆ ಗುರುವಾರ ಚಾಲನೆ ನೀಡಲಾಗಿದೆ. 

ಶಿವಮೊಗ್ಗ: ವಿನೋಬನಗರದ ಮನೆ ಕಳವು ಪ್ರಕರಣದ ಆರೋಪಿ ಬಂಧನ; ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಶ

3.70 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 1200 ಮೀಟರ್ ಉದ್ದ ಹಾಗೂ 60 ಮೀಟರ್ ಅಗಲದ ಈ ಬೃಹತ್ ರಸ್ತೆ ನಿರ್ಮಾಣವಾಗುತ್ತಿದ್ದು, ನಗರದ ಸುಗಮ ಸಂಚಾರಕ್ಕೆ ಹೊಸ ವೇಗ ನೀಡಲಿದೆ ಎಂದು ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ತಿಳಿಸಿದ್ದಾ 34 ಕಿಲೋಮೀಟರ್ ಉದ್ದದ ರಿಂಗ್ ರಸ್ತೆ ನಿರ್ಮಾಣಕ್ಕೆ ಮಾಸ್ಟರ್ ಪ್ಲಾನ್ ಸಿದ್ಧವಾಗಿದ್ದು, ಹಂತ ಹಂತವಾಗಿ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. 

ನಗರದಲ್ಲಿ ನಿವೇಶನಗಳ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಮಧ್ಯಮ ವರ್ಗದವರಿಗಾಗಿ ಊರಗಡೂರಿನ 4 ಎಕರೆ ಜಾಗದಲ್ಲಿ 1, 2 ಮತ್ತು 3 ಬಿಹೆಚ್‌ಕೆಯ ಸುಮಾರು 1000 ಫ್ಲಾಟ್‌ಗಳ ಅಪಾರ್ಟ್‌ಮೆಂಟ್ ನಿರ್ಮಿಸುವ ವಿನೂತನ ಯೋಜನೆ ಸಿದ್ಧವಾಗಿದೆ. ಈ ಯೋಜನೆಗೆ ಇನ್ನು 15-20 ದಿನಗಳಲ್ಲಿ ಆಡಳಿತಾತ್ಮಕ ಮಂಜೂರಾತಿ ಸಿಗಲಿದ್ದು, ತಕ್ಷಣವೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಇದರೊಂದಿಗೆ ಜೆ.ಹೆಚ್. ಪಟೇಲ್ ಬಡಾವಣೆಯ ಒಂದೂಕಾಲು ಎಕರೆ ಪ್ರದೇಶದಲ್ಲೂ ಖಾಸಗಿ ಅಪಾರ್ಟ್‌ಮೆಂಟ್‌ಗಳ ಮಾದರಿಯಲ್ಲಿಯೇ ಈಜುಕೊಳ (ಸ್ವಿಮ್ಮಿಂಗ್ ಪೂಲ್), ಪಾರ್ಕ್, ಕ್ಲಬ್ ಹೌಸ್ ಹಾಗೂ ಸಭಾಂಗಣ ಒಳಗೊಂಡ ಸುಸಜ್ಜಿತ ಹೌಸಿಂಗ್ ಪ್ರಾಜೆಕ್ಟ್ ಬರಲಿದೆ.

ಗೋಪಾಲಗೌಡ ಹಾಗೂ ಸೋಮಿನಕೊಪ್ಪದಲ್ಲಿ ಹೈಟೆಕ್ ಮಾಲ್‌ಗಳು

ನಗರದ ವ್ಯಾಪಾರ ಮತ್ತು ನಾಗರಿಕರ ಅನುಕೂಲಕ್ಕಾಗಿ ಗೋಪಾಲಗೌಡ ಬಡಾವಣೆಯ ವಿವೇಕಾನಂದ ಲೇಔಟ್‌ನ ಒಂದೂಕಾಲು ಎಕರೆ ಜಾಗದಲ್ಲಿ ಒಂದು ಮಾಲ್ ಹಾಗೂ ಸೋಮಿನಕೊಪ್ಪದ 200 ಮೀಟರ್ ರಸ್ತೆಯಲ್ಲಿ ಮತ್ತೊಂದು ಮಾಲ್ ಸೇರಿದಂತೆ ಒಟ್ಟು 2 ಹೈಟೆಕ್ ಮಾಲ್‌ಗಳನ್ನು ಸೂಡಾ ನಿರ್ಮಿಸಲಿದೆ. ಇದರೊಂದಿಗೆ ವಾಜಪೇಯಿ ಲೇಔಟ್‌ನಲ್ಲಿಯೇ ಸೂಡಾದ ಸ್ವಂತ ಕಚೇರಿ ಕಟ್ಟಡ ನಿರ್ಮಾಣವಾಗಲಿದೆ. ಇನ್ನು ನಗರದ ಸೌಂದರ್ಯೀಕರಣಕ್ಕಾಗಿ 100 ಉದ್ಯಾನವನಗಳನ್ನು (ಪಾರ್ಕ್) ನವೀಕರಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ ವಾಕಿಂಗ್ ಪಾತ್ ಹಾಗೂ ಹಸಿರೀಕರಣದೊಂದಿಗೆ 50 ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.

12 ಎಕರೆಯಲ್ಲಿ ಸುಸಜ್ಜಿತ ಕ್ರೀಡಾಂಗಣ ಹಾಗೂ ಫುಟ್‌ಬಾಲ್ ಸ್ಟೇಡಿಯಂ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಸೂಡಾ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ನಿವೇಶನಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರಲ್ಲದೆ, ನಗರಾಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕೆಂದು ಮನವಿ ಮಾಡಿದರು. ನಗರದಲ್ಲಿ ಕ್ರೀಡಾ ಉತ್ತೇಜನಕ್ಕಾಗಿ 12 ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಇದನ್ನು ಇನ್ನಷ್ಟು ವೇಗಗೊಳಿಸಲಾಗುವುದು. ಜೊತೆಗೆ ನಗರಕ್ಕೆ ಪ್ರತ್ಯೇಕ ಫುಟ್‌ಬಾಲ್ ಕ್ರೀಡಾಂಗಣ ಮಂಜೂರು ಮಾಡುವ ಕುರಿತು ಕ್ರೀಡಾ ಸಚಿವರೊಂದಿಗೆ ಸಮಾಲೋಚನೆ ನಡೆಸುವುದಾಗಿ ಶಾಸಕರು ಭರವಸೆ ನೀಡಿದರು.

SUDA Starts Vajpayee Layout Ring Road 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor