ಇಂದಿನ ರಾಶಿ ಭವಿಷ್ಯ ವನ್ನು ಗಮನಿಸುವುದಾದರೆ, ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಮಾಸದ, ಕೃಷ್ಣ ಪಕ್ಷದ ಏಕಾದಶಿ ತಿಥಿಯು ಮಧ್ಯಾಹ್ನ 1.47 ರವರೆಗೆ ಇರುತ್ತದೆ, ತದನಂತರ ದ್ವಾದಶಿ ತಿಥಿ ಆರಂಭವಾಗುತ್ತದೆ. ಮೂಲ ನಕ್ಷತ್ರವು ಮಧ್ಯಾಹ್ನ 3.55 ರವರೆಗೆ ಇದ್ದು, ಆ ಬಳಿಕ ಪೂರ್ವಾಷಾಢ ನಕ್ಷತ್ರ ಇರಲಿದೆ. ಅಮೃತ ಗಳಿಗೆ ಬೆಳಿಗ್ಗೆ 8.50 ರಿಂದ 10.34 ರವರೆಗೆ ಇವೆ. ರಾಹುಕಾಲ ಬೆಳಿಗ್ಗೆ 10.30 ರಿಂದ 12.00 ರವರೆಗೆ ಮತ್ತು ಯಮಗಂಡ ಕಾಲ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಹೊಸನಗರ ತಾಲ್ಲೂಕಿನಲ್ಲಿ ಖಾಸಗಿ ಬಸ್ ಮತ್ತು ಒಮಿನಿ ನಡುವೆ ಡಿಕ್ಕಿ
ಇಂದಿನ ರಾಶಿ ಭವಿಷ್ಯ
ಮೇಷ / ಅತಿಯಾದ ಖರ್ಚು ಮತ್ತು ಆಯಾಸದ ದಿನ, ಬಂಧುಗಳೊಂದಿಗೆ ವೈಮನಸ್ಸು ಹಾಗೂ ಆರ್ಥಿಕ ಸಂಕಷ್ಟ. ಕುಟುಂಬದಲ್ಲಿ ಒತ್ತಡ, ಕೆಲಸಗಳಲ್ಲಿ ಅಡೆತಡೆಗಳಿದ್ದರೂ ವ್ಯಾಪಾರದಲ್ಲಿ ಅಲ್ಪ ಲಾಭ ಮತ್ತು ಉದ್ಯೋಗದಲ್ಲಿ ಹೊಸ ಜವಾಬ್ದಾರಿ.
ವೃಷಭ / ಅಂದುಕೊಂಡ ಕೆಲಸ ಸಾಗದು, ಹಠಾತ್ ಪ್ರಯಾಣ, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಆಪ್ತರೊಂದಿಗೆ ಭಿನ್ನಾಭಿಪ್ರಾಯ, ವ್ಯಾಪಾರದಲ್ಲಿ ಸಾಮಾನ್ಯದಿನ ಮತ್ತು ಉದ್ಯೋಗದಲ್ಲಿ ಕೆಲಸ ವಿಪರೀತ ಬರಲಿದೆ.
ಮಿಥುನ / ಹೊಸ ಪರಿಚಯ, ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ, ಬಾಂಧವ್ಯ ವೃದ್ಧಿಯಾಗಲಿದೆ.ಭೂ ವಿವಾದಗಳಿಗೆ ಪರಿಹಾರ ದೊರೆಯಲಿದೆ, ದೈವ ದರ್ಶನ. ವ್ಯಾಪಾರ ಸುಗಮವಾಗಿ ಸಾಗಲಿದೆ. ಉದ್ಯೋಗದ ಸಮಸ್ಯೆಗಳು ಬಗೆಹರಿಯಲಿವೆ.
ದ್ವಾದಶ ರಾಶಿಗಳ ಇಂದಿನ ಭವಿಷ್ಯ: ಯಾರಿಗೆ ಶುಭ? ಯಾರಿಗೆ ಅಶುಭ? ಮಂಗಳವಾರದ ಸಂಪೂರ್ಣ ವಿವರ
ಕರ್ಕಾಟಕ / ಸಾಲದ ಬಾಧೆ ತಗ್ಗಲಿದೆ, ಹಿತೈಷಿಗಳ ಸಲಹೆ ಪಾಲಿಸಿ ಮತ್ತು ಬಾಲ್ಯ ಸ್ನೇಹಿತರಿಂದ ಶುಭ ಸುದ್ದಿ. ವಾಹನ ಯೋಗ, ವ್ಯಾಪಾರದಲ್ಲಿ ಮುನ್ನಡೆ ಮತ್ತು ಉದ್ಯೋಗದಲ್ಲಿ ಶುಭದಿನ.
ಸಿಂಹ / ಕೆಲಸ ಕಾರ್ಯಗಳಲ್ಲಿ ಅಡೆತಡೆ, ಆರ್ಥಿಕ ಮುಗ್ಗಟ್ಟು ಮನಸ್ತಾಪ, ಶ್ರಮ ಹೆಚ್ಚಾಗಲಿದ್ದು ವ್ಯಾಪಾರ ಮಂದಗತಿಯಲ್ಲಿ ಸಾಗಲಿದೆ ಹಾಗೂ ಉದ್ಯೋಗದಲ್ಲಿ ಒತ್ತಡ.
ಕನ್ಯಾ / ವ್ಯವಹಾರಗಳಲ್ಲಿ ಒತ್ತಡ ಮತ್ತು ಬಂಧುಗಳೊಂದಿಗೆ ಕಲಹ . ಪಟ್ಟ ಶ್ರಮಕ್ಕೆ ತಕ್ಕ ಫಲ ಸಿಗದಿರಬಹುದು. ಆಸ್ತಿ ವಿವಾದ, ವ್ಯಾಪಾರದಲ್ಲಿ ಏರಿಳಿತ, ಉದ್ಯೋಗದಲ್ಲಿ ಹೊಸ ಹೊಣೆಗಾರಿಕೆ.
ತುಲಾ / ಅಂದುಕೊಂಡ ಕೆಲಸಗಳಲ್ಲಿ ಜಯ, ಆರ್ಥಿಕ ಸ್ಥಿತಿ ಆಶಾದಾಯಕವಾಗಿರುತ್ತದೆ ಮತ್ತು ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಶುಭ ಸುದ್ದಿ, ಸ್ಥಿರಾಸ್ತಿ ವೃದ್ಧಿ, ನೂತನ ಉದ್ಯೋಗ , ವ್ಯಾಪಾರ ಚೇತರಿಸಿಕೊಳ್ಳಲಿದೆ. ಉದ್ಯೋಗಸ್ಥರಿಗೆ ಅನುಕೂಲಕರ ದಿನವಾಗಲಿದೆ.
ವೃಶ್ಚಿಕ / ಭಿನ್ನಾಭಿಪ್ರಾಯ, ಹಣಕಾಸಿನ ತೊಂದರೆ ಮತ್ತು ಸಾಲದ ಪ್ರಯತ್ನ, ಸಮಸ್ಯೆ ಮತ್ತು ಕೆಲಸಗಳಲ್ಲಿ ವಿಘ್ನ ವ್ಯಾಪಾರ ಸಾಧಾರಣವಾಗಿರಲಿದೆ ಮತ್ತು ಉದ್ಯೋಗದಲ್ಲಿ ಒತ್ತಡವಿರುತ್ತದೆ.

ಧನುಸ್ಸು / ಶುಭ ಸಮಾರಂಭಗಳಿಗೆ ಆಹ್ವಾನ, ಪ್ರತಿಕೂಲ ಪರಿಸ್ಥಿತಿಗಳಲ್ಲಿ ಬದಲಾವಣೆ ಮತ್ತು ಹಳೆಯ ಬಾಕಿ ವಸೂಲಾಗಲಿದೆ, ವ್ಯವಹಾರ ಸುಗಮವಾಗಿ ಸಾಗಲಿದ್ದು ವ್ಯಾಪಾರದಲ್ಲಿ ಲಾಭ ಮತ್ತು ಉದ್ಯೋಗದಲ್ಲಿ ಒತ್ತಡ.
ಮಕರ / ಮಿತ್ರರೊಂದಿಗೆ ಜಗಳ ಮತ್ತು ಸಾಲದಾತರ ಒತ್ತಡ, ಕೆಲಸ ಮುಂದೂಡುವಿರಿ, ದೇವಾಲಯಗಳಿಗೆ ಭೇಟಿ ಅನಾರೋಗ್ಯ, ವ್ಯಾಪಾರದಲ್ಲಿ ಸಾಮಾನ್ಯ ದಿನ, ಉದ್ಯೋಗದಲ್ಲಿ ಕಿರಿಕಿರಿ
ಕುಂಭ / ಪಟ್ಟ ಶ್ರಮಕ್ಕೆ ತಕ್ಕ ಫಲ ದೊರೆಯಲಿದ್ದು, ಉತ್ಸಾಹದಿಂದ ಕೆಲಸ ಪೂರೈಸುವರು ಮತ್ತು ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭ ಮತ್ತು ಉದ್ಯೋಗದಲ್ಲಿ ಲೆಕ್ಕಾಚಾರ ನಿಜವಾಗಲಿವೆ.
ಮೀನ / ಸಂತೋಷದಿಂದ ಕಾಲ ಕಳೆಯವರು, ಯೋಚಿಸಿದ ಕೆಲಸ ಕಾರ್ಯರೂಪಕ್ಕೆ ತರುವರು ಮತ್ತು ವಸ್ತು, ವಸ್ತ್ರ ಲಾಭ, ಬಾಕಿ ಹಣ ವಸೂಲಾಗಲಿದೆ, ವ್ಯಾಪಾರದಲ್ಲಿ ಅಭಿವೃದ್ಧಿ ಮತ್ತು ಉದ್ಯೋಗದಲ್ಲಿ ಸಾಮಾನ್ಯದಿನ
ಇಂದಿನ ರಾಶಿ ಫಲ: ಕನ್ಯಾ ರಾಶಿಗೆ ಶುಭ ಸುದ್ದಿ, ತುಲಾ ರಾಶಿಗೆ ಧನ ಲಾಭ!? 12 ರಾಶಿಗಳ ಇವತ್ತಿನ ದಿನಭವಿಷ್ಯ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.

