Missing People ನವೆಂಬರ್, 01, 2025 ರ ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ 6 ಜನ ವ್ಯಕ್ತಿಗಳು ಕಾಣೆಯಾಗಿದ್ದು, ಇವರ ಪತ್ತೆಗಾಗಿ ಪೊಲೀಸರು ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ವಿನಂತಿಸಿದ್ದಾರೆ.
ಕಾಣೆಯಾದವರು
ಕೃಷ್ಣೂಜಿರಾವ್ ಎಂಬುವವರ ಪುತ್ರನಾದ ಗಣೇಶ್ ರಾವ್ ಎಂಬ 26 ವರ್ಷದ ಯುವಕ ಆಗಸ್ಟ್ 2023 ರಿಂದ ಪತ್ತೆಯಾಗಿಲ್ಲ. ಈತನ ಚಹರೆಯು 5.5 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು ಮತ್ತು ಗೋಧಿ ಮೈಬಣ್ಣ ಹೊಂದಿರುತ್ತದೆ.

ಗಣೇಶ್ ಎಂಬುವವರ ಪತ್ನಿಯಾದ ಮಂಗಳ ಎಂಬ 38 ವರ್ಷದ ಮಹಿಳೆ ಕೂಡ ಆಗಸ್ಟ್ 2023 ರಿಂದ ಕಾಣೆಯಾಗಿದ್ದಾರೆ. ಈಕೆಯ ಎತ್ತರ 5.2 ಅಡಿ ಇದ್ದು, ದುಂಡು ಮುಖ, ಸಾಧಾರಣ ಮೈಕಟ್ಟು ಹಾಗೂ ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾರೆ. ಇವರ ಬಲಗೈ ಮೇಲೆ ಜಿ.ವಿ.ಕೆ.ಎಸ್. ಎಂಬ ಹಚ್ಚೆ ಇರುತ್ತದೆ.
ಶಿಕಾರಿಪುರ : ಶಾಲೆ ಆವರಣದಲ್ಲಿದ್ದ ಮಕ್ಕಳ ಮೇಲೆ ಜೇನು ದಾಳಿ!
ಇಂದ್ರಾನಗರ ನಿವಾಸಿಯಾದ ಮಲ್ಲಿಗೆಮ್ಮ ಎಂಬ 65 ವರ್ಷದ ಮಹಿಳೆ ಡಿಸೆಂಬರ್ 2024 ರಲ್ಲಿ ಕೆಲಸಕ್ಕೆಂದು ಮನೆಯಿಂದ ಹೋದವರು ಇಲ್ಲಿಯವರೆಗೂ ವಾಪಸ್ಸಾಗಿರುವುದಿಲ್ಲ. ಇವರ ಚಹರೆಯು 5.5 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು ಮತ್ತು ಗೋಧಿ ಮೈಬಣ್ಣ ಇರುತ್ತದೆ.
ಶಿವಮೊಗ್ಗದಲ್ಲಿ ನಡೆಯುತ್ತಿದ್ದಿದ್ದು ಸಾಗರದಲ್ಲಿಯು ಶುರುವಾಯ್ತು! ದಾಖಲಾಯ್ತು ಕೇಸ್
ನಂಜಪ್ಪ ಎಂಬುವವರ ಮಗನಾದ ಕುಮಾರ್ ಎಂಬ 33 ವರ್ಷದ ವ್ಯಕ್ತಿ ಅಕ್ಟೋಬರ್ 2023 ರಿಂದ ನಾಪತ್ತೆಯಾಗಿದ್ದಾರೆ. 5.0 ಅಡಿ ಎತ್ತರ, ದುಂಡು ಮುಖ, ದಪ್ಪ ಮೈಕಟ್ಟು ಮತ್ತು ಎಣ್ಣೆಗೆಂಪು ಮೈಬಣ್ಣ ಹೊಂದಿರುತ್ತಾರೆ.
ಆಧಾರ್ ಕಾರ್ಡ್ : ಇಂದಿನಿಂದ ಹೊಸ ನಿಯಮ ಜಾರಿ! ಏನೆಲ್ಲಾ ಬದಲಾವಣೆ ಆಗಲಿದೆ ಓದಿ
ಜ್ಞಾನೇಶ್ವರ್ ಅವರ ಮಗನಾದ ವೆಂಕಟೇಶ್ ಎಂಬ 35 ವರ್ಷದ ವ್ಯಕ್ತಿ ಡಿಸೆಂಬರ್ 2024 ರಿಂದ ಕಾಣೆಯಾಗಿದ್ದು, ಇದುವರೆಗೆ ಪತ್ತೆಯಾಗಿರುವುದಿಲ್ಲ. ಇವರ ಚಹರೆಯು 4.5 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು ಹಾಗೂ ಗೋಧಿ ಮೈಬಣ್ಣ ಹೊಂದಿದೆ.
Missing People
ನವೆಂಬರ್ 01 : ಇಂದಿನ ಜಾತಕ, ದಿನಭವಿಷ್ಯ ! ದಿನದ ವಿಶೇಷ
ಹಾಗೆಯೇ, ಶಿವಮೂರ್ತಿ ಎಂಬುವವರ ಪತ್ನಿಯಾದ ಶಿವಿಬಾಯಿ ಎಂಬ 43 ವರ್ಷದ ಮಹಿಳೆ ನವಂಬರ್ 2023 ರಿಂದ ಕಾಣೆಯಾಗಿದ್ದು, ಇನ್ನೂ ಮರಳಿ ಬಂದಿಲ್ಲ 5 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು ಮತ್ತು ಕೆಂಪು ಮೈಬಣ್ಣ ಹೊಂದಿರುತ್ತಾರೆ.
ಶಿವಮೊಗ್ಗ : 2 ರೂಪಾಯಿ ಡಾಕ್ಟರ್ ಬಿ.ಎಲ್.ಸುರೇಶ್ ತಳ್ಯಾಳ್ ಇನ್ನಿಲ್ಲ!
ಕಾಣೆಯಾದ ಈ 6 ಜನ ವ್ಯಕ್ತಿಗಳ ಬಗ್ಗೆ ಯಾರಿಗಾದರೂ ಮಾಹಿತಿ ಲಭ್ಯವಾದಲ್ಲಿ, ಕೂಡಲೇ ತುಂಗಾನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಪೊಲೀಸರಿಗೆ ನೆರವಾಗಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
