Cybercrime Shivamogga ಶಿವಮೊಗ್ಗ : ಯುವತಿಯೊಬ್ಬರ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ. ಆ ಖಾತೆಯಲ್ಲಿ ಅಶ್ಲೀಲ ಫೋಟೋಗಳನ್ನು ಹಾಕಿ ಯುವತಿಯ ನಂಬರ್ ನಮೂದಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ, ಈ ಹಿನ್ನೆಲೆ ಯುವತಿಗೆ ಅಪರಿಚಿತ ವ್ಯಕ್ತಿಗಳಿಂದ ಕರೆ ಬರುತ್ತಿದ್ದು ಯುವತಿ ಶಿವಮೊಗ್ಗದ ಸಿ ಇ ಎನ್ ಕ್ರೈ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತಾಲೂಕು ಒಂದರಲ್ಲಿ ಮಹಿಳೆಯೊಬ್ಬರ ಹೆಸರಿನಲ್ಲಿ (ಹೆಸರನ್ನು ಗೌಪ್ಯವಾಗಿ ಇಡಲಾಗಿದೆ ) ಕಿಡಿಗೇಡಿಗಳು ನಕಲಿ ಖಾತೆಯನ್ನು ಸೃಷ್ಟಿಸಿದ್ದಾರೆ. ಸೃಷ್ಟಿಸಿದ್ದು ಅಷ್ಟೇ ಅಲ್ಲದೆ. ಆ ಖಾತೆಯಲ್ಲಿ ಯಾರೋದ್ದೋ ಅಶ್ಲೀಲ ಫೋಟೋವನ್ನು ನಮೂದಿಸಿ ಮಹಿಳೆಯ ನಂಬರ್ ಅಕೆಯ ತಂಗಿ ಹಾಗೂ ಪತಿಯ ನಂಬರ್ನ್ನು ನಮೂದಿಸಿದ್ದಾರೆ. ಇದು ಮಹಿಳೆಗೆ ತಿಳಿದಿರಲಿಲ್ಲ. ಇದರಿಂದಾಗಿ ಮಹಿಳೆಗೆ ಕೆಲ ದಿನಗಳ ನಂತರ ಫೋನ್ಗಳ ಮೇಲೆ ಫೋನ್ಗಳು ಬರಲು ಶುರುವಾಗಿದೆ. ಇದರಿಂದ ಅನುಮಾನಗೊಮನಡ ಮಹಿಳೆ ಪರಿಚಯಸ್ತರಲ್ಲಿ ವಿವಾರಿಸಿದಾಗ ತನ್ನ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿರುವುದು ತಿಳಿದುಬಂದಿದೆ.
ಇದರಿಂದ ಆಘಾತಗೊಂಡ ಮಹಿಳೆ ತನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು. ಅಶ್ಲೀಲ ಪೋಟೋಗಳ ಮೇಲೆ ತನ್ನ ಹಾಗೂ ತನ್ನ ಕುಟುಂಬದ ನಂಬರ್ಗಳನಬ್ನು ನಮೂದಿಸಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳವಂತೆ ಶಿವಮೊಗ್ಗದ ಸಿ ಇ ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
Cybercrime Shivamogga

