ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಎಷ್ಟಿದೆ ಇವತ್ತು

prathapa thirthahalli
Prathapa thirthahalli - content producer

Dam Inflow and Outflow :ಶಿವಮೊಗ್ಗ: ಆಶ್ಲೇಶ ಮಳೆ ಕಳೆದ ಎರಡು ದಿನಗಳಿಂದ ಜೆಲ್ಲೆಯಲ್ಲಿ ಜೋರಾಗಿದೆ. ಈ ಹಿನ್ನೆಲೆ ಜಿಲ್ಲೆಯ ಪ್ರಮುಖ ಜಲಾಶಯಗಳಾದ ತುಂಗಾ ಭದ್ರ ಹಾಗೂ ಲಿಂಗನಮಕ್ಕಿ ಜಲಾಶಯಗಳ ನೀರಿನ ಮಟ್ಟದಲ್ಲಿಯೂ ಸಹ ಹೆಚ್ಚಾಗಿದ್ದು, ಪ್ರಮುಖ ಜಲಾಶಯಗಳ ನೀರಿನ ಮಾಹಿತಿ ಇಲ್ಲಿದೆ

Dam Inflow and Outflow ತುಂಗಾ ಜಲಾಶಯ

ತುಂಗಾ ಜಲಾಶಯಕ್ಕೆ 25,357 ಕ್ಯೂಸೆಕ್ಸ್ ನೀರು ಒಳಹರಿವಿದ್ದು, 26,457 ಕ್ಯೂಸೆಕ್ಸ್  ನೀರನ್ನು ಹೊರಬಿಡಲಾಗುತ್ತಿದೆ.

- Advertisement -

ತುಂಗಾ ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್‌ಗಳಾಗಿದ್ದು, ಪ್ರಸ್ತುತ ನೀರಿನ ಮಟ್ಟ 588.08 ಮೀಟರ್‌ ಇದೆ. ಅಂದರೆ, ಜಲಾಶಯವು ಸಂಪೂರ್ಣ ಭರ್ತಿಯಾಗಲು ಕೇವಲ 0.16 ಮೀಟರ್ ಮಾತ್ರ ಬಾಕಿ ಇದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 3.24 ಟಿಎಂಸಿ ಇದ್ದು, ಪ್ರಸ್ತುತ 3.145 ಟಿಎಂಸಿ ನೀರು ಸಂಗ್ರಹವಾಗಿದೆ. 

Dam Inflow and Outflow ಭದ್ರಾ ಜಲಾಶಯ

ಭದ್ರಾ ಜಲಾಶಯದ ಒಳಹರಿವು 17,007 ಕ್ಯೂಸೆಕ್ಸ್ ಇದ್ದು, 13,408 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.

ಜಲಾಶಯದ ಗರಿಷ್ಠ ಮಟ್ಟ 186 ಅಡಿಗಳಾಗಿದ್ದು, ಪ್ರಸ್ತುತ ನೀರಿನ ಮಟ್ಟ 185 ಅಡಿಗಳಷ್ಟಿದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 71.535 ಟಿಎಂಸಿ ಇದ್ದು, ಪ್ರಸ್ತುತ 70.279 ಟಿಎಂಸಿ ನೀರು ಲಭ್ಯವಿದೆ.

ಲಿಂಗನಮಕ್ಕಿ ಜಲಾಶಯ

ಲಿಂಗನಮಕ್ಕಿ ಜಲಾಶಯಕ್ಕೆ  32,044  ಕ್ಯೂಸೆಕ್ಸ್ ಒಳಹರಿವು ದಾಖಲಾಗಿದ್ದು,ಒಟ್ಟು 6,249 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.   

ಜಲಾಶಯದ ಗರಿಷ್ಠ ಮಟ್ಟ 1819.00 ಅಡಿಗಳಾಗಿದ್ದು, ಪ್ರಸ್ತುತ ನೀರಿನ ಮಟ್ಟ 1812.75 ಅಡಿಗಳಿದೆ.

Dam Inflow and Outflow

 

Share This Article
Leave a Comment

Leave a Reply

Your email address will not be published. Required fields are marked *