ಶಿವಮೊಗ್ಗ ರೈಲ್ವೆ ನಿಲ್ದಾಣ : malenadu today news : ಶಿವಮೊಗ್ಗ ರೈಲ್ವೆ ರಕ್ಷಣಾ ಪಡೆಯ ಸಿಬ್ಬಂಧಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ರೈಲಿನಲ್ಲಿ ತಾಪತ್ರಯ ಎದುರಿಸುವವರಿಗೆ ನೆರವಾಗುವ ಮೂಲಕ ಸದಾ ಸುದ್ದಿಯಾಗುವ ರೈಲ್ವೆ ರಕ್ಷಣಾ ಸಿಬ್ಬಂದಿ ಈ ಸಲ ಮತ್ತೊಮ್ಮೆ ಅದೇ ಕಾರಣಕ್ಕೆ ಶಹಬ್ಬಾಸ್ ಎನಿಸಿಕೊಂಡಿದ್ದಾರೆ.
ಇದನ್ನು ಸಹ ಓದಿ : ಚಾಮುಂಡಿ ತುಂಗಾ ನಾಮಕರಣ, 80 ರೌಡಿಗಳ ಗಡಿಪಾರು, ಹೆಚ್ಸಿ ಯೋಗೇಶ್, ಸಿಎಸ್ ಷಡಾಕ್ಷರಿ ವಿ..ವಾದ! ಇಪೇಪರ್ ಮಿಸ್ ಮಾಡಬೇಡಿ https://malenadutoday.com/shivamogga-e-paper-news-today/
ಇಷ್ಟಕ್ಕೂ ನಡೆದಿದ್ದೇನು ಎಂಬುದನ್ನು ಗಮನಿಸುವುದಾದರೆ, ಶಿವಮೊಗ್ಗಕ್ಕೆ ಬಂದಿಳಿದ ಮೈಸೂರು ತಾಳಗುಪ್ಪ ಟ್ರೈನ್ನಲ್ಲಿ ಮಹಿಳೆಯೊಬ್ಬರು, ಟ್ರೈನ್ನಿಂದ ಇಳಿಯುವ ಗಡಿಬಿಡಿಯಲ್ಲಿ, ತಮ್ಮ ಬ್ಯಾಗ್ ಅನ್ನು ರೈಲಿನಲ್ಲಿಯೇ ಬಿಟ್ಟು ಬಂದಿದ್ದರು. ಆನಂತರ ಬ್ಯಾಗ್ನ ನೆನಪಾಗಿ ಕಳವಳಕ್ಕೊಳಗಾದರು. ಬಳಿಕ ಈ ಸಂಬಂಧ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿ ತಮ್ಮ ಬ್ಯಾಗನ್ನು ಪತ್ತೆ ಮಾಡುವಂತೆ ಮನವಿ ಮಾಡಿದ್ದರು.
ಶಿವಮೊಗ್ಗ ರೈಲ್ವೆ ರಕ್ಷಣಾ ಪಡೆ ಕಾರ್ಯಾಚರಣೆ
ಸುದ್ದಿ ತಿಳಿದ ಬಳಿಕ ಶಿವಮೊಗ್ಗ ರೈಲು ನಿಲ್ದಾಣದಲ್ಲಿದ್ದ ರೈಲ್ವೆ ರಕ್ಷಣಾ ಪಡೆ (RPF) ಮತ್ತು ಟಿಟಿಇ (TTE) ಅಧಿಕಾರಿಗಳು ಟ್ರೈನ್ನಲ್ಲಿ (16206) ಡಿ-1 ಕೋಚ್ ನಲ್ಲಿ ಪರಿಶೀಲಿಸಿದ್ದಾರೆ. ಮಹಿಳಾ ಪ್ರಯಾಣಿಕರ ಬ್ಯಾಗ್ ಅಲ್ಲಿಯೆ ಇರುವುದು ಗೊತ್ತಾಗಿದೆ. ಆ ಬಳಿಕ ಬ್ಯಾಗ್ ಜಪ್ತು ಮಾಡಿದ ಸಿಬ್ಬಂದಿ ಅದರಲ್ಲಿದ್ದ ₹4,000 ಮೌಲ್ಯದ ಬಟ್ಟೆ, ಕೀಲಿಗಳು ಮತ್ತು ಇತರ ಅಮೂಲ್ಯ ವಸ್ತುಗಳನ್ನು ಮಹಿಳೆಯ ಎದುರು ಖಾತರಿಪಡಿಸಿ ಅವರ ಸುಪರ್ಧಿಗೆ ನೀಡಿದ್ದಾರೆ. ಈ ಘಟನೆಯ ಬಗ್ಗೆ ರೈಲ್ವೆ ಇಲಾಖೆ @rpfswr ಅಕೌಂಟ್ನಲ್ಲಿ ಫೋಸ್ಟ್ವೊಂದನ್ನು ಹಾಕಿ ಮಾಹಿತಿ ನೀಡಿದೆ.
ಇದನ್ನು ಸಹ ಓದಿ : ತೀರ್ಥಹಳ್ಲಿಯ ರಾಮೇಶ್ವರ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಒಡೆದು ಹಣ ದೋಚಿದ ಕಳ್ಳರು https://malenadutoday.com/thirthahalli-theft-case/
Passenger lost her bag in shivamogga railway station
ಶಿವಮೊಗ್ಗಕ್ಕೆ ಬಂದಿಳಿದ ಮೈಸೂರು ತಾಳಗುಪ್ಪ ಟ್ರೈನ್ನಲ್ಲಿ ಮಹಿಳೆಯೊಬ್ಬರು, ಟ್ರೈನ್ನಿಂದ ಇಳಿಯುವ ಗಡಿಬಿಡಿಯಲ್ಲಿ, ತಮ್ಮ ಬ್ಯಾಗ್ ಅನ್ನು ರೈಲಿನಲ್ಲಿಯೇ ಬಿಟ್ಟು ಬಂದಿದ್ದರು
RPF Shivamogga, Operation Amanat, railway station lost luggage, Indian railway lost property, DRM Mysore, Shivamogga Railway Station, ಆಪರೇಷನ್ ಅಮಾನತ್, ರೈಲು ಪ್ರಯಾಣಿಕ, ರೈಲ್ವೆ ಪೊಲೀಸ್, #IndianRailway
