Telugu News Anchor Swetcha Votarkar 28 / ನೇಣು ಬಿಗಿದ ಸ್ಥಿತಿಯಲ್ಲಿ ನ್ಯೂಸ್ ಆಂಕರ್​ ಸ್ವೆಚ್ಚಾ ವೋಟಾರ್ಕರ್ ಶವ ಪತ್ತೆ

ajjimane ganesh

Telugu News Anchor Swetcha Votarkar  ತೆಲುಗು ಸುದ್ದಿ ನಿರೂಪಕಿ ಸ್ವೆಚ್ಚಾ ವೋಟಾರ್ಕರ್ (40) ಅನುಮಾನಾಸ್ಪದ ಸಾವು: ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಕೊನೆಯ ಇನ್‌ಸ್ಟಾ ಪೋಸ್ಟ್‌ ಕುತೂಹಲ ಮೂಡಿಸಿದೆ

ಹೈದರಾಬಾದ್, ಜೂನ್ 28, 2025: ತೆಲುಗು ಮಾಧ್ಯಮಗಳ ಖ್ಯಾತ ಸುದ್ದಿ ನಿರೂಪಕಿ ಸ್ವೆಚ್ಚಾ ವೋಟಾರ್ಕರ್ (40) ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಹೈದರಾಬಾದ್‌ನ ಚಿಕ್ಕಡಪಲ್ಲಿಯ ಆರ್‌ಟಿ ಕ್ರಾಸ್ ರಸ್ತೆಯ ಜವಾಹರ್‌ನಗರದಲ್ಲಿರುವ ತಮ್ಮ ನಿವಾಸದಲ್ಲಿ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 

- Advertisement -
Telugu News Anchor Swetcha Votarkar Swetcha Votarkar Death, Telugu News Anchor, Hyderabad Crime, Chikkadpally Incident, T News, Journalist Demise, Suspicious Death, Instagram Last Post, Mental Health, Investigation, Telangana News
Swetcha Votarkar Death, Telugu News Anchor, Hyderabad Crime, Chikkadpally Incident, T News, Journalist Demise, Suspicious Death, Instagram Last Post, Mental Health, Investigation, Telangana News

18 ವರ್ಷಗಳ ಅನುಭವ, ‘ಟಿ ನ್ಯೂಸ್’‌ನಲ್ಲಿ ಸೇವೆ: ಸ್ವೆಚ್ಚಾ ವೋಟಾರ್ಕರ್ ಅವರು ಕಳೆದ 18 ವರ್ಷಗಳಿಂದ ತೆಲುಗು ಮಾಧ್ಯಮ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಅವರು ‘ಟಿ ನ್ಯೂಸ್’ ವಾಹಿನಿಯಲ್ಲಿ ಸುದ್ದಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.  

ಘಟನೆ: ಸ್ವೇಚ್ಚಾರ ಸಾವು ತೆಲುಗು ಮೀಡಿಯಾಗಳಲ್ಲಿ ಸಂಚಲನ ಮೂಡಿಸಿದೆ. ಇನ್ನೂ ಮಾಹಿತಿ ತಿಳಿದ ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು ಮೃತದೇಹವನ್ನು ಹೈದರಾಬಾದ್​ ಗಾಂಧಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಇವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Telugu News Anchor Swetcha Votarkar

ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್: ಸ್ವೆಚ್ಚಾ ಅವರು ಜೀವ ಕಳೆದುಕೊಳ್ಳುವುದಕ್ಕೂ ಮುನ್ನ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಅವರು “ಮನಸು ಪ್ರಶಾಂತವಾಗಿದ್ದರೆ ಆತ್ಮ ಮಾತನಾಡುತ್ತದೆ. ಬುದ್ಧ” (When the mind is peaceful, the soul speaks. Buddha) ಎಂದು ಟ್ಯಾಗ್‌ಲೈನ್ ಕೂಡ ಬರೆದಿದ್ದಾರೆ. ಈ ಪೋಸ್ಟ್ ಅವರ ಸಾವಿನ ಹಿಂದಿನ ಕಾರಣದ ಬಗ್ಗೆ ಇನ್ನಷ್ಟು ಅನುಮಾನ ಮೂಡಿಸುತ್ತಿದೆ.

Swetcha Votarkar Death, Telugu News Anchor, Hyderabad Crime, Chikkadpally Incident, T News, Journalist Demise, Suspicious Death, Instagram Last Post, Mental Health, Investigation, Telangana News

Telugu News Anchor Swetcha Votarkar (40) Found Dead; Last Instagram Post Raises Questions

Share This Article
Leave a Comment

Leave a Reply

Your email address will not be published. Required fields are marked *