Mobile Message Crime 11 ಗಂಟೆ ನಂತರ ಮಹಿಳೆಗೆ I like you ಅಂತೆಲ್ಲಾ ಮೆಸೇಜ್​ ಕಳಿಸಿದರೆ ಸಂಕಷ್ಟಕ್ಕೆ ಸಿಲುಕುತ್ತೀರಿ

ajjimane ganesh

Mobile Message Crime ನೀವು ಸ್ಲಿಮ್ ಆಗಿದ್ದೀರಿ, ಐ ಲೈಕ್​ ಯು ಅಂತಾ ಮಧ್ಯರಾತ್ರಿ ಕಳಿಸುವ ಸಂದೇಶ ಸಂಕಷ್ಟಕ್ಕೆ ಸಿಲುಕಿಸುತ್ತೆ ಎಚ್ಚರ 

Mobile Message Crime ಮದುವೆಯಾದ ಮಹಿಳೆಯೊಬ್ಬರಿಗೆ, ಮಧ್ಯರಾತ್ರಿ ವಾಟ್ಸಾಪ್ ಸಂದೇಶಗಳು ಮತ್ತು ಅಶ್ಲೀೡಲ ಚಿತ್ರವನ್ನು ಕಳುಹಿಸಿದ್ದ ವ್ಯಕ್ತಿಯ ಶಿಕ್ಷೆಯನ್ನು ಮುಂಬೈ ಸೆಷನ್ಸ್ ನ್ಯಾಯಾಲಯ ಎತ್ತಿಹಿಡಿದಿದೆ. ಆರೋಪಿಗೆ ಮೂರು ತಿಂಗಳ ಜೈಲು ಶಿಕ್ಷೆ ಮತ್ತು 1,000 ರೂ. ದಂಡ ವಿಧಿಸಲಾಗಿದೆ. ಸಂತ್ರಸ್ತೆಯ ಘನತೆ ಮತ್ತು ವಿಶ್ವಾಸಾರ್ಹತೆಯನ್ನು ಒತ್ತಿಹೇಳಿದ ನ್ಯಾಯಾಲಯವು, ಆರೋಪಿಯ ವಾದವನ್ನು ತಿರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ ಮತ್ತು ನ್ಯಾಯಾಲಯದ ತೀರ್ಪು: Mobile Message Crime

- Advertisement -

ಆರೋಪಿಯು ಮಹಿಳೆಯೊಬ್ಬರಿಗೆ ಮಧ್ಯರಾತ್ರಿ ಸುಮಾರು 11 ಗಂಟೆಯಿಂದ 12.30ರ ನಡುವೆ “ನೀವು ಸ್ಲಿಮ್ ಆಗಿದ್ದೀರಿ”, “ನೀವು ಬಹಳ ಸ್ಮಾರ್ಟ್ ಆಗಿ ಕಾಣುತ್ತೀರಿ”, “ನೀವು ಸುಂದರವಾಗಿದ್ದೀರಿ”, “ನನ್ನ ವಯಸ್ಸು 40 ವರ್ಷ”, “ನೀವು ಮದುವೆಯಾಗಿದ್ದೀರಾ ಅಥವಾ ಇಲ್ಲವಾ?” ಮತ್ತು I like you ಎಂಬಂತಹ ಸಂದೇಶಗಳನ್ನು ಕಳುಹಿಸಿದ್ದ. ಅಶ್ಲೀಲ ಚಿತ್ರವನ್ನೂ ಕಳುಹಿಸಿದ್ದ. 2022ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈ ಸಂಬಂಧ ನೀಡಿದ್ದ ತೀರ್ಪಿನಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿತ್ತು. ಈ ಪ್ರಕರಣದಲ್ಲಿ ಇದೀಗ ಮುಂಬೈ ಸೆಷನ್ಸ್​ ಅಧೀನ ನ್ಯಾಯಾಲಯದ ತೀರ್ಪನ್ನ ಎತ್ತಿ ಹಿಡಿದಿದೆ.  ಯಾವುದೇ ವಿವಾಹಿತ ಮಹಿಳೆ ಅಥವಾ ಆಕೆಯ ಪತಿ, ರಾತ್ರಿ 11 ರಿಂದ 12.30 ರ ನಡುವೆ ತಮ್ಮ ಮೊಬೈಲ್‌ಗೆ ಕಳುಹಿಸಲಾದ ಇಂತಹ ವಾಟ್ಸಾಪ್ ಸಂದೇಶಗಳು ಮತ್ತು ಅಶ್ಲೀಲ ಫೋಟೋಗಳನ್ನು ಸಹಿಸುವುದಿಲ್ಲ ಎಂದು ಸೆಷನ್ಸ್ ನ್ಯಾಯಾಲಯ ಹೇಳಿದೆ.

ನ್ಯಾಯಾಲಯವು ಅಪರಾಧಿಗೆ ವಿಧಿಸಲಾದ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು 1,000 ರೂ. ದಂಡವನ್ನು ಎತ್ತಿಹಿಡಿದಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಂತ್ರಸ್ತೆಗೆ 3,000 ರೂ. ಪರಿಹಾರ ನೀಡುವಂತೆ ನಿರ್ದೇಶಿಸಿತ್ತು. ಸಂತ್ರಸ್ತೆಯ ಫೋನ್ ಅನ್ನು ವಶಪಡಿಸಿಕೊಳ್ಳದ ಬಗ್ಗೆ ಆರೋಪಿಯ ವಾದವನ್ನು ಕೋರ್ಟ್​ ಪುರಸ್ಕರಿಸಿಲ್ಲ

Midnight messages to married woman amount to obscenity

Share This Article
Leave a Comment

Leave a Reply

Your email address will not be published. Required fields are marked *