elon musk internet starlink price ಎಲನ್ ಮಸ್ಕ್ ನ ಸ್ಟಾರ್ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಭಾರತದಲ್ಲಿ ₹1000ಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆಯಾ?
ಸ್ಪೇಸ್ ಎಕ್ಸ್ ನ ಮಾಲೀಕ ಎಲನ್ ಮಸ್ಕ್ ಅವರ ಸ್ಟಾರ್ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಸೇವೆ ದೇಶದಲ್ಲಿ ಶೀಘ್ರವೇ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಅಲ್ಲದೆ ಆರಂಭದಲ್ಲಿ ಎಲನ್ ಮಸ್ಕರ್ ಇಂಟರ್ನೆಂಟ್ನ ತಿಂಗಳ ಶುಲ್ಕ ₹1000ಕ್ಕಿಂತ ಕಡಿಮೆ ಇರಬಹುದು ಎಂದು ವರದಿಯಾಗಿದೆ. ಸ್ಟಾರ್ಲಿಂಕ್ ನ ಈ ಸೇವೆಯು ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲಿದೆ. ಪ್ರಸ್ತುತ ಸ್ಟಾರ್ಲಿಂಕ್ 100ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಸೇವೆಯನ್ನು ನೀಡುತ್ತಿದೆ. ಭಾರತದಲ್ಲಿ ಸೇವೆ ಪ್ರಾರಂಭಿಸಲು ಕೊನೆಯ ಹಂತದ ಅನುಮೋದನೆಗಳನ್ನು ನಿರೀಕ್ಷಿಸುತ್ತಿದೆ.
ಸರ್ಕಾರಿ ಅನುಮೋದನೆ ಮತ್ತು ಸೇವೆಯ ವಿವರ

ಸ್ಟಾರ್ಲಿಂಕ್ ಭಾರತದಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಲು ಭಾರತ ಸರ್ಕಾರದಿಂದ ಅನುಮೋದನೆ ಪಡೆಯಲು ಕಾಯುತ್ತಿದೆ. ಟೆಲಿಕಾಂ ಇಲಾಖೆ (DoT) ಸ್ಟಾರ್ಲಿಂಕ್ ಗೆ ಲೆಟರ್ ಆಫ್ ಇಂಟೆಂಟ್ (LoI) ನೀಡಿದೆ. ಆದರೆ, ಇನ್ನೂ IN-SPACe (ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರೊಮೋಷನ್ ಅಂಡ್ ಆಥರೈಸೇಷನ್ ಸೆಂಟರ್) ಮತ್ತು ಸ್ಪೆಕ್ಟ್ರಮ್ ಹಂಚಿಕೆಯ ಅಂತಿಮ ಅನುಮೋದನೆ ಬಾಕಿಯಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಸ್ಟಾರ್ಲಿಂಕ್ ತನ್ನ ಸೇವೆಯನ್ನು ದೇಶದಲ್ಲಿ ಪ್ರಾರಂಭಿಸಬಹುದು.
ಬೆಲೆ ಮತ್ತು ಯೋಜನೆಗಳು elon musk internet starlink price
ಸ್ಟಾರ್ಲಿಂಕ್ ಭಾರತದಲ್ಲಿ ತನ್ನ ಸೇವೆಯನ್ನು ಅಗ್ಗದ ಪ್ರಚಾರ ಮೂಲಕ ಆರಂಭಿಸಿ, ಇಂಟರ್ನೆಟ್ನ್ನು ಕಡಿಮೆ ಬೆಲೆಗೆ ನೀಡಲು ಯೋಜಿಸಿದೆ. ವರದಿಗಳ ಪ್ರಕಾರ, ಸ್ಟಾರ್ಲಿಂಕ್ ನ ಮಾಸಿಕ ಶುಲ್ಕ ₹1000ಕ್ಕಿಂತ ಕಡಿಮೆ ಇರಬಹುದು. ಇದು ಅಮೆರಿಕದಂತಹ ಇತರ ದೇಶಗಳಿಗೆ ಹೋಲಿಸಿದರೆ ಬಹಳ ಕಡಿಮೆ ಬೆಲೆ. ಅಮೆರಿಕದಲ್ಲಿ ಸ್ಟಾರ್ಲಿಂಕ್ ನ ಮಾಸಿಕ ಶುಲ್ಕ ಸುಮಾರು ₹10,200 (120 ಡಾಲರ್) ಆಗಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ತಿಂಗಳ ₹3000 ರಿಂದ ₹7000 ವರೆಗೆ ಹೆಚ್ಚಬಹುದು. ಸ್ಟಾರ್ಲಿಂಕ್ ನ ಹಾರ್ಡ್ವೇರ್ ಕಿಟ್ (ಸ್ಯಾಟಲೈಟ್ ಡಿಶ್ ಮತ್ತು ರೌಟರ್) ನ ಬೆಲೆ ಸುಮಾರು ₹21,300 ರಿಂದ ₹32,400 ರವರೆಗೆ ಇರಬಹುದು. ಇದು ಗ್ರಾಹಕರಿಗೆ ದುಬಾರಿಯಾಗುವ ಸಾಧ್ಯತೆ ಇದೆ.
ಪೈಪೋಟಿ ಮತ್ತು ಭಾರತದ ಮಾರುಕಟ್ಟೆ elon musk internet starlink price
ಸ್ಟಾರ್ಲಿಂಕ್ ಭಾರತದಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಲು ಸಿದ್ಧವಾಗುತ್ತಿದ್ದಂತೆ, ಇತರ ಕಂಪನಿಗಳೂ ಸ್ಯಾಟಲೈಟ್ ಇಂಟರ್ನೆಟ್ ಸೇವೆಗಳನ್ನು ಪ್ರಾರಂಭಿಸಲು ಯೋಜಿಸುತ್ತಿವೆ. ಭಾರ್ತಿ ಗ್ರೂಪ್ ಬೆಂಬಲಿತ ಯುಟೆಲ್ಸಾಟ್ ಒನ್ವೆಬ್, ರಿಲಯನ್ಸ್ ಜಿಯೋ ಮತ್ತು SES ನ ಜಂಟಿ ಉದ್ಯಮ, ಮತ್ತು ಗ್ಲೋಬಲ್ಸ್ಟಾರ್ ನಂತಹ ಕಂಪನಿಗಳು ಸ್ಟಾರ್ಲಿಂಕ್ ನೊಂದಿಗೆ ಪೈಪೋಟಿ ನಡೆಸಲಿದ್ದಾರೆ. ಸ್ಟಾರ್ಲಿಂಕ್ ಜಿಯೋ ಮತ್ತು ಏರ್ಟೆಲ್ ನೊಂದಿಗೆ ವಿತರಣಾ ಒಪ್ಪಂದಗಳನ್ನು ಮಾಡಿಕೊಂಡಿದೆ. ಇದು ಭಾರತದ ಇಂಟರ್ನೆಟ್ ಮಾರುಕಟ್ಟೆಯಲ್ಲಿ ಹೊಸ ಪೈಪೋಟಿಯನ್ನು ಸೃಷ್ಟಿಸಬಹುದು.
ಗ್ರಾಮೀಣ ಭಾರತಕ್ಕೆ ಸ್ಟಾರ್ಲಿಂಕ್ ನ ಪ್ರಾಮುಖ್ಯ
ಸ್ಟಾರ್ಲಿಂಕ್ ನ ಸ್ಯಾಟಲೈಟ್ ಇಂಟರ್ನೆಟ್ ಸೇವೆ ಗ್ರಾಮೀಣ ಮತ್ತು ದೂರದ ಪ್ರದೇಶಗಳಿಗೆ ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಬಹುದು. ಭಾರತದಲ್ಲಿ ಇನ್ನೂ ಅನೇಕ ಪ್ರದೇಶಗಳಲ್ಲಿ 4G/5G ಸೇವೆ ಲಭ್ಯವಿಲ್ಲ. ಅಂತಹ ಪ್ರದೇಶಗಳಲ್ಲಿ ಸ್ಟಾರ್ಲಿಂಕ್ ನ ಸೇವೆ ಉತ್ತಮ ಸಂಪರ್ಕವನ್ನು ನೀಡಬಹುದು. ಸ್ಟಾರ್ಲಿಂಕ್ ನ ಸೇವೆಯು 50Mbps ರಿಂದ 150Mbps ವೇಗದ ಇಂಟರ್ನೆಟ್ ಅನ್ನು ನೀಡಬಹುದು. ಮಳೆ, ಮೋಡ, ಅಥವಾ ದುರ್ಗಮ ಪ್ರದೇಶಗಳಲ್ಲಿ ಸಹ ಸ್ಥಿರ ಸಂಪರ್ಕವನ್ನು ಒದಗಿಸಬಲ್ಲದು.
elon musk internet starlink price