shivamogga news : ತೀರ್ಥಹಳ್ಳಿಯಲ್ಲಿ ಶಿವಮೊಗ್ಗ ಬಸ್ ಹತ್ತಿದ್ದ ಮಹಿಳೆಯ ಬ್ಯಾಗ್ನಲ್ಲಿದ್ದ 4 ಲಕ್ಷ ಮೌಲ್ಯದ 127 ಗ್ರಾಂ ತೂಕದ ಬಂಗಾರವನ್ನು ಯಾರೂ ಕಳ್ಳರು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
shivamogga news : ಏನಿದು ಪ್ರಕರಣ
ಶಿವಮೊಗ್ಗ ಸಮೀಪದ ಮಹಿಳೆಯೊಬ್ಬರು ಚಿಕ್ಕಮಗಳೂರಿನಲ್ಲಿ ಸಂಬಂಧಿಕರ ಮದುವೆಗೆಂದು ತೆರಳಿದ್ದರು. ತೆರಳುವ ವೇಳೆ ತಮ್ಮಲ್ಲಿದ್ದ ಒಡವೆಗಳನ್ನು ಮನೆಯಲ್ಲಿಟ್ಟರೆ ಸುರಕ್ಷಿತವಿಲ್ಲವೆಂದು ಭಾವಿಸಿ ತೀರ್ಥಹಳ್ಳಿಯ ಅಕ್ಕನ ಮನೆಯಲ್ಲಿ ಇಟ್ಟು ಮದುವೆಗೆ ತೆರಳಿದ್ದರು. ನಂತರ ಮದುವೆ ಮುಗಿಸಿಕೊಂಡು ತೀರ್ಥಹಳ್ಳಿಗೆ ಬಂದು ಅಕ್ಕನ ಮನೆಯಲ್ಲಿ ಇಟ್ಟಿದ್ದ ಬಂಗಾರವನ್ನು ತೆಗೆದುಕೊಂಡು ಶಿವಮೊಗ್ಗಕ್ಕೆ ಹೋಗಲು ಖಾಸಗಿ ಬಸ್ನ್ನು ಹತ್ತಿದ್ದಾರೆ. ನಂತರ ಗಜಾನನ ಗೇಟ್ಬಳಿ ಬಂದು ಬ್ಯಾಗ್ನ್ನು ಚೆಕ್ ಮಾಡಿದಾಗ ಮಹಿಳೆಗೆ ಶಾಕ್ ಎದುರಾಗಿದೆ. ಯಾರೋ ಕಳ್ಳರು ಬಸ್ನಲ್ಲಿ ಬ್ಯಾಗ್ನಲ್ಲಿದ್ದ 127 ಗ್ರಾಂ 200 ಮಿಲಿ ತೂಕದ 4 ಲಕ್ಷ ಮೌಲ್ಯದ ಬಂಗಾರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಹಿನ್ನಲೆ ಕಳ್ಳರನ್ನು ಶೀಘ್ರವಾಗಿ ಪತ್ತೆಮಾಡಿ ಎಂದು ಮಹಿಳೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.