second puc result : ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ 600 ಅಂಕಕ್ಕೆ 599 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ದೀಕ್ಷಾ ಇದೀಗ ಮರು ಮೌಲ್ಯ ಮಾಪನದಲ್ಲಿ 600 ಕ್ಕೆ 600 ಅಂಕ ಪಡೆದಿದ್ದಾರೆ.
ಏಪ್ರಿಲ್ 8 ರಂದು ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆಯಾದಾಗ ತೀರ್ಥಹಳ್ಳಿಯ ವಾಗ್ದೇವಿ ಕಾಲೇಜಿನ ವಿದ್ಯಾರ್ಥಿ ದೀಕ್ಷಾ 600 ಅಂಕಕ್ಕೆ 599 ಅಂಕ ಪಡೆದಿದ್ದರು. ಅವರಿಗೆ ಕೆಮಿಸ್ಟ್ರಿಯಲ್ಲಿ 100 ಕ್ಕೆ 99 ಅಂಕ ಬಂದಿತ್ತು. ಫಲಿತಾಂಶ ಪ್ರಕಟಗೊಂಡ ನಂತರ ದೀಕ್ಷಾ ಆ ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನಕ್ಕೆ ಹಾಕಿದ್ದರು. ಇದೀಗ ಅದರ ಫಲಿತಾಂಶ ಹೊರಬಿದ್ದಿದ್ದು, 600 ಕ್ಕೆ 600 ಅಂಕವನ್ನು ಪಡೆಯುವುದರ ಮೂಲಕ ತಾಲ್ಲೂಕಿನ ಹಾಗೂ ಜಿಲ್ಲೆಯೆ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ.

second puc result : ದೀಕ್ಷಾಗೆ ಅಭಿನಂದನೆ ಸಲ್ಲಿಸಿದ ಸಚಿವ ಮಧು ಬಂಗಾರಪ್ಪ
ವಿದ್ಯಾರ್ಥಿನಿಯ ಈ ಸಾಧನೆಗೆ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.