SHIVAMOGGA | MALENADUTODAY NEWS | Sep 5, 2024
ಶಿವಮೊಗ್ಗ ಪೊಲೀಸ್ ಇಲಾಖೆ ಗಾಂಜಾ ಡ್ರೈವ್‌ನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ಬರೋಬ್ಬರಿ 45 ದಿನಗಳಲ್ಲಿ 200 ಕ್ಕೂ ಹೆಚ್ಚು ಅನುಮಾನಸ್ಪದ ವ್ಯಕ್ತಿಗಳನ್ನ ವಶಕ್ಕೆ ಪಡೆದು ಅವರನ್ನ ಗಾಂಜಾ ಸೇವನೆ ಪರೀಕ್ಷೆಗೆ ಒಳಪಡಿಸಿದೆ. ಅಲ್ಲದೆ ಈ ನಿಟ್ಟಿನಲ್ಲಿ ಗಾಂಜಾ ಮಾರಾಟ ಮಾಡುವವರ ವಿರುದ್ಧ 10 ಪ್ರಕರಣಗಳು ದಾಖಲಾಗಿದೆ.
ಈ ಬಗ್ಗೆ ಇವತ್ತು ಮಾಹಿತಿ ನೀಡಿದ ಎಸ್‌ಪಿ ಮಿಥುನ್ ಕುಮಾರ್ ಶಿವಮೊಗ್ಗ, ಭದ್ರಾವತಿ, ಸಾಗರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಗಾಂಜಾ ಮಾರಾಟ ಮಾಡುವ ಹಾಗೂ ಸೇವನೆ ಮಾಡುವವರ ವಿರುದ್ಧ ವಿಶೇಷ ನಿಗಾವಹಿಸಲಾಗುತ್ತಿದೆ.
ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್
ಗಾಂಜಾ ಸೇವನೆ ಬಗ್ಗೆ ಅನುಮಾನ ಬರುತ್ತಲೇ ಅವರನ್ನ ಪರೀಕ್ಷೆಗೆ ಗುರಿಮಾಡಲಾಗುತ್ತಿದೆ. ಆನಂತರ ಅವರ ವಿರುದ್ಧ ಕೇಸ್ ದಾಖಲಿಸಲಾಗುತ್ತಿದೆ. ಅಲ್ಲದೆ ಅವರಿಗೆ ಗಾಂಜಾ ಮಾರಾಟ ಮಾಡಿದವರ ವಿವರ ಪಡೆದು ಅಂತಹವರ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅದರಲ್ಲಿಯು ಕುಂಸಿ, ಭದ್ರಾವತಿಯಲ್ಲಿ ವಿಶೇಷ ಡ್ರೈವ್ ನಡೆಸಲಾಗಿದ್ದು, ಜಿಲ್ಲೆಯಲ್ಲಿ ಗಾಂಜಾ ಮಾರಾಟದ ಆರೋಪ ಸಂಬಂಧ 10 ಪ್ರಕರಣ ದಾಖಲಿಸಿಕೊಂಡಿದ್ದು 19 ಮಂದಿಯನ್ನ ಕಳೆದ 45 ದಿನಗಳಲ್ಲಿ ಅರಸ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಒಟ್ಟು ನಾಲ್ಕು ಕೆಜಿ ಗಾಂಜಾ ಸೀಜ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?
ಇದನ್ನು ಸಹ ಓದಿ :ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ