ಸಕ್ರೆಬೈಲ್‌ನಲ್ಲಿ ನಡೆಯಿತೇ ಅನೈತಿಕ ಪೊಲೀಸ್‌ ಗಿರಿ | ಊಟಕ್ಕೆ ಹೋಗಿದ್ದ ಜೋಡಿಯನ್ನು ಆಟೋದಲ್ಲಿ ಸುತ್ತಾಡಿಸಿ ಕಿರುಕುಳ, ಹಲ್ಲೆ, ಬೆದರಿಕೆ?

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 17, 2025 ‌‌ 

ಶಿವಮೊಗ್ಗ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಯುವಕ ಯುವತಿಯ ವಿಡಿಯೋ ಶೂಟ್‌ ಮಾಡಿಕೊಂಡು, ಹಣಕ್ಕಾಗಿ ಬೆದರಿಸಿದ ಆರೋಪ ಸಂಬಂಧ ಕೇಸ್‌ ದಾಖಲಾಗಿದೆ. 

- Advertisement -

ಸಕ್ರೆಬೈಲ್‌ ಹೋಟೆಲ್‌ 

ಜಿಲ್ಲೆಯ ತಾಲ್ಲೂಕು ಒಂದರ ಯುವಕ ತನ್ನ ಗೆಳತಿಯ ಜೊತೆ ಸಕ್ರೆಬೈಲ್‌ನ ಹೋಟೆಲ್‌ವೊಂದಕ್ಕೆ ಕಳೆದ ಹದಿನಾಲ್ಕನೇ ತಾರೀಖು ಬಂದಿದ್ದ. ಈ ವೇಳೆ ಅಲ್ಲಿಗೆ ಬಂದ ನಾಲ್ಕು ಮಂದಿ ಯುವಕ ಯುವತಿ ಇದ್ದ ಟೇಬಲ್‌ಗೆ ಬಂದು ಅದರ ವಿಡಿಯೋ ಮಾಡಿಕೊಂಡು ಅವರಿಬ್ಬರು ಅಕ್ಷರಶಃ ಅಲ್ಲಿಂದ ಕಿಡ್ನ್ಯಾಪ್‌ ಮಾಡಿಕೊಂಡು ಹೋಗಿದ್ದಾರೆ. ಆಟೋವೊಂದರಲ್ಲಿ ಸುತ್ತಿಸಿ, ಅವರಿಬ್ಬರ ಬಳಿ ಇದ್ದ ದುಡ್ಡುಕಿತ್ತುಕೊಂಡ ಆರೋಪಿಗಳು ಆನಂತರ ಎಂಆರ್‌ಎಸ್‌ ಸರ್ಕಲ್‌ ಬಳಿ ಬಿಟ್ಟು ಒಂದುವರೆ ಲಕ್ಷ ರೂಪಾಯಿ ಕೊಡಬೇಕು, ಕೊಡದಿದ್ದರೇ ನಿಮ್ಮ ವಿಡಿಯೋ ಲೀಕ್‌ ಮಾಡುವುದಾಗಿ ಹೆದರಿಸಿದ್ದಾರೆ. ಆನಂತರ ಪದೇಪದೇ ಫೋನ್‌ ಮಾಡಿ ಹಣ ಕೊಡುವಂತೆ ಹೆದರಿಸಿದ್ದಾರೆ. ಇದರ ನಡುವೆ ಯುವಕ ಆರು ಸಾವಿರ ರೂಪಾಯಿ ತಂದು ಶಿವಮೊಗ್ಗ ಬಸ್‌ ನಿಲ್ದಾಣದ ಬಳಿ ಕೊಡಲು ಮುಂದಾದಾಗ ಆತನ ಮೇಲೆ ಮನಸ್ಸೋ ಇಚ್ಚೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿ ಮತ್ತೆ ಹಣಕ್ಕೆ ಡಿಮ್ಯಾಂಡ್‌ ಮಾಡಿದ್ದಾರೆ.

  

ಸದ್ಯ ಈ ಪ್ರಕರಣ ಶಿವಮೊಗ್ಗ ಸದ್ದಿಲ್ಲದೆ ನೈತಿಕ ಪೊಲೀಸ್‌ ಗಿರಿ ನಡೆಯುತ್ತಿದೆಯಾ ಎಂಬ ಅನುಮಾನ ಮೂಡಿಸ್ತಿದೆ. ಸಕ್ರೆಬೈಲ್‌ ಕಡೆಗೆ ಹೋಗುವ ಜೋಡಿಗಳನ್ನು ಟಾರ್ಗೆಟ್‌ ಮಾಡಲಾಯ್ತಾ? ಈ ಹಿಂದೆ ಶಿವಮೊಗ್ಗದ ತಾಲ್ಲೂಕು ಒಂದರಲ್ಲಿ ಇಂತಹುದ್ದೆ ಒಂದು ಗ್ಯಾಂಗ್‌ ಜೋಡಿಗಳ ಅಶ್ಲೀಲ ವಿಡಿಯೋ ಮಾಡಿ ಅವರನ್ನು ಹಿಂಸಿದ ಉದಾಹರಣೆ ಇದೆ. ಸಕ್ರೆಬೈಲ್‌ ನಂತರ ಜನ ತುಂಬಿದ ಪ್ರದೇಶದಲ್ಲಿ ಯುವಕ ಯುವತಿಯನ್ನು ಒತ್ತಾಯ ಪೂರ್ವಕವಾಗಿ ಆಟೋದಲ್ಲಿ ಎಳೆದೊಯ್ದಿದಿರುವುದು ಪ್ರಕರಣದಲ್ಲಿ ತೀವ್ರ ಸಂಶಯ ಮೂಡಿಸ್ತಿದೆ. ಈ ಬಗ್ಗೆ ಪೊಲೀಸರೇ ಕಠಿಣ ಕ್ರಮ ಕೈಗೊಳ್ಳಬೇಕಿದೆ.

SUMMARY | shivamogga tunga nagar police staion case 

KEY WORDS |shivamogga tunga nagar police staion case 

Share This Article
Leave a Comment

Leave a Reply

Your email address will not be published. Required fields are marked *