SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 13, 2024 | ಶಿವಮೊಗ್ಗ ನಗರದ ಬಿ.ಎಚ್.ರಸ್ತೆಯಲ್ಲಿನ ರಾಯಲ್ ಆರ್ಕಿಡ್ ಹೋಟೆಲ್ ಸಭಾಂಗಣದಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ಸಿಲ್ಕ್ ಇಂಡಿಯಾ-2024 ಹಮ್ಮಿಕೊಳ್ಳಲಾಗಿದೆ.
ವಿವಿಧ ರಾಜ್ಯಗಳ ಪರಿಶುದ್ಧ ರೇಷ್ಮೆ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಇದೇ ಅಕ್ಟೋಬರ್ 15ರವರೆಗೆ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10.30ರಿಂದ ರಾತ್ರಿ 8.30 ರವರೆಗೆ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.
ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆವರೆಗಿನ ಎಲ್ಲಾ ರೀತಿಯ ರೇಷ್ಮೇ ಸೀರೆ ಇಲ್ಲಿ ಸಿಗಲಿದೆ. 70ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಬೇರೆ ಬೇರೆ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.
ತಸ್ಸರ್‌ರೇಷ್ಮೆ ಸೀರೆ, ಕ್ರೇಪ್ ಮತ್ತು ಜಾರ್ಜೆಟ್ ಸಿಲ್ಕ್ ಸೀರೆ, ಅರಿಣಿ ರೇಷ್ಮೆ ಸೀರೆ, ಧರ್ಮಾವರಂ ಸೀರೆ, ಕಾಂಚಿ ಪುರಂ ಸಿಲ್ಕ್ ಮತ್ತು ಮದುವೆ ಸೀರೆ, ರಾ ಸಿಲ್ಕ್ ಮತ್ತು ಕೋಸಾ ಸೀರೆ, ಕೋಲತ್ತ ಗಣಪತಿ ಸೀರೆ, ಢಾಕ ಸೀರೆ, ಡಿಸೈನರ್ ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್, ಬಲ್ ಬಲ್‌ಚೂರಿ ರೇಷ್ಮೆ, ಮಟ್ಕಾ ಸೀರೆ, ಪ್ರೀಂಟೆಡ್ ಸೀರೆ, ಪಶೀನಾ ಸೀರೆ, ಡಿಸೈನರ್‌ಡ್ರೆಸ್ ಮೇಟಿರಿಯಲ್ಸ್, ಬಾಗಲ್‌ಪುರ್‌ರೇಷ್ಮೆ ಸೀರೆ, ಶಿಫಾನ್ ಸೀರೆ, ಚಂದೇರಿ ಸಿಲ್ಕ್ ಮತ್ತು ಕೈ ಅಚ್ಚಿನ ಸೀರೆ ಸೇರಿದಂತೆ ಹಲವು ರೀತಿಯ ಸೀರೆ ಮಾರಾಟಕ್ಕೆ ಇರಡಲಾಗಿದೆ.
SUMMARY | Silk India-2024 will be held at The Royal Orchid Hotel auditorium on B.H. Road in Shivamogga city on the occasion of Vijayadashami festival.
KEYWORDS | Silk India-2024,The Royal Orchid Hotel auditorium ,B.H. Road in Shivamogga city ,Vijayadashami festival.