ವಿದ್ಯುತ್‌ ದರ ಹೆಚ್ಚಿಸಿ ಗ್ರಾಹಕರಿಗೆ ಶಾಕ್‌ ಕೊಟ್ಟ  KERC

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 20, 2025

ಈಗಾಗಲೇ ರಾಜ್ಯದಲ್ಲಿ ವಿವಿಧ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಈಗ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮತ್ತೊಂದು ಶಾಕ್‌ ನೀಡಿದೆ. ಅದೇನೆಂದರೆ  KERC ವಿದ್ಯುತ್‌ ದರವನ್ನು ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿದ್ದು, ಈ ದರ ರಾಜ್ಯದ ಜನರಿಗೆ ಏಪ್ರಿಲ್‌ 1 ರಿಂದ ಅನ್ವಯಿಸಲಿದೆ. ಬೆಸ್ಕಾಂ, ಮೆಸ್ಕಾಂ, ಸೆಸ್ಕ್, ಹೆಸ್ಕಾಂ,  ಜೆಸ್ಕಾಂ  ಈ ವಿಭಾಗಗಳ ವಿದ್ಯುತ್ ಬೆಲೆ ಹೆಚ್ಚಳವಾಗಲಿದೆ.

ಪ್ರಸ್ತುತ ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಲ್ಲಿದ್ದು, ರಾಜ್ಯ ಸರ್ಕಾರ ಪ್ರತಿ ಕುಟುಂಬಕ್ಕೆ 200 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ನ್ನು ನೀಡುತ್ತಿದೆ. ಅದರ ಹೊರತಾಗಿ ಯಾರು 200 ಯೂನಿಟ್‌ಗಿಂಟ ಹೆಚ್ಚಾಗಿ ವಿದ್ಯುತ್‌ನ್ನು ಬಳಸುತ್ತಾರೋ ಅವರಿಗೆ ಈ ದರ ಅನ್ವಯವಾಗಲಿದೆ. ಅಷ್ಟೇ ಅಲ್ಲದೆ ಈ ದರ ಏರಿಕೆಯಿಂದ ಮನೆ ಬಳಕೆದಾರರು ಕೈಗಾರಿಕೆಗಳು ಹಾಗೂ ವ್ಯಾಪಾರಸ್ಥರಿಗೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಗಲಿದೆ.

SUMMARY | The KERC has increased the power tariff by 36 paise per unit, which will be applicable to the people of the state from April 1.

KEYWORDS |  KERC,  power tariff,  increased,  per unit,

Share This Article