SHIVAMOGGA | MALENADUTODAY NEWS | ಮಲೆನಾಡು ಟುಡೆ Oct 20, 2024
ಶಿವಮೊಗ್ಗ | ರಾತ್ರಿಯಿಡಿ ಸುರಿದ ಮಳೆ , ಬೆಳಗ್ಗೆಯು ಮುಂದುವರಿದಿದೆ. ಆಘಾತಕಾರಿಯಂತೆ ಸುರಿದ ಮಳೆಯಿಂದಾಗಿ ಶಿವಮೊಗ್ಗದ ಹಲವು ಏರಿಯಾಗಳಿಗೆ ನೀರು ನುಗ್ಗಿದೆ. ಶಿವಮೊಗ್ಗ ನಗರ ಬೆಳೆದ ಪರಿಗೆ ಸಾಕ್ಷಿ ಎಂಬಂತೆ, ನಗರದ ಏರಿಯಾಗಳನ್ನು ವರ್ಷಧಾರೆ ಪರಿಚಯ ಮಾಡಿಕೊಡುತ್ತಿದೆ.
ಮಳೆಯ ಅವಾಂತರದ ನಡುವೆ ನಿನ್ನೆ ದಿನ ಮನೆಗಳು ಕುಸಿದಿದೆ. ಶಿವಮೊಗ್ಗದ 18 ನೇ ವಾರ್ಡ್ ಏಳನೇ ಕ್ರಾಸ್ ಚಾನಲ್ ಏರಿಯಾದಲ್ಲಿ ಪರ್ವಿನ್ ತಾಜ್ ಎಂಬವರಿಗೆ ಸೇರಿದ ಮನೆ ಕುಸಿದಿದೆ. ರಾತ್ರಿಸುರಿದ ಮಳೆಯಿಂದಾಗಿ ಮನೆ ಗೋಡೆಗಳು ಕುಸಿದು ಬಿದ್ದಿದೆ. ಅದೃಷ್ಟಕ್ಕೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಇತ್ತ ದಿಲ್‌ಶದ್, ರೋಜಿ ಮೇರಿ ಹಾಗೂ ರಾಜು ಮತ್ತು ಫಿಲೋಮೀನಾ ಶಾಂತಮ್ಮ ಮೋಹನ್ ಎಂಬವರಿಗೆ ಸೇರಿದ ಮನೆಗಳು ಸಹ ಮಳೆಯಿಂದಾಗಿ ಕುಸಿದು ಬಿದ್ದಿದೆ. ಕೆಲವು ಮನೆಗಳ ಒಳಆವರಣ ಕುಸಿದು ಬಿದ್ದಿದೆ. ಇನ್ನೂ ಕೆಲ ಮನೆಗಳು ಪೂರ್ತಿಯಾಗಿ ಕುಸಿದಿದೆ.
SUMMARY | Several houses have been reported to have collapsed due to heavy rains in Shivamogga city
KEYWORDS | Several houses collapsed, due to heavy rains, in Shivamogga city,