SHIVAMOGGA | MALENADUTODAY NEWS | Aug 18, 2024 ಮಲೆನಾಡು ಟುಡೆ
ಇತ್ತೀಚೆಗೆ ಮಾಜಿ ಕಾರ್ಪೊರೇಟರ್ ಸತ್ಯನಾರಾಯಣ್ (ಮೊಟ್ಟೆ ಸತೀಶ) ರ ಮೇಲೆ ಹಲ್ಲೆಯಾದ ಬಗ್ಗೆ ವರದಿಯಾಗಿತ್ತು. ಇದೀಗ ಅವರು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ರಕ್ಷಣೆ ನೀಡಿ ಅಂತಾ ಖುದ್ದು ಸುದ್ದಿಗೋಷ್ಟಿ ನಡೆಸಿ ಮನವಿ ಮಾಡಿದ್ದಾರೆ.
ಮೊಟ್ಟೆ ಸತೀಶ್ ಹೇಳಿದ್ದೇನು?
ಈ ಸಂಬಂಧ ನಿನ್ನೆ ದಿನ ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಲ್ಲಿ ಮಾತನಾಡಿದ ಅವರು, ಕುಸ್ಕೂರು ಗ್ರಾಮದ ಸರ್ವೆ ನಂಬರ್ 38ರಲ್ಲಿ ನಮ್ಮ ಅಜ್ಜನ ಮತ್ತು ಅಪ್ಪನ ಹೆಸರಿನಲ್ಲಿದ್ದ 3.9 ಎಕರೆ ಜಮೀನನ್ನು ಲೀಸ್‌ಗೆ ನೀಡಲಾಗಿತ್ತು. ರಾಮ ಬಾಬು ಎಂಬವರು ಜಮೀನನ್ನು ಲೀಸ್‌ಗೆ ಪಡೆದಿದ್ದರು. ಅದನ್ನು ಅವರು ನಾಗರಾಜ್ ಎಂಬವರಿಗೆ ಮಾರಿದ್ದಾರೆ. ಹೀಗಾಗಿ ನಾನು ಕೋರ್ಟ್ ಮೆಟ್ಟಿಲೇರಿದ್ದೆ. ಆ ವಿಚಾರದಲ್ಲಿ ಕೋರ್ಟ್ ಇಂಜೆಕ್ಷನ್ ಆರ್ಡರ್ ನೀಡಿದೆ. ಇದೇ ವಿಚಾರಕ್ಕೆ ತಮ್ಮ ಮೇಲೆ ಹಲ್ಲೆಯಾಗಿರುವುದಾಗಿ ಅವರು ತಿಳಿಸಿದ್ದಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಆಗಸ್ಟ್ 15 ರ ರಾತ್ರಿ ತಮ್ಮ ಮನೆಗೆ ಬಂದ ತಂಡವೊಂದು ತಮ್ಮ ಮೇಲೆ ಹಲ್ಲೆ ಮಾಡಿದ್ದಲ್ಲದೆ ತಮ್ಮ ಕಾರಿನ ಗಾಜುಗಳನ್ನ ಒಡೆದು ಹಾಕಿದೆ. ಇದಕ್ಕೂ ತಮ್ಮ ತಾಯಿಯ ಮೇಲೆಯು ಹಲ್ಲೆ ಮಾಡಿದೆ ಎಂದು ಆರೋಪಿಸಿದ ಸತ್ಯನಾರಾಯಣ್, ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ತಮಗೆ ಜೀವಭಯವಿದ್ದು ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನು ಸಹ ಓದಿ :ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ