BREAKING NEWS | ಮೊಟ್ಟೆ ಸತೀಶ್‌ ಮೇಲೆ ಅಟ್ಯಾಕ್‌ ? | ಮೆಗ್ಗಾನ್‌ ಆಸ್ಪತ್ರೆಗೆ ದಾಖಲು | ಮತ್ತೆ ಮಾತನಾಡಿದ ಶಿವಮೊಗ್ಗ ಪಾತಕ ಲೋಕ?

MOTTE Satish , ಮೊಟ್ಟೆ ಸತೀಶ್ ಮೇಲೆ ಕೆಲವರು ಅಟ್ಯಾಕ್‌ ಮಾಡಿದ್ದಾರೆ ಎನ್ನಲಾಗಿದ್ದು, ಅವರು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

BREAKING NEWS |  ಮೊಟ್ಟೆ ಸತೀಶ್‌  ಮೇಲೆ ಅಟ್ಯಾಕ್‌ ? | ಮೆಗ್ಗಾನ್‌ ಆಸ್ಪತ್ರೆಗೆ ದಾಖಲು | ಮತ್ತೆ ಮಾತನಾಡಿದ ಶಿವಮೊಗ್ಗ ಪಾತಕ ಲೋಕ?
MOTTE Satish , ಮೊಟ್ಟೆ ಸತೀಶ್

SHIVAMOGGA | MALENADUTODAY NEWS | Aug 16, 2024  ಮಲೆನಾಡು ಟುಡೆ  

ಶಿವಮೊಗ್ಗ ಅಂಡರ್‌ ವರ್ಲ್ಡ್‌ ಮತ್ತೆ ಮಾತನಾಡಿದೆ. ನಿನ್ನೆ ದಿನ ಮಾಜಿ ಕಾರ್ಪೊರೇಟರ್‌ ಮೊಟ್ಟೆ ಸತೀಶ್‌ ಮೇಲೆ ಅಟ್ಯಾಕ್‌ ಆಗಿದೆ ಎಂದು ಹೇಳಲಾಗುತ್ತದೆ. 



ಮೊಟ್ಟೆ ಸತೀಶ್‌ರ ಕಾರಿನ ಮೇಲೆ ದಾಳಿಯಾಗಿದ್ದು, ಮೊಟ್ಟೆ ಸತೀಶ್‌ ಮೇಲೂ ಹಲ್ಲೆ ಯಾಗಿದೆಯಂತೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮೊಟ್ಟೆ ಸತೀಶ್‌ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ. 

ಇನ್ನೂ ಆರಂಭಿಕ ಹಂತದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಮಾಜಿ ಕಾರ್ಪೊರೇಟರ್‌ ಸತ್ಯನಾರಾಯಣ ರಾಜು (ಮೊಟ್ಟೆ ಸತೀಶ್)‌ ಕುಸ್ಕೂರು ಬಳಿ ಜಮೀನು ವಿಚಾರವಾಗಿ ಈ ಹಲ್ಲೆ  ನಡೆದಿದೆ ಎನ್ನಲಾಗಿದೆ. 

ಜಮೀನು ಖರೀದಿ ವಿಚಾರಕ್ಕೆ ಸತೀಶ್‌ ವ್ಯಾಜ್ಯ ಹೊಂದಿದ್ದರು. ಇನ್ನೂ ನಿನ್ನೆ ದಿನ ರಾತ್ರಿ  ತಮ್ಮ ಜಮೀನಿನ ಬಳಿ ಸತೀಶ್‌ ತೆರಳಿದ್ದಾಗ. ಅವರ ಕಾರಿನ ಮೇಲೆ ದೊಣ್ಣೆಗಳಿಂದ ಗುಂಪೊಂದು ದಾಳಿ ನಡೆಸಿದೆ . ಬಳಿಕ ಸತೀಶ್‌ ಮೇಲೆ ಗುಂಪು ಹಲ್ಲೆ ಮಾಡಿದೆ. ಸತೀಶ್‌ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ.  

ತಮ್ಮ ಮೇಲೆ ಹಲ್ಲೆಯ ಆತಂಕದಿಂದ ಸತೀಶ್‌ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ನಿನ್ನೆಯೇ ದೂರು ನೀಡಿದ್ದರು ಎನ್ನಲಾಗಿದೆ.

ಇದನ್ನೂ ಸಹ ಓದಿ : ಮೊಟ್ಟೆ ಸತೀಶ ಮೇಲೆ ಹಲ್ಲೆ | ಎಸ್‌ಪಿ ಮಿಥುನ್‌ ಕುಮಾರ್‌ ಹೇಳಿದ್ದೇನು? |

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ