SHIVAMOGGA | MALENADUTODAY NEWS | Aug 18, 2024 ಮಲೆನಾಡು ಟುಡೆ
ಮುಂಬರುವ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ, ಶಿವಮೊಗ್ಗ ಪೊಲೀಸ್ ಇಲಾಖೆ ಆಯಾ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ಗಣೇಶ ಪ್ರತಿಷ್ಟಾಪನಾ ಸಮಿತಿ ಮತ್ತು ಈದ್ ಮಿಲಾದ್ ಸಮಿತಿ ಸದಸ್ಯರ ಸಭೆಯನ್ನು ನಡೆಸ್ತಿದ್ದು ಕೆಲವೊಂದು ಸೂಚನೆಗಳನ್ನ ನೀಡುತ್ತಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಪೊಲೀಸ್ ಇಲಾಖೆಯ ಸೂಚನೆ
1) ಗಣಪತಿ ಮೂರ್ತಿ ಪ್ರತಿಷ್ಟಾನೆಯ ದಿನಾಂಕ, ಸ್ಥಳ, ಮೆರವಣಿಗೆ ಮಾರ್ಗ ಮತ್ತು ವಿಸರ್ಜನೆ ಸ್ಥಳದ ಮಾಹಿತಿಯನ್ನು ಮುಂಚಿತವಾಗಿಯೇ ಪೊಲೀಸ್ ಠಾಣೆಗೆ ನೀಡುವುದು.


2) ಸಾರ್ವಜನಿಕರು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ದಕ್ಕೆಯಾಗದಂತೆ ಗಣಪತಿ ಪೆಂಡಾಲ್ ಗಳನ್ನು ಹಾಕಬೇಕು.
3) ಈದ್ ಮಿಲಾದ್ ಮತ್ತು ಗಣಪತಿ ಮೆರವಣಿಗೆಯಲ್ಲಿ ವಾಹನಗಳ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗದ ರೀತಿ ಮೆರವಣಿಗೆ ಮಾಡುವುದು.
4) ಗಣಪತಿ ಪೆಂಡಾಲ್ ಗಳಲ್ಲಿ ಸ್ವಯಂ ಸೇವಕರನ್ನು ನೇಮಿಸಿ, ಗಣಪತಿ ಮೂರ್ತಿಗಳು ವಿಸರ್ಜನೆಯಾಗುವ ದಿನದ ವರೆಗೆ, ದಿನದ 24 ಗಂಟೆಯೂ ಪೆಂಡಾಲ್ ನಲ್ಲಿ ಇರುವ ಹಾಗೇ ನೋಡಿಕೊಳ್ಳಬೇಕು.
5) ಹಬ್ಬದ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಹಾಕುವಾಗ ಇತರರ ಭಾವನೆಗಳಿಗೆ ದಕ್ಕೆಯಾಗದ ರೀತಿಯಲ್ಲಿ ಅಳವಡಿಸುವುದು.
6) ಹಬ್ಬದ ಆಚರಣೆಯಲ್ಲಿ ದ್ವನಿ ವರ್ಧಕಗಳನ್ನು ಬಳಕೆ ಮಾಡುವಾಗ, ಘನ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ವಯ ಬಳಸುವುದು.
7) ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಸ್ಥಳದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಎಂದು ಸೂಚಿಸಿದರು.
ಇದನ್ನು ಸಹ ಓದಿ :ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ