SHIVAMOGGA | MALENADUTODAY NEWS | ಮಲೆನಾಡು ಟುಡೆ Oct 27, 2024
ನಿನ್ನೆ ದಿನ ಶಿವಮೊಗ್ಗಕ್ಕೆ ಆಗಮಿಸಿದ್ದ ಗೃಹಸಚಿವ ಡಾ. ಜಿ ಪರಮೇಶ್ವರ್, ಸೊರಬಕ್ಕೆ ಹೋಗುವ ಮಾರ್ಗಮಧ್ಯೆ ಕುಂಸಿ ಪೊಲೀಸ್ ಠಾಣೆಗೆ ದಿಢೀರ್ ವಿಸಿಟ್ ಮಾಡಿದ್ರು. ಇದು ಶಿವಮೊಗ್ಗ ಪೊಲೀಸ್ ಇಲಾಖೆ ಸಡನ್ ಶಾಕ್ ಆಗಿತ್ತು.
ಕುಂಸಿ ಪೊಲೀಸ್ ಠಾಣೆಗೆ ಬಂದ ಗೃಹಸಚಿವರು ಠಾಣೆಯ ಒಳಗೂ ಹೊರಗೂ ಸುತ್ತಾಡಿ, ಪ್ರತಿಯೊಂದು ವಿಚಾರವನ್ನು ಕೇಳಿ ಮಾಹಿತಿ ಪಡೆದರಷ್ಟೆ ಅಲ್ಲದೆ ಲೋಪದೋಷಗಳನ್ನ ಅಲ್ಲಿಯೇ ತಿಳಿಸಿ ತಕ್ಷಣವೇ ಸರಿಪಡಿಸುವಂತೆ ಸೂಚಿಸಿದರು
ಮುಖ್ಯವಾಗಿ ಠಾಣೆಯ ಆವರಣದಲ್ಲಿ ಪಾಳುಬಿದ್ದಿದ್ದ ಸೀಜಡ್ ವೆಹಿಕಲ್‌ಗಳನ್ನ ನೋಡಿದ ಅವರು, ಇದನ್ನ ಏಕೆ ಇಟ್ಟುಕೊಂಡಿದ್ದೀರಿ. ಇಲ್ಲಿ ಇಟ್ಟು ಪೂಜೆ ಮಾಡಲು ಸಾಧ್ಯವೇ ಇವುಗಳನ್ನ ವಿಲೇವಾರಿ ಮಾಡಿ ಸಂಬಂಧಪಟ್ಟವರಿಗೆ ನೋಟಿಸ್ ಮಾಡಿ, ಕೋರ್ಟ್‌ಗೆ ಮಾಹಿತಿ ನೀಡಿ ವಾಹನಗಳನ್ನ ವಿಲೇವಾರಿ ಮಾಡಿ ಎಂದರು.
ನಿಮ್ಮ ಸ್ಟೇಷನ್‌ನಲ್ಲಿ ಸರಾಸರಿ ತಿಂಗಳಿಗೆ ಎಷ್ಟು ಕೇಸ್ ಆಗುತ್ತದೆ ಎಂದು ಪಿಐ ದೀಪಕ್‌ರನ್ನ ಕೇಳಿದ ಗೃಹಸಚಿವರು, ಕುಂಸಿ ಠಾಣೆಯ ವ್ಯಾಪ್ತಿಯಲ್ಲಿ ಹೆಚ್ಚಿರುವ ಆಕ್ಸಿಡೆಂಟ್ ಕೇಸ್‌ನ ಬಗ್ಗೆ ಕುತೂಹಲದಿಂದ ಮಾಹಿತಿ ಪಡೆದರು. ಹೈವೇ ಇರುವ ಕಾರಣಕ್ಕೆ ಅಪಘಾತ ಪ್ರಕರಣಗಳು ಜಾಸ್ತಿ ದಾಖಲಾಗುತ್ತದೆ ಎಂದು ತಿಳಿದಾಗ ಗೃಹಸಚಿವರು ಸಹ ಅಚ್ಚರಿ ಪಟ್ಟರು.
ಇದಷ್ಟೆ ಅಲ್ಲದೆ ಸಾರ್ವಜನಿಕರಿಗೆ ಮಾಹಿತಿ ನೀಡಿದ ವಿವರ, ಕೇಸ್ ಫೈಲ್‌ಗಳನ್ನ ಸ್ಟಡಿ ಮಾಡಿದ ಗೃಹಸಚಿವರು ಎಸ್‌ಪಿ ಮಿಥುನ್ ಕುಮಾರ್‌ರವರಿಗೆ ಸ್ಥಳದಲ್ಲಿಯೇ ಕೆಲವು ಸೂಚನೆಗಳನ್ನ ನೀಡಿದರು. ಕುಂಸಿ ಠಾಣೆ ಸಣ್ಣದಾಗಿರುವ ಹಿನ್ನೆಲೆಯಲ್ಲಿ ಹೊಸ ಸ್ಟೇಷನ್ ನಿರ್ಮಿಸಬೇಕು ಎನ್ನುವ ಸಾರ್ವಜನಿಕರೊಬ್ಬರ ಸಲಹೆಯನ್ನ ಸ್ವೀಕರಿಸಿದ ಗೃಹಸಚಿವರು, ಏನು ಹೇಗೆ, ಸ್ಟೇಷನ್‌ನಲ್ಲಿ ಎಲ್ಲವೂ ಸರಿಯಾಗಿದ್ಯಾ? ಸಮಸ್ಯೆಗಳನ್ನ ಬಗೆಹರಿಸ್ತಾರಾ ಎಂದು ಸ್ಥಳೀಯರನ್ನ ಪ್ರಶ್ನಿಸಿ ಮಾಹಿತಿ ಪಡೆದರು.
SUMMARY | Home Minister Dr. G Parameshwara, on his way to Soraba, made a surprise visit to the Kumsi police station.
KEYWORDS | Home Minister Dr G Parameshwara, Soraba, surprise visit to the Kumsi police station,