Kumsi Police Station | ಜಸ್ಟ್‌ 2 ಸಾಗುವಾನಿ ಹಲಗೆಗಾಗಿ ಸೋದರತ್ತೆಯನ್ನ ಕೊಂದ ಅಳಿಯ | ಏನಿದು ಘಟನೆ

Incident Report of Shivamogga Kumsi Police Station Limits

Kumsi Police Station | ಜಸ್ಟ್‌ 2 ಸಾಗುವಾನಿ ಹಲಗೆಗಾಗಿ ಸೋದರತ್ತೆಯನ್ನ ಕೊಂದ ಅಳಿಯ | ಏನಿದು ಘಟನೆ
Incident Report of Shivamogga Kumsi Police Station Limits

SHIVAMOGGA | MALENADUTODAY NEWS | Aug 5, 2024  ಮಲೆನಾಡು ಟುಡೆ 

ಶಿವಮೊಗ್ಗದ ಕುಂಸಿ ಪೊಲೀಸ್‌ ಠಾಣೆಯ ಲಿಮಿಟ್ಸ್‌ನಲ್ಲಿ ನಡೆದಿದ್ದ ಅಜ್ಜಿಯ ಕೊಲೆ ಪ್ರಕರಣವನ್ನ ಶಿವಮೊಗ್ಗ ಪೊಲೀಸರು ಭೇದಿಸಿದ್ದಾರೆ. ಇದೀಗ ಪ್ರಕರಣ ಸಂಬಂಧ ಎಸ್‌ಪಿ ಮಿಥುನ್‌ ಕುಮಾರ್‌ ಮಾದ್ಯಮ ಸಂದೇಶದ ವಾಟ್ಸಾಪ್‌ ಗ್ರೂಪ್‌ನಲ್ಲಿ ಮೆಸೇಜ್‌ ರವಾನೆ ಮಾಡಿದ್ದಾರೆ. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಈ ಪ್ರಕರಣದ ಸಂಬಂಧ ಓರ್ವ ಆರೋಪಿಯನ್ನ ಅರೆಸ್ಟ್‌ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆರೋಪಿಯನ್ನ ಆದರ್ಶ (30) ಎಂದು ಗುರುತಿಸಲಾಗಿದೆ. ಈತ ಅಜ್ಜಿಯ ಸಹೋದರನ ಮಗನಾಗಿದ್ದ ಎನ್ನಲಾಗಿದೆ. 

ಅಜ್ಜಿಮನೆಯ ಮೇಲೆ ಕಳ್ಳರ ಕಣ್ಣು | 15 ಸಾವಿರ ರೂಪಾಯಿಗೆ ನಡೆಸಿದ್ರಾ ಆ ಕೃತ್ಯ !| ಕುಂಸಿ ಪೊಲೀಸ್‌ ಸ್ಟೇಷನ್‌ ಕೇಸ್‌

 

ಆದರ್ಶ ಎಂಬಾತ ಎಣ್ಣೆಪಾರ್ಟಿಯಾಗಿದ್ದ. ಈತ ಎಣ್ಣೆ ಹೊಡೆಯಲು ದುಡ್ಡು ಬೇಕಾದಾಗ ಕಳ್ಳತನ ಮಾಡುತ್ತಿದ್ದ. ಈತನ ಕೃತ್ಯದ ಬಗ್ಗೆ ಹಲವಾರು ಮಂದಿ ಬೈದು ಬುದ್ದಿವಾದ ಹೇಳಿದ್ದರು. ಆದರೂ ಈತ ಸರಿಹೋಗಿರಲಿಲ್ಲ. ಈ ನಡುವೆ ಅಜ್ಜಿಯ ಮನೆಯಲ್ಲಿಯು ಈತನೇ ಕಳ್ಳತನವೆಸಗಿದ್ದ ಶಂಕೆ ಪೊಲೀಸರಿಗೆ ಇದೆ. 

ಸಾಗುವಾನಿ ಹಲಗೆಗಾಗಿ ಅತ್ತೆಯನ್ನ ಕೊಂದ /Kumsi Police ajjimane case

ಇನ್ನೂ ತನಗೆ ಯಾರೋ ನಾಟ ಬೇಕು ಎಂದು ಹೇಳಿದ್ದನ್ನ ನೆನಪಿನಲ್ಲಿಟ್ಟುಕೊಂಡಿದ್ದ ಆದರ್ಶ ತನ್ನ ಎದುರಿನ ಮನೆಯಲ್ಲಿದ್ದ ತನ್ನ ಅತ್ತೆ ಸಾವಿತ್ರಮ್ಮರ ಕೊಟ್ಟಿಗೆಯಲ್ಲಿದ್ದ ಸಾಗುವಾನಿ ಹಲಗೆ ಮೇಲೆ ಕಣ್ಣು ಹಾಕಿದ್ದ. 

ಅದನ್ನ ಕದಿಯಲೆಂದೇ ಆಕೆಯ ಮನೆಗೆ ಬಂದಿದ್ದ, ನಿಧಾನವಾಗಿ ಕಳ್ಳಹೆಜ್ಜೆ ಹಾಕಿ ಕೊಟ್ಟಿಗೆಯಲ್ಲಿದ್ದ ಎರಡು ಸಾಗುವಾನಿ ಹಲಗೆಯನ್ನು ಕದ್ದಿದ್ದ ಆರೋಪಿ ಇನ್ನೇನು ಎಸ್ಕೇಪ್‌ ಆಗಬೇಕು ಎನ್ನುವಷ್ಟರಲ್ಲಿ ಅಜ್ಜಿ  ಅಲ್ಲಿಗೆ ಬಂದು ಆತನನ್ನ ನೋಡಿದ್ದಾಳೆ. 



ಕುಂಸಿ ಪೊಲೀಸ್‌ ಠಾಣೆ ಪೊಲೀಸ್‌ ಕಾರ್ಯಾಚರಣೆ 

ಅಲ್ಲದೆ ಅಳಿಯ ಆದರ್ಶನನ್ನ ಸಾವಿತ್ರಮ್ಮ ತರಾಟೆ ತೆಗೆದುಕೊಂಡಿದ್ದಾಳೆ. ಮೊದಲೇ ಕುಡಿದು ಟೈಟಾಗಿದ್ದ ಆದರ್ಶ ಮತ್ತಷ್ಟು ಕೆರಳಿ ಅಜ್ಜಿ ಮೇಲೆ ಹಲ್ಲೆ ಮಾಡಿ ಕುತ್ತಿಗೆ ಹಿಸುಕಿ ಸಾಯಿಸಿದ್ದಾನೆ. ಆ ಬಳಿಕ ಸಾಗುವಾನಿ ನಾಟವನ್ನು ಅಲ್ಲಿಂದ ಸಾಗಿಸಿದ್ದಾನೆ. 

ಕೊಲೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕುಂಸಿ ಪೊಲೀಸ್‌ ಠಾಣೆ ಪೊಲೀಸರು ಆರೋಪಿ ಆದರ್ಶನನ್ನ ಸಂಶಯದ ಮೇಲೆ ಬಂಧಿಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 

 

ಆದಾಗ್ಯು ಕೇವಲ ಮೂರು ಸಾವಿರ ರೂಪಾಯಿ ಬೆಲೆಬಾಳುವ ಎರಡು ಹಲಗೆ ತುಂಡಿಗಾಗಿ ಆದರ್ಶನ ತನ್ನ ಸೋದರತ್ತೆಯನ್ನೆ ಕೊಲೆಮಾಡಿದ್ದಾನೆ. ಅದಕ್ಕೆ ಕಾರಣವಾಗಿದ್ದು ಆತನಿಗದ್ದ ಕುಡಿಯುವ ಚಟ ಎಂಬುದೇ ಇಲ್ಲಿ ಆತಂಕದ ಸಂಗತಿ

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ