SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 29, 2025
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಸೈಬರ್ ವಂಚಕರಿಂದ ಬೇಸತ್ತು ವೃದ್ದ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಡಿಯಾಗೋ ನಜರತ್ (83) ಮತ್ತು ಅವರ ಪತ್ನಿ ಪ್ಲೇವಿಯಾ ಡಿಯಾಗೋ ನಜರತ್ (78) ಆತ್ಮಹತ್ಯೆಗೆ ಶರಣಾದವರು.
ಏನಿದು ಘಟನೆ
ಡಿಯಾಗೋ ಅವರು ಮಹಾರಾಷ್ಟ್ರದಲ್ಲಿ ಬಿಎಸ್ಎನ್ಎಲ್ನಲ್ಲಿ ಹಿರಿಯ ಅಧಿಕಾರಿಯಾಗಿ, ಮಹಾರಾಷ್ಟ್ರ ಸಚಿವಾಲಯದಲ್ಲಿ ಕೂಡ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಅಷ್ಟೇ ಅಲ್ಲದೆ ಈ ದಂಪತಿಗೆ ಮಕ್ಕಳಿಲ್ಲದ ಕಾರಣ ಕೆಲ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಶುಲ್ಕ ಕಟ್ಟಿ ಶಿಕ್ಷಣಕ್ಕೆ ನೆರವಾಗಿದ್ದರು. ಇವರು ಮಾಡುತ್ತಿದ್ದ ಖರ್ಚು ವೆಚ್ಚಗಳನ್ನು ಗಮನಿಸಿದ ಸೈಬರ್ ವಂಚಕರು ಪೊಲೀಸರೆಂದು ಹೇಳಿಕೊಂಡು ಡಿಯಾಗೊ ಅವರಿಗೆ ಕರೆ ಮಾಡಿದ್ದಾರೆ. ನಿಮ್ಮ ಫೋಟೋ ಐಡಿ ಬಳಸಿಕೊಂಡು ಕೆಲವರು ವಂಚನೆ ಎಸಗಿದ್ದಾರೆ ಎಂದು ಬೆದರಿಕೆ ಹಾಕಿದ್ದರು. ಬೆತ್ತಲೆ ವಿಡಿಯೋ, ಚಿತ್ರಗಳನ್ನು ಕಳುಹಿಸಿದ್ದಕ್ಕೆ ದೂರು ನೀಡುವುದಾಗಿ ಬೆದರಿಸಿದ್ದರು. ಇದರಿಂದ ಭಯಗೊಂಡ ದಂಪತಿಯು ಆಗಾಗ್ಗೆ ವಂಚಕರ ಖಾತೆಗೆ ಸುಮಾರು 50 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದರು. ಅಷ್ಟಾದರೂ, ಮತ್ತಷ್ಟು ಹಣ ನೀಡುವಂತೆ ವಂಚಕರು ಪೀಡಿಸಿದ್ದರು. ಈ ಕಿರಿಕಿರಿಗೆ ಬೇಸತ್ತು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸೈಬರ್ ವಂಚಕರ ಕಾಟ ತಾಳಲಾರದೆ ಸಾಯುತ್ತಿರುವುದಾಗಿ ಡಿಯಾಗೋ ಅವರು ಬರೆದಿಟ್ಟಿರುವ ಡೆತ್ನೋಟ್ ಪೊಲೀಸರಿಗೆ ಸಿಕ್ಕಿದೆ ಎಂದು ವರದಿಗಳು ಹೇಳಿವೆ.
SUMMARY | An elderly couple allegedly committed suicide at Beedi village in Khanapur taluk of Belagavi district after being fed up with cyber fraudsters.
KEYWORDS | Belagavi, cyber fraudsters, elderly couple, suicide,