SHIVAMOGGA | MALENADUTODAY NEWS | ಮಲೆನಾಡು ಟುಡೆ Dec 18, 2024
ಶಿವಮೊಗ್ಗ ಆಟೋ ಚಾಲಕರಿಗೆ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ವಿಡಿಯೊವೊಂದರ ಮೂಲಕ ಎಚ್ಚರಿಕೆಯ ಸಂದೇಶವನ್ನ ರವಾನೆ ಮಾಡಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಆಟೋ ಚಾಲಕರು, ಮಾಲೀಕರಿಂದ ಬರೋಬ್ಬರಿ 2,40,900 ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂಬ ಮಾಹಿತಿಯನ್ನ ನೀಡಿದ್ಧಾರೆ.
ಅಲ್ಲದೆ ಈ ಸಂಬಂಧ ವಿಡಿಯೋ ಸಂದೇಶ ರವಾನೆ ಮಾಡಿರುವ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಆಟೋ ಚಾಲಕರು ಆಟೋ ಚಾಲನೆ ಮಾಡುವಾಗ ಮೀಟರ್ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಕಳೆದ ನವೆಂಬರ್ 15 ಡಿಸೆಂಬರ್ 15 ರವರೆಗೂ ವಿಶೇಷ ಅಭಿಯಾನ ನಡೆಸಲಾಗಿದ್ದು 528 ಪ್ರಕರಣಗಳನ್ನ ದಾಖಲಿಸಲಾಗಿದೆ. ಅಲ್ಲದೆ 2,40,900 ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಆಟೋದಲ್ಲಿ ಪ್ರಯಾಣಿಸುವ ಸಾರ್ವಜನಿಕರು ಮಾಹಿತಿಯನ್ನ ನೀಡಿರುವ ಎಸ್‌ಪಿ ಮಿಥುನ್ ಕುಮಾರ್ ಆಟೋದಲ್ಲಿ ಓಡಾಡುವಾಗ ಮೀಟರ್ ಹಾಕಿದ್ದಾರ ಇಲ್ಲವೇ ಪರಿಶೀಲಿಸಿ ಮೀಟರ್ ಹಾಕದೇ ಇದ್ದಲ್ಲಿ 112 ಪೊಲೀಸರಿಗೆ ಕರೆ ಮಾಡಿ, ಅಂತಹ ಆಟೋಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ.

Shivamogga SP Mithun Kumar has sent a warning message through a video to auto drivers in Shivamogga who do not install meters pic.twitter.com/HthNlMpo57
— malenadutoday.com (@malnadtoday) December 18, 2024
SUMMARY | Shivamogga SP Mithun Kumar has sent a warning message through a video to auto drivers in Shivamogga who do not install meters.
KEY WORDS | Shivamogga SP Mithun Kumar, warning message , auto drivers in Shivamogga, auto meters.