SHIVAMOGGA| MALENADUTODAY NEWS | ಮಲೆನಾಡು ಟುಡೆ Mar 7, 2025
ಶಿವಮೊಗ್ಗದ ವಿವಿಧ ಘಟನೆಗಳನ್ನು ಸಂಕ್ಷಿಪ್ತವಾಗಿ ವರದಿ ರೂಪದಲ್ಲಿ ನೀಡುವ ಮಲೆನಾಡು ಟುಡೆಯ ಇವತ್ತಿನ ಚಟ್ ಪಟ್ ಸುದ್ದಿಗಳ ವಿವರ ಹೀಗಿದೆ.
ಸುದ್ದಿ 1 : ವಿದ್ಯಾನಗರದ ಬಳಿ ಅಸ್ವಸ್ಥರಾಗಿ ಬಿದ್ದಿದ್ದ ವ್ಯಕ್ತಿ ಸಾವು
ಶಿವಮೊಗ್ಗ ನಗರದ ವಿದ್ಯಾನಗರದ ಮುಖ್ಯರಸ್ತೆ ಬಳಿ ಅಸ್ವಸ್ಥರಾಗಿ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತರ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಕೋಟೆ ಪೊಲೀಸ್ ಠಾಣೆಯ ಪೊಲೀಸರ ಪ್ರಕಟಣೆ ನೀಡಿದ್ದಾರೆ. 5 ಅಡಿ 4 ಇಂಚು ಎತ್ತರ ಹೊಂದಿರುವ ಮೃತರು ಕಪ್ಪು ಮೈ ಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖದವರಾಗಿದ್ದಾರೆ. ಅವರ ಮೈ ಮೇಲೆ ಹಸಿರು, ಕಪ್ಪು ಬಿಸ್ಕೇಟ್ ಬಣ್ಣದ ಅಡಿಡಾಸ್ ಟೀ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಇದೆ. ಇವರ ಗುರುತು ಸಿಕ್ಕಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಸುದ್ದಿ 2 : ಬಾಬಾ ಸಾಹೇಬ್ ಫೋಟೋ ತೆಗೆದಿದ್ದಕ್ಕೆ ಆಕ್ರೋಶ
ಭದ್ರಾವತಿ ತಾಲ್ಲೂಕು ಸೀಗೆಬಾಗಿಯಲ್ಲಿ ಮಾತಂಗೆಮ್ಮ ದೇವಿ ಜಾತ್ರೆ ಅಂಗನವಾಗಿ ಸರ್ಕಲ್‌ನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ಲೆಕ್ಸ್ ಅಳವಡಿಸಲಾಗಿತ್ತು. ಪರ್ಮಿಟ್ ತೆಗೆದುಕೊಳ್ಳದೇ ಪ್ಲೆಕ್ಸ್ ಅಳವಡಿಸದ ಹಿನ್ನೆಲೆಯಲ್ಲಿ ನಗರಸಭೆಯವರು ಪ್ಲೆಕ್ಸ್ ತೆಗೆಯಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ ಹಲಗೆ ಬಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಸುದ್ದಿ 3 : ವೈನ್‌ಶಾಪ್‌ಗೆ ಬಾಡಿಗೆ ಕೊಟ್ಟಿದ್ದಕ್ಕೆ ಬಹಿಷ್ಕಾರ?
ಇನ್ನೊಂದೆಡೆ ಭದ್ರಾವತಿಯ ಗ್ರಾಮವೊಂದರಲ್ಲಿ ವೈನ್‌ಶಾಪ್‌ಗೆ ಜಾಗ ಬಾಡಿಗೆ ಕೊಟ್ಟ ಕಾರಣಕ್ಕೆ ಊರಿನವರು, ಜಾಗದ ಮಾಲೀಕರಿಗೆ ಬಹಿಷ್ಕಾರ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ತ ವ್ಯಕ್ತಿಯು ಅಧಿಕಾರಿಗಳಿಗೆ ದೂರು ನೀಡಿದ್ದು, ತಮ್ಮ ಜಾಗವನ್ನು ಬಾಡಿಗೆ ನೀಡಿದ್ದಕ್ಕೆ ಈ ರೀತಿ ಮಾಡಲಾಗುತ್ತಿದ್ದು, ಸಾಮಾಜಿಕ ಬಹಿಷ್ಕಾರ ಹಾಕಿರುವುದು ಸರಿಯಲ್ಲ ಎಂದು ಅಲವತ್ತುಕೊಂಡಿದ್ದಾರೆ
ಸುದ್ದಿ 4 : ಹೊಸನಗರದ ಓರ್ವ ಸೇರಿ ಇಬ್ಬರ ಬಂಧನ
ಸಾಗರ ತಾಲ್ಲೂಕು ಆನಂದಪುರ ಪೊಲೀಸ್ ಠಾಣೆಯ ಪೊಲೀಸರು ಕಳ್ಳತನ ಪ್ರಕರಣವೊಂದರಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 1)ಅಶೋಕ ಕೆ, 42 ವರ್ಷ, ಬಸವಾಪುರ ಗ್ರಾಮ, ಹಾರೋಹಿತ್ಲು ಹೊಸನಗರ, 2) ಚಂದ್ರ @ ಚಂದ್ರಹಾಸ, 33 ವರ್ಷ, ಹಾರ್ನಳ್ಳಿ ಗ್ರಾಮ, ಶಿವಮೊಗ್ಗ ಬಂಧಿತರು. ಈ ಪೈಕಿ ಅಶೋಕ್ ಕೃಷಿ ಕೆಲಸದ ಜೊತೆಗೆ ಮನೆಕಳ್ಳತನ ನಡೆಸ್ತಿದ್ದು, ಕದ್ದ ಬಂಗಾರವನ್ನು ಆರೋಪಿ ಚಂದ್ರರಿಗೆ ನೀಡುತ್ತಿದ್ದ ಎನ್ನಲಾಗಿದೆ.
ಸುದ್ದಿ 5 : ಇಬ್ಬರು ಅರೆಸ್ಟ್ 12 ಕೇಸ್ ಪತ್ತೆ
ಮನೆಗಳ್ಳತನ ಪ್ರಕರಣದಲ್ಲಿ ಆನಂದಪುರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿರುವ ಇಬ್ಬರು ಕಳ್ಳರ ವಿಚಾರಣೆ ವೇಳೆ ಒಟ್ಟು 12 ಪ್ರಕರಣಗಳು ಬಯಲಾಗಿದೆ. ಆನಂದಪುರ ಪೊಲೀಸ್ ಠಾಣೆಯ 4, ಸಾಗರ ಪೇಟೆ ಪೊಲೀಸ್ ಠಾಣೆಯ 1 ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ 5, ಹೊಸನಗರ ಪೊಲೀಸ್ ಠಾಣೆಯ 1 ಮತ್ತು ಮಾಳೂರು ಪೊಲೀಸ್ ಠಾಣೆಯ 1 ಪ್ರಕರಣ ಸೇರಿ ಒಟ್ಟು 12 ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ 30,96,000/- ರೂಗಳ 387 ಗ್ರಾಂ ಚಿನ್ನದ ಆಭರಣ, 27,688/- ರೂಗಳ 384 ಗ್ರಾಂ ಬೆಳ್ಳಿ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ 2 ಬೈಕ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.