SHIVAMOGGA| MALENADUTODAY NEWS | ಮಲೆನಾಡು ಟುಡೆ Mar 22, 2025
ರಾಜ್ಯ ಸರ್ಕಾರ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಾಕ್ಷಾಣಾಧಿಕಾರಿ ಹುದ್ದೆಗೆ ಐಎಫ್ಎಸ್ ಕೇಡರ್ರನ್ನ ಮಾತ್ರ ಸೀಮಿತಗೊಳಿಸಿ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಈ ಆದೇಶದಿಂದಾಗಿ ಪ್ರಮೋಶನ್ ಮೂಲಕ ಎನ್ ಕೇಡರ್ ಹುದ್ದೆ ಪಡೆದುಕೊಳ್ಳುತ್ತಿದ್ದವರಿಗೆ ನಿರಾಸೆ ಉಂಟಾಗಿದೆ. ಹೀಗಾಗಿ ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿದೆ.
ಏನಿದು ವಿಚಾರ
ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ದಿನಾಂಕ ಮಾರ್ಚ್ 14 ರಂದು ಆದೇಶವೊಂದನ್ನು ಹೊರಡಿಸಿದ್ದಾರೆ. ಈ ಆದೇಶದ ಯಥಾವತ್ತು ವಿವರ ಹೀಗಿದೆ.
ಅರಣ್ಯ ಇಲಾಖೆಯ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಾಕ್ಷಣಾಧಿಕಾರಿ ಹುದ್ದೆಗಳನ್ನು ಎನ್-ಕೇಡರ್ ಹುದ್ದೆಗಳಾಗಿ ಸೃಜಿಸಲಾಗಿದ್ದು, IFS Cared Rule 9(2) ರನ್ವಯ ಈ ಹುದ್ದೆಗಳಿಗೆ ಭಾರತೀಯ ಅರಣ್ಯ ಸೇವೆಯ ಅಧಿಕಾರಿಗಳನ್ನು ಮಾತ್ರ ನಿಯುಕ್ತಿಗೊಳಬೇಕಾಗಿರುತ್ತದೆ.
ಆದರೆ ಅನೇಕ ಪ್ರಕರಣಗಳಲ್ಲಿ. ರಾಜ್ಯ ಅರಣ್ಯ ಸೇವೆಯ ಕಿರಿಯ ಅಧಿಕಾರಿಗಳನ್ನು ಎನ್-ಕೇಡರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ನಿಯುಕ್ತಿಗೊಳಿಸಲಾಗುತ್ತಿದೆ. ಮುಂದುವರೆದು. ಸೇವೆಯಿಂದ ಅಮಾನತ್ತುಗೊಂಡ ಅಧಿಕಾರಿಗಳಿಗೆ ಪ್ರಮುಖ ಹುದ್ದೆಗಳನ್ನು ಹಾಗೂ APCCF ವೃಂದ ಅಧಿಕಾರಿಯ ಹುದ್ದೆಗೆ ರಾಜ್ಯ ಅರಣ್ಯಸೇವೆಯ ಅಧಿಕಾರಿಯನ್ನು ಸ್ಥಳನಿಯುಕ್ತಿಗೊಳಿಸಿರುವುದನ್ನು ಗಮನಿಸಲಾಗಿದೆ.
ಇತ್ತೀಚಿನ ಕೇಂದ್ರ ಆಡಳಿತ ನ್ಯಾಯಮಂಡಳಿಯ ಪ್ರಕರಣವೂ ಸೇರಿದಂತೆ. ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯ/ನ್ಯಾಯಮಂಡಳಿಗಳು ಈ ರೀತಿಯ ನಿಯೋಜನೆಯನ್ನು ವಾಪಸ್ಸು ಪಡೆಯಲು ಸೂಚಿಸಿರುವ ನಿದರ್ಶಗಳಿರುತ್ತವೆ.
ಇದಲ್ಲದೆ. ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಾಕ್ಷಣಾಧಿಕಾರಿಯು ವಿಭಾಗ ಮಟ್ಟದಲ್ಲಿ ಅರಣ್ಯ ಸಂರಕ್ಷಣೆ. ಅರಣ್ಯ ಸ್ಥಾಪನೆ ಕಾರ್ಯಗಳ ಅನುಷ್ಠಾನ ಮತ್ತು ನಿಯಂತ್ರಣದ ಜವಾಬ್ದಾರಿ ಹೊಂದಿರುವುದಲ್ಲದೆ. ವಿಭಾಗ ಮಟ್ಟದಲ್ಲಿ ಅಧೀನ ಸಿಬ್ಬಂದಿಗಳ ಶಿಸ್ತು ಪ್ರಾಧಿಕಾರವೂ ಆಗಿದ್ದು, ಮಹತ್ವದ ಹುದ್ದೆಯಾಗಿರುತ್ತದೆ. ಈ ಹುದ್ದೆಗಳಿಗೆ ಅರ್ಹರಲ್ಲದ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಇಲಾಖೆಯ ಕಾರ್ಯಕ್ಷಮತೆ ಕುಂಠಿತವಾಗುವುದರೊಂದಿಗೆ, ಪರಿಣಾಮಕಾರಿ ಆಡಳಿತ ನೀಡಲು ತೊಂದರೆಯುಂಟಾಗುವ ಸಂಭವವಿರುತ್ತದೆ. ಆದುದರಿಂದ. ಈ ಹುದ್ದೆಗಳಿಗೆ ಕಡ್ಡಾಯವಾಗಿ ಭಾರತೀಯ ಅರಣ್ಯ ಸೇವೆಯ ಅಧಿಕಾರಿಗಳನ್ನು ನಿಯೋಜಿಸುವುದು ಸಮಂಜಸವಾಗಿರುತ್ತದೆ.
ಮೇಲ್ಕಂಡ ಅಂಶಗಳ ಹಿನ್ನಲೆಯಲ್ಲಿ. ಈಗಾಗಲೇ ಎನ್-ಕೇಡರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಕಡ್ಡಾಯವಾಗಿ ಭಾರತೀಯ ಅರಣ್ಯ ಸೇವೆಯ ಅಧಿಕಾರಿಗಳನ್ನು ಮಾತ್ರ ನಿಯೋಜಿಸಲು ಹಾಗೂ ಇನ್ನು ಮುಂದೆ ಈ ರೀತಿ ಪ್ರಕರಣಗಳು ಮರುಕಳಿಸದಂತೆ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಲು ಕೋರಿದೆ.
ಅರಣ್ಯ ಸಚಿವರ ಈ ಆದೇಶದಿಂದಾಗಿ ಕಿರಿಯ ಅಧಿಕಾರಿಗಳು ಪ್ರಮೋಶನ್ ಮೂಲಕ ಪ್ರಾದೇಶಿಕ ವಿಭಾಗದ APCCF ಅಧಿಕಾರಿಯಾಗಲು ಸಾಧ್ಯವಾಗದು. ನ್ಯಾಯ ಮಂಡಳಿಗಳ ಸೂಚನೆಯಂತೆ ಸರ್ಕಾರ ಈ ಕ್ರಮ ಕೈಗೊಂಡಿದ್ದರೂ ಸಹ, ರಾಜ್ಯ ಅರಣ್ಯ ಸೇವೆಯ ಅಧಿಕಾರಿಗಳಿಗೆ ಅರಣ್ಯ ಇಲಾಖೆಯಲ್ಲಿ ಹುದ್ದೆಗೆ ಸಂಬಂಧಿಸಿದಂತೆ ಮಿತಿ ಹೇರಿದಂತಾಗಿದೆ ಎಂಬ ಚರ್ಚೆ ಅರಣ್ಯ ಇಲಾಖೆಯಲ್ಲಿ ಆರಂಭವಾಗಿದೆ. ಐಎಫ್ಎಸ್ ಗ್ರೇಡ್ನ ಹುದ್ದೆಗಳನ್ನು ಪ್ರಮೋಶನ್ ಮೂಲಕ ರಾಜ್ಯ ಅರಣ್ಯ ಸೇವೆಯ ಅಧಿಕಾರಿಗಳು ಪಡೆದುಕೊಳ್ಳುವುದಕ್ಕೆ ಇತರೇ ಇಲಾಖೆಯಲ್ಲಿದ್ದಂತೆ ಅವಕಾಶಗಳನ್ನು ನೀಡಬೇಕು ಎಂಬ ಮನವಿಯು ಅಧಿಕಾರಿಗಳು ಮಾಡುತ್ತಿದ್ದಾರೆ.
ಸರ್ಕಾರದಿಂದ ಹೊರಬಿದ್ದಿರುವ ಆದೇಶ ಪ್ರತಿ