ಮಾಸ್ತಿಕಟ್ಟೆ ಸಮೀಪ ಹೊಸಪೇಟೆ KSRTC ಬಸ್‌ -ಟ್ಯಾಂಕರ್‌ ನಡುವೆ ಡಿಕ್ಕಿ | ಮಧ್ಯರಾತ್ರಿಯಲ್ಲಿ ಜೀವಕ್ಕೆ ನೆರವಾದ್ರು ಯುವಕರು!

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 26, 2025 ‌‌ ‌‌

ಶಿವಮೊಗ್ಗದ ಮಾಸ್ತಿಕಟ್ಟೆಯ ಬಳಿ ನಿನ್ನೆ ರಾತ್ರಿ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಆಯಿಲ್‌ ಟ್ಯಾಂಕರ್‌ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಹೊಸಪೇಟೆ ಕೆಎಸ್‌ಆರ್‌ಟಿಸಿ ಬಸ್‌ನ ಮುಂಭಾಗ ಜಖಂಗೊಂಡಿದೆ. ಅಲ್ಲದೆ ಇಪ್ಪತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಪೆಟ್ಟಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿಯಾಗಿಲ್ಲ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಮಾಸ್ತಿಕಟ್ಟೆ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಆಂಬುಲೆನ್ಸ್‌ ಮೂಲಕ ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ರವಾನೆ ಮಾಡಿ, ಅಲ್ಲಿಯೇ ಗಾಯಾಳುಗಳಿಗೆ ಚಿಕಿತ್ಸೆ ಒದಗಿಸಲಾಗಿದೆ. ಅಲ್ಲದೆ ಅವರಿಗೆ ಪರ್ಯಾಯ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸಿ ಅವರುಗಳ ಊರಿಗೆ ಕಳುಹಿಸಿಕೊಡಲಾಗಿದೆ. ಘಟನೆಯಲ್ಲಿ ಟ್ಯಾಂಕರ್‌ ವಾಹನ, ಬಸ್‌ಗೆ ಡಿಕ್ಕಿಯಾಗಿ, ರಸ್ತೆಯ ಒಂದು ಸೈಡ್‌ಗೆ ಹೋಗಿ ನಿಂತಿದೆ. ಬಸ್‌ನ ಮುಂಭಾಗ ಜಖಂಗೊಂಡಿದೆ. ಮಾಸ್ತಿಕಟ್ಟೆ ಘಾಟಿ ತಿರುವಿನ ಸಮೀಪ ಘಟನೆ ನಡೆದಿದೆ ಎನ್ನಲಾಗಿದ್ದು, ಅದೃಷ್ಟಕ್ಕೆ ಮಧ್ಯರಾತ್ರಿಯಲ್ಲಿ ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥ್ ಗೌಡ ಅವರು ಅವರ ಕೊಡಚಾದ್ರಿ ಯುವಕರ ಪಡೆ ಸದಸ್ಯರು ಗಾಯಾಳುಗಳ ನೆರವಿಗೆ ಬಂದಿದೆ.

Malenadu Today

ಯುವಕರ ನೆರವು

ಶಿವಮೊಗ್ಗ ಉಡುಪಿ ಮಾರ್ಗದ ಮಾಸ್ತಿಕಟ್ಟೆ ಭಾಗದಲ್ಲಿ ರಾತ್ರಿಹೊತ್ತು ಪ್ರಯಾಣ ತುಸುಕಷ್ಟವೇ! ಏಕೆಂದರೆ ನೆಟ್‌ವರ್ಕ್‌ ಸಹ ಸಮರ್ಪಕವಾಗಿ ಸಿಗದ ಹೊತ್ತಿನಲ್ಲಿ ತುರ್ತು ಪರಿಸ್ಥಿತಿ ಎದುರಾದರೆ, ಸಮಸ್ಯೆ ಹೆಚ್ಚೆ ಇರುತ್ತದೆ. ನಿನ್ನೆ ಮಧ್ಯರಾತ್ರಿ ಸಹ ಮಾಸ್ತಿಕಟ್ಟೆ ಘಾಟಿ ರಸ್ತೆಯಲ್ಲಿ ಅಘಘಾತ ಸಂಭವಿಸಿದ ಹೊತ್ತಿನಲ್ಲಿ ಗಾಯಗೊಂಡ ಪ್ರಯಾಣಿಕರಿಗೆ ನೆರವು ಸಿಗುವ ಸನ್ನಿವೇಶ ಇರಲಿಲ್ಲ. ಆದರೆ ‍ಸ್ಳಳೀಯರು, ಕೊಡಚಾದ್ರಿ ಯುವಕರ ಪಡೆಯ ಯುವಕರಿಗೆ ಮಾಹಿತಿ ನೀಡಿದ ಬೆನ್ನಲ್ಲೆ ಸ್ಥಳಕ್ಕೆ ಬಂದ  ಕುರುವಳ್ಳಿ ನಾಗರಾಜ್‌ ಮತ್ತವರ ತಂಡ ಪ್ರಯಾಣಿಕರ ನೆರವಿಗೆ ನಿಂತಿದೆ. ಇದೇ ಹೊತ್ತಿನಲ್ಲಿ ಮಾಸ್ತಿಕಟ್ಟೆಯಲ್ಲಿ ಡಾಕ್ಟರ್ ಪ್ರವೀಣ್ ಡಿಮೆಲ್ಲೋ, ಡಾಕ್ಟರ್‌ ಪ್ರದೀಪ್‌ ಡಿಮೆಲ್ಲೋರವರು ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ಒದಗಿಸಿದ್ದಾರೆ. ಬಳಿಕ ಆಂಬುಲೆನ್ಸ್‌ ವ್ಯವಸ್ಥೆ ಕಲ್ಪಿಸಿ ಹೆಚ್ಚಿನ ಚಿಕಿತ್ಸೆಗಾಗಿ ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಗಾಯಾಳುಗಳನ್ನ ಶಿಫ್ಟ್‌ ಮಾಡಲಾಗಿದೆ. ಅಲ್ಲಿ ಎಲ್ಲರಿಗೂ ಊಟೋಪಚಾರದ ಅನುಕೂಲ ಮಾಡಿಕೊಟ್ಟಿದ್ದಾರೆ. ಆನಂತರ, ಅಲ್ಲಿಂದ ಯುವಕರ ತಂಡ ಆರ್‌ ಎಂ ಮಂಜುನಾಥ್‌ ಗೌಡರ ಸಹಾಯದಿಂದ ಪರ್ಯಾಯ ವ್ಯವಸ್ಥೆಯನ್ನು ಪ್ರಯಾಣಿಕರಿಗೆ ಕಲ್ಪಿಸಿದೆ. 

Share This Article