ಮಲೆನಾಡಿನ ಕಲಾವಿದರಿಗೆ ಇಲ್ಲಿದೆ ಅವಕಾಶ| ಅವಧೂತ ಸಿನಿಮಾಕ್ಕಾಗಿ ಆಡಿಷನ್‌ ಶುರು

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 6, 2024

ಶಿವಮೊಗ್ಗ | ಮಲೆನಾಡಿನ ಸುತ್ತಮುತ್ತ ನಡೆಯುವ ಅವಧೂತ ಚಿತ್ರಕ್ಕೆ ಮಲೆನಾಡಿನ ಭಾಗದ ಕಲಾವಿದರ ಅವಶ್ಯಕತೆ ಇದೆ ಆಸಕ್ತಿ ಇದ್ದವರು ಆಡಿಷನ್‌ ನೀಡಬಹುದು ಎಂದು  ಅವಧೂತ ಚಿತ್ರದ ನಿರ್ದೇಶಕ ಗಂಧರ್ವ ಹೇಳಿದರು.

- Advertisement -

ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಇಂದು ಅವಧೂತ ಎಂಬ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು.   ಜಾನಪದ ಕಲಾವಿದರಾದ  ಟಾಕಪ್ಪರವರು ಚಿತ್ರದ ಶೀರ್ಷಿಕೆ ಅನಾವರಣವನ್ನು ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ  ಅವಧೂತ ಚಿತ್ರದ ನಿರ್ದೇಶಕರಾದ ಗಂಧರ್ವರವರು ಈ ಚಿತ್ರದ ಶಿರ್ಷಿಕೆ ಯನ್ನು ಶಿವಮೊಗ್ಗದಲ್ಲಿ ಬಿಡುಗಡೆ ಮಾಡಲು ನಮಗೆ ತುಂಬಾ ಸಂತೋಷವಾಗುತ್ತಿದೆ. ಈ ಚಿತ್ರದ ಶಿರ್ಷಿಕೆಯನ್ನು ಇಲ್ಲಿ ಬಿಡುಗಡೆ ಮಾಡಲು 2 ಪ್ರಮಖ ಕಾರಣಗಳಿವೆ ಅದೇನೆಂದರೆ ಶಿವಮೊಗ್ಗ ಅನೇಕ ಸಾಹಿತಿಗಳ ಹಾಗೂ ಕವಿಗಳ ತವರೂರು 2 ನೇ ಕಾರಣ ನಮ್ಮ ಸಿನಿಮಾಗೆ ಬೇಕಾದಂಹ ವಾತಾವರಣ ಇಲ್ಲಿದೆ ಹಾಗಾಗಿ ಶಿರ್ಷಿಕೆ ಅನಾವರಣವನ್ನು ಶಿವಮೊಗ್ಗದಲ್ಲಿ ಇಟ್ಟುಕೊಂಡೆವು ಎಂದರು. ಹಾಗೆಯೇ  ಇಲ್ಲಿ ನಮಗೆ 10 ರಿಂದ 12 ವರ್ಷದ ಬಾಲ ಕಲಾವಿದರು ಹಾಗೂ 28 ರಿಂದ 60 ವಯಸ್ಸಿನ ಕಲಾವಿದರ ಅವಶ್ಯಕತೆ ಇದೆ. ಈ ಸಿನಿಮಾಗೆ ಇನ್ನೂ 45 ಕಲಾವಿದರು ಬೇಕಾಗಿರುವುದರಿಂದ .ಅವರಿಗಾಗಿ ಆಡಿಷನ್‌ ನಡೆಸುತ್ತಿದ್ದೇವೆ. ಸದ್ಯದಲ್ಲೇ ಆಡಿಷನ್‌ ಬಗ್ಗೆ ಮಾಹಿತಿ ನೀಡುತ್ತೇವೆ .ಈ ಸಿನಿಮಾ ಒಬ್ಬ ಮನುಷ್ಯನ ಸುತ್ತ ನಡೆಯುವ ಕಥೆಯಾಗಿದೆ. ಈ ಚಿತ್ರದ ಶೂಟಿಂಗ್‌ ಜನವರಿ 25 ನಂತರ ಪ್ರಾರಂಭವಾಗುತ್ತದೆ ಎಂದರು.

ಅವಧೂತ ಸಿನಿಮಾಗೆ ಜೋಗಿಲ ಸಿದ್ಧರಾಜು ಬಂಡವಾಳ ಹೂಡುವುದರ ಜೊತೆಗೆ  ಸಂಗೀತ ನಿರ್ಮಾಣ ಮಾಡುತ್ತಿದ್ದಾರೆ, ಹಾಗೆಯೇ  ಸಿನಿಮಾಗೆ ಸಂಭಾಷಣೆ ಹಾಗೂ ಸಾಹಿತ್ಯವನ್ನುಹರೀಶ್‌ ರವರು ಬರೆದಿದ್ದಾರೆ.

 

SUMMARY | Gandharva, the director of Avadhoota, said that there is a need for artists from Malnad region for the film which takes place in and around Malnad and those who are interested can give auditions.

KEYWORDS |  Avadhoota,   auditions, kannadamovie,

 

Share This Article