ಬೆಂಗಳೂರು ಉದ್ಯೋಗವಕಾಶ | ಇಲ್ಲಿದೆ ಆನ್‌ಲೈನ್‌ ಲಿಂಕ್‌ | ಪೂರ್ತಿ ವಿವರ ಓದಿ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 15, 2024 

- Advertisement -

ಶಿವಮೊಗ್ಗ | ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹಾಗೂ ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬೆಂಗಳೂರು ನಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. 

ಅಕ್ಟೋಬರ್ 20 ರಂದು ಬೆಳಿಗ್ಗೆ 09.00ರಿಂದ ಸಂಜೆ 4.00 ರ ವರೆಗೆ ಕೆಎಲ್‌ಇ ಸಂಸ್ಥೆಯ ಎಸ್.ನಿಜಲಿಂಗಪ್ಪ ಮಹಾವಿದ್ಯಾಲಯ, #1040, 28ನೇ ಕ್ರಾಸ್‌ರಸ್ತೆ, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10 ಇಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ‌

ಈ ಬೃಹತ್ ಉದ್ಯೋಗಮೇಳದಲ್ಲಿ 100ಕ್ಕೂ ಹೆಚ್ಚಿನ ಪ್ರತಿಷ್ಠಿತ ಉದ್ಯೋಗದಾತ ಸಂಸ್ಥೆಗಳು ಭಾಗವಹಿಸುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ಲಿಂಕ್ https://jobfair.calicut.nielit.in ನಲ್ಲಿ ನೋಂದಾಯಿಸಿಕೊಂಡು ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಉದ್ಯೋಗ ದೊರಕಿಸಿಕೊಳ್ಳಲು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು, ಶಿವಮೊಗ್ಗ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

————-

SUMMARY |  The job fair is being organized in Bengaluru in association with various departments of the Central Government and the Department of Skill Development, Entrepreneurship and Livelihood, Government of India. 

KEYWORDS | job fair is being organized in Bengaluru ,Central Government ,Department of Skill Development, Entrepreneurship and Livelihood, Government of India

Share This Article
1 Comment

Leave a Reply

Your email address will not be published. Required fields are marked *