ಶಿವಮೊಗ್ಗದಲ್ಲಿಯು ಪರಪುರುಷನ ಜೊತೆ ಸೇರಿ, ಪತಿಯ ಕೊಲೆಗೆ ಯತ್ನ ಪ್ರಕರಣ! ಪತ್ನಿ & ನಾಲ್ವರ ವಿರುದ್ಧ ಕೇಸ್!

ajjimane ganesh

ಆಗಸ್ಟ್ 31 2025 : ಮಲೆನಾಡು ಟುಡೆ ಸುದ್ದಿ : ಬೇರೆ ಕಡೆಗಳಲ್ಲಿ ಕೇಳಿಬರುತ್ತಿದ್ದ ಸಂಗತಿಯೊಂದು ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿಯೇ ಕೇಳಿಬಂದಿದೆ. ಸುದ್ದಿಯಲ್ಲಿನ ವೈಯಕ್ತಿಕ ವಿಚಾರಗಳನ್ನು ಹೊರತುಪಡಿಸಿ ಗಮನಿಸುವುದಾದರೆ, ಶಿವಮೊಗ್ಗದ ತಾಲ್ಲೂಕು ಒಂದು ಪೊಲೀಸ್ ಠಾಣೆಯೊಂದರಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ವ್ಯಕ್ತಿಯೊಬ್ಬ ಕೊಲೆಯತ್ನ ಆರೋಪ ಹೊರಿಸಿ ದೂರು ನೀಡಿದ್ದಾನೆ. ಪ್ರಕರಣದ ಕುರಿತಾಗಿ ಎಫ್​ಐಆರ್ ದಾಖಲಾಗಿದೆ. 

ಲಭ್ಯ ಮಾಹಿತಿಯ ಪ್ರಕಾರ, ಸಂತ್ರಸ್ತ ವ್ಯಕ್ತಿಯೊಬ್ಬ  13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದೆ. ಇವರಿಗೆ ಓರ್ವ ಮಗಳು ಸಹ ಇದ್ದಾಳೆ. ಈ ನಡುವೆ ಸಂತ್ರಸ್ತನ ಪತ್ನಿಗೆ ಇನ್ನೊಬ್ಬ ವ್ಯಕ್ತಿಯ ಪರಿಚಯವಾಗಿದೆ. ಹಣಕಾಸಿನ ಸಹಾಯದ ನೆಪದಲ್ಲಿ ಅವರ ಮನೆಗೆ ಆತ ಬರುತ್ತಿದ್ದನಂತೆ. ಹೀಗಾಗಿ ಪತ್ನಿ ಹಾಗು ಪರಪುರುಷನ ನಡುವಿನ ಪರಿಚಯ ಬೇರೆ ಆಯಾಮಕ್ಕೆ ತಿರುಗಿದೆ. (Wife Conspires)ಈ ಬಗ್ಗೆ ಅನುಮಾನಗೊಂಡು ಸಂತ್ರಸ್ತ ಪತಿ, ತನ್ನ ಪತ್ನಿಯ ಜೊತೆಗೆ ಜಗಳವಾಡಿದ್ದನಂತೆ.

- Advertisement -
Wife Conspires to Murder Husband in Shivamogga
Wife Conspires to Murder Husband in Shivamogga

ಇದೇ ಕಾರಣಕ್ಕೆ ಪತಿಯನ್ನು ಕೊಲ್ಲುವ ಸಂಚಿಗೆ ಪತ್ನಿ ಹಾಗೂ ಪರಪುರುಷ ಮುಂದಾಗಿದ್ದಾರೆ.  ಈ ಮದ್ಯೆ ತಮ್ಮ ಬೈಕ್‌ನಿಂದ ಇಳಿದು ಕೆರೆ ಏರಿಯೊಂದರ ಬಳಿಕ ನಿಂತಿದ್ದ ಸಂತ್ರಸ್ತನಿಗೆ ಕಾರಿನಲ್ಲಿ ಅದೇ ದಾರಿಯಲ್ಲಿ ಬರುತ್ತಿದದ್ದ ಆರೋಪಿಗಳು ಬೇಕಂತಲೇ ಡಿಕ್ಕಿ ಹೊಡೆದಿದ್ದಾರೆ. ಸಂತ್ರಸ್ತನ ಮೇಲೆ ಕಾರು ಹರಿಸಲು ಮುಂದಾಗಿದ್ದಾರೆ. ಹೇಗೋ ಅದೃಷ್ಟಕ್ಕೆ ತಪ್ಪಿಸಿಕೊಂಡು ಬಂದ ಸಂತ್ರಸ್ತ ಕೊನೆಗೆ ಪೊಲೀಸರ ಮೊರೆಹೋಗಿದ್ದಾರೆ. 

ಇನ್ನೂ ಗಣಪತಿ ಹಬ್ಬಕ್ಕೂ ಒಂದು ದಿನ ಮೊದಲು ಸಂತ್ರಸ್ತನ ಕೈಗೆ ಪತ್ನಿಯ ಮೊಬೈಲ್​ ಸಿಕ್ಕಿದೆ. ಅದನ್ನು ನೋಡಿದಾಗ, ಅದರಲ್ಲಿ ಕೆಲವು ಕಾಲ್ ರೆಕಾರ್ಡ್​ಗಳು ಕಾಣಿಸಿದೆ. ಅದನ್ನು ಆಲಿಸಿದಾಗ, ಪತ್ನಿ ಹಾಗೂ ಆಕೆಯ ಪ್ರಿಯಕರ ಕೊಲೆಗೆ ಸಂಚು ರೂಪಿಸಿರುವ ಬಗ್ಗೆ ಸಂಭಾಷಣೆ ನಡೆದಿರುವುದು ಗೊತ್ತಾಗಿದೆ.

ಕಾರಿನಿಂದ ಡಿಕ್ಕಿ ಹೊಡೆಸಿ ಸಾಯಿಸುವುದು, ಅದು ಆಗದಿದ್ದರೆ ರಾತ್ರಿ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ, ಆನಂತರ ಮನೆಯಿಂದ ಎತ್ತಾಕಿಕೊಂಡು ಹೋಗಿ ಸಾಯಿಸುವುದು ಈ ರೀತಿಯ ಐಡಿಯಾಗಳ ಬಗ್ಗೆ ಸಂಭಾಷಣೆ ನಡೆಸಿದ್ದರು ಎಂದು ಸಂತ್ರಸ್ತನು ದೂರು ನೀಡಿದ್ದಾನೆ. ನಡೆದ ಘಟನೆ ಹಾಗೂ ಸಿಕ್ಕ ಸಾಕ್ಷ್ಯಗಳನ್ನು ಆಧರಿಸಿ ಸಂತ್ರಸ್ತ ದೂರು ನೀಡಿದ್ದಾರೆ. ಇದೀಗ ಪೊಲೀಸರ ಮುಂದಿನ ತನಿಖೆಯಲ್ಲಿದ್ದು , ಒಟ್ಟು ನಾಲ್ವರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

Wife Conspires to Murder Husband in Shivamogga 

Shivamogga crime news, murder conspiracy case, wife lover murder plot, police station, extramarital affair news, Karnataka crime updates, ಶಿವಮೊಗ್ಗ ಕ್ರೈಂ ನ್ಯೂಸ್, ಕೊಲೆ ಯತ್ನ ಪ್ರಕರಣ, ಅಕ್ರಮ ಸಂಬಂಧ, ಪತ್ನಿಯ ಕೊಲೆ ಸಂಚು, ಕಾಲ್ ರೆಕಾರ್ಡ್ ರಹಸ್ಯ, ಪ್ರದೀಪ್ ಕೇಸ್

car decor new

Share This Article
Leave a Comment

Leave a Reply

Your email address will not be published. Required fields are marked *