WhatsApp New update /ಮೆಟಾ ವಾಟ್ಸಾಪ್‌ನಲ್ಲಿ ಹೊಸ ಅಪ್​ಡೇಟ್​ : 5 ಪಾಯಿಂಟ್ಸ್​

ajjimane ganesh


WhatsApp New update  ಮೆಟಾ ವಾಟ್ಸಾಪ್‌ನಲ್ಲಿ ಹೊಸ ಅಪ್​ಡೇಟ್​ : 5 ಪಾಯಿಂಟ್ಸ್​


WhatsApp New update  ಮೆಟಾ ಸಂಸ್ಥೆಯು ವಾಟ್ಸಾಪ್‌ನಲ್ಲಿ ಜಾಗತಿಕವಾಗಿ ಜಾಹೀರಾತುಗಳನ್ನು ಹೊರತರಲು ಪ್ರಾರಂಭಿಸಿದೆ. ಆದರೆ, ಯುರೋಪಿಯನ್ ಯೂನಿಯನ್ (EU) ದೇಶಗಳಲ್ಲಿ ಮಾತ್ರ ಇದು ಅನ್ವಯಿಸುವುದಿಲ್ಲ. ಉಳಿದಂತೆ ಎಲ್ಲೆಡೆ ವಾಟ್ಸಾಪ್​ನಲ್ಲಿ ಇನ್ಮುಂದೆ ನೀವು ಜಾಹಿರಾತುಗಳನ್ನು ನೋಡಬಹುದು 

WhatsApp New update 

WhatsApp New update

ವಾಟ್ಸಾಪ್‌ನಲ್ಲಿ ಜಾಹೀರಾತುಗಳು: 5 ಪ್ರಮುಖ ಅಂಶಗಳು 

- Advertisement -
  1. ಮೆಟಾ ಸಂಸ್ಥೆಯು ವಾಟ್ಸಾಪ್ ಅನ್ನು ಜಾಹೀರಾತು-ಮುಕ್ತವಾಗಿ ಇಡುವುದಾಗಿ ಭರವಸೆ ನೀಡಿತ್ತು. ಆದರೆ, ಜೂನ್ 16, 2025 ರಂದು ಮೆಟಾ ಅಧಿಕೃತವಾಗಿ ವಾಟ್ಸಾಪ್‌ನಲ್ಲಿ ಜಾಹೀರಾತುಗಳನ್ನು ತರಲು ಆರಂಭಿಸಿದೆ. 
  2. ಯುರೋಪಿಯನ್ ಯೂನಿಯನ್‌ನಲ್ಲಿ ವಾಟ್ಸಾಪ್ ಜಾಹೀರಾತುಗಳ ಪ್ರಾರಂಭವನ್ನು 2026 ರವರೆಗೆ ಮುಂದೂಡಲಾಗಿದೆ. 
  3. ಮೆಟಾ ಸ್ಪಷ್ಟಪಡಿಸಿರುವಂತೆ, ಜಾಹೀರಾತುಗಳು ವಾಟ್ಸಾಪ್‌ನ “ಅಪ್‌ಡೇಟ್ಸ್” (Updates) ಟ್ಯಾಬ್‌ನಲ್ಲಿ ಕಾಣಿಸಿಕೊಳ್ಳಲಿವೆ. ಈ ವಿಭಾಗವು ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಂತೆಯೇ ಕಾರ್ಯನಿರ್ವಹಿಸುತ್ತದೆ, ಅಲ್ಲಿ ಫೋಟೋಗಳು, ಪಠ್ಯ ಅಥವಾ ವೀಡಿಯೊಗಳು 24 ಗಂಟೆಗಳ ನಂತರ ಕಣ್ಮರೆಯಾಗುತ್ತವೆ. ಅಂದರೆ, ಸ್ಟೇಟಸ್ ಅಪ್‌ಡೇಟ್‌ಗಳ ಜೊತೆಗೆ ಜಾಹೀರಾತುಗಳು ಕಾಣಿಸಿಕೊಳ್ಳಲಿವೆ.
  4. ವೈಯಕ್ತಿಕ ಚಾಟ್‌ಗಳು, ಸಂದೇಶಗಳು ಅಥವಾ ಗುಂಪುಗಳಲ್ಲಿ ಜಾಹಿರಾತು ಕಾಣಿಸುವುದಿಲ್ಲ 
  5. ವಿಶ್ವದಾದ್ಯಂತ ವಾಟ್ಸಾಪ್ ಬಳಕೆದಾರರು ಈಗ ಸ್ಟೇಟಸ್ ವಿಭಾಗದಲ್ಲಿ ಜಾಹೀರಾತುಗಳನ್ನು ನೋಡಲು ಸಾದ್ಯವಾಗಿದೆ. ಮೇಲಾಗಿ ಇದು ಹೊಸ ಚರ್ಚೆಗೂ ನಾಂದಿ ಹಾಡಿದೆ. 

 

Share This Article
1 Comment

Leave a Reply

Your email address will not be published. Required fields are marked *