ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 28, 2025: ನಾಳೆ ಶಿವಮೊಗ್ಗ ಸಿಟಿಯ ಹಲವು ಕಡೆ ನೀರು ಬರೋದು ಅನುಮಾನ. ಏಕೆಂದ್ರೆ ಕೃಷ್ಣ ರಾಜೇಂದ್ರ ಜಲ ಶುದ್ಧೀಕರಣ ಘಟಕದಲ್ಲಿ ಆರ್.ಎಂ. (RM) – 7 ಪಂಪಿನ ಜೋಡಣೆ (Linking) ಕಾರ್ಯ ಹಾಗೂ ತುಂಗಾ ನಗರದ ವ್ಯಾಪ್ತಿಯಲ್ಲಿ ಕೊಳವೆ ಮಾರ್ಗದ ದುರಸ್ತಿ ಕಾಮಗಾರಿಯನ್ನು ಜಲಮಂಡಳಿ ಹಮ್ಮಿಕೊಂಡಿದೆ.
ಮಾಚೇನಹಳ್ಳಿ ಸೇರಿದಂತೆ ನಾಳೆ ಇಲ್ಲೆಲ್ಲಾ ಕರೆಂಟ್ ಇರಲ್ಲ!
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 29ರಂದು ನಗರದ ಕೆಳಕಂಡ ಪ್ರದೇಶಗಳಲ್ಲಿ ದೈನಂದಿನ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜಲ ಮಂಡಳಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ತುಂಗಾ ನಗರ, ಮಿಳಘಟ್ಟ, ಟಿಪ್ಪುನಗರ, ಜಿಲ್ಲಾ ಪಂಚಾಯತ್ ಕಚೇರಿ ಪ್ರದೇಶ, ಶಿವಮೂರ್ತಿ ಸರ್ಕಲ್, ಜಯನಗರ, ರವೀಂದ್ರ ನಗರ, ಪಿಡಬ್ಲ್ಯೂಡಿ (PWD) ಕಚೇರಿ, ಶೇಷಾದ್ರಿಪುರಂ, ಬಸ್ ನಿಲ್ದಾಣ ಮತ್ತು ಹಳೇ ಟ್ಯಾಂಕ್ ಪ್ರದೇಶದ ಸುತ್ತಮುತ್ತಲಿನ ವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ. ಈ ಕುರಿತು ಅಕ್ಟೋಬರ್ 28ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಜಲ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಾರ್ವಜನಿಕರು ಈ ಅವಧಿಯಲ್ಲಿ ಸಹಕರಿಸಬೇಕೆಂದು ಕೋರಿದ್ದಾರೆ.

ಒಪ್ಪಿಕೊಂಡು ನಡೆದಿದ್ದು ತಪ್ಪಲ್ಲ! ಯುವಕನ ವಿರುದ್ಧದ ಅತ್ಯಾಚಾರದ ಪ್ರಕರಣವನ್ನ ರದ್ದುಗೊಳಿಸಿದ ಹೈಕೋರ್ಟ್!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಎಲ್ಲಿಯ ಉಡುಪಿ, ಶಿವಮೊಗ್ಗ, ಚಿತ್ರದುರ್ಗ, ತೆಲಂಗಾಣ! ಸಿಂಪಲ್ ಆಗಿ ₹4 ಲಕ್ಷ ಹೊಡೆದ ಆಸಾಮಿ! ನಂಬಿಕೆಯ ಕ್ರೈಂ ಇದು
