ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 25, 2025 : ಬಕೆಟ್‌ನಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿ 14 ತಿಂಗಳ ಮಗುವೊಂದು ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ಸಂಭವಿಸಿದೆ.

ಹಾವೇರಿಯಲ್ಲಿ ಬಕೆಟ್ ನೀರಿನಲ್ಲಿ ಮಗು ಸಾವು
ಹಾವೇರಿ ನಗರದ ಶಿವಬಸವನಗರ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ, 14 ತಿಂಗಳ ಹಸುಗೂಸು ದಕ್ಷಿತ್ ಮೃತಪಟ್ಟಿದ್ದಾನೆ. ಮನೆಯ ಮುಂಭಾಗದಲ್ಲಿ ನೀರು ತುಂಬಿಸಿ ಇಡಲಾಗಿದ್ದ ಬಕೆಟ್‌ನಲ್ಲಿ ಮಗು ಆಕಸ್ಮಿಕವಾಗಿ ಬಿದ್ದು ಈ ದುರಂತ ಸಂಭವಿಸಿದೆ.

ಆಟವಾಡುತ್ತಾ ಮಗು ಬಕೆಟ್ ಬಳಿಗೆ ಹೋಗಿದೆ. ಅಲ್ಲಿ ಆಕಸ್ಮಾತ್ತಾಗಿ ತಲೆ ಕೆಳಗಾಗಿ ನೀರಿಗೆ ಬಿದ್ದಿದ್ದು ಅಲ್ಲಿಯೇ ಪ್ರಜ್ಞೆ ಕಳೆದುಕೊಂಡಿದೆ. ಇದನ್ನ ಗಮನಿಸಿದ ಕುಟುಂಬಸ್ಥರು ಮಗುವನ್ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಗು ಉಳಿಯಲಿಲ್ಲ. ಈ ಸಂಬಂಧ ಹಾವೇರಿ ಶಹರ ಪೊಲೀಸ್ ಠಾಣೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಮಲೆನಾಡು ಅಡಿಕೆ ದರದ ಮಾಹಿತಿ! ಅಡಕೆ ರೇಟಿನ ಇಂಚಿಂಚೂ ವಿವರ
ಗೀಸರ್‌ನ ಕಾರ್ಬನ್ ಮೊನಾಕ್ಸೈಡ್ ಸೋರಿಕೆಯಿಂದ ಇಬ್ಬರು ಯುವತಿಯರ ಸಾವು
ಇತ್ತ ಮೈಸೂರು ಜಿಲ್ಲೆಯಲ್ಲಿ ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮೊನಾಕ್ಸೈಡ್ (Carbon Monoxide) ವಿಷಾನಿಲ ಸೋರಿಕೆಯಾದ ಹಿನ್ನೆಲೆಯಲ್ಲಿ, ಇಬ್ಬರು ಸಹೋದರಿಯರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮೃತಪಟ್ಟ ಯುವತಿಯರನ್ನು ಗುಲ್ಪಮ್ ತಾಜ್ (23) ಮತ್ತು ಸಿಮ್ರಾನ್ ತಾಜ್ (21) ಎಂದು ಗುರುತಿಸಲಾಗಿದೆ.

ಪಿರಿಯಾಪಟ್ಟಣದ ಕಾವಾಡಗೇರಿಯಲ್ಲಿರುವ ಮನೆಯಲ್ಲಿ ಸಹೋದರಿಯರು ಒಟ್ಟಿಗೆ ಸ್ನಾನದ ಕೋಣೆಗೆ ತೆರಳಿದ್ದರು. ಸ್ನಾನದ ಕೋಣೆಯಲ್ಲಿ ಯಾವುದೇ ಕಿಟಕಿಯ ವ್ಯವಸ್ಥೆ ಇರಲಿಲ್ಲ. ಇದೇ ವೇಳೆ ಗ್ಯಾಸ್ ಗೀಸರ್‌ನಿಂದ ಸೋರಿಕೆಯಾದ ಕಾರ್ಬನ್ ಮೊನಾಕ್ಸೈಡ್ ಕೋಣೆಯೊಳಗೆ ತುಂಬಿಕೊಂಡಿತ್ತು. ಇದರ ಅರಿವಿರದೆ ಬಾತ್ ರೂಮ್ನೊಳಗೆ ತೆರಳಿದ ಯುವತಿಯರು ಅಲ್ಲಿಯೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಪಿರಿಯಾಪಟ್ಟಣ ಪಟ್ಟಣ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದಾಖಲೆ ಬರೆದ ಸರಕು! ಹಸಕ್ಕೆ ಐದಂಕಿಯ ರೇಟು! ಎಷ್ಟಿದೆ ಅಡಿಕೆ ದರ?
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Two tragic incidents reported in Karnataka Tragedy Strikes Karnataka Toddler Drowns in Haveri Bucket; Two Sisters Die from Geyser’s Carbon Monoxide Leak in Piriyapatna
