TVS Apache RTR 200 4V bike launched 2025ರ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಲಾಂಚ್
ಟಿವಿಎಸ್ ಮೋಟಾರ್ ಕಂಪನಿಯು ತನ್ನ 2025 ಸಾಲಿನ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಮೋಟಾರ್‌ಸೈಕಲ್ ಶ್ರೇಣಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ಶ್ರೇಣಿಯು ಒಬಿಡಿ2ಬಿ (OBD2B) ಮಾನದಂಡಗಳಿಗೆ ಅನುಗುಣವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ, ಉತ್ತಮ ಕಾರ್ಯಕ್ಷಮತೆ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ ಹೊಸ ಬೈಕ್ ಕಂಪನಿಯ ಎಲ್ಲಾ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದ್ದು, ದೆಹಲಿಯಲ್ಲಿ ಎಕ್ಸ್-ಶೋರೂಮ್ ಬೆಲೆ ₹1,53,990 ರಿಂದ ಪ್ರಾರಂಭವಾಗುತ್ತದೆ. ಅಪಾಚೆ ಮೋಟಾರ್‌ಸೈಕಲ್ ಶ್ರೇಣಿಯ 20 ವರ್ಷಗಳಲ್ಲಿ ಸಾಕಷ್ಟು ಬದಲಾಗುತ್ತಿದ್ದು , ಇದು ಟಿವಿಎಸ್‌ನ ಮೋಟಾರ್‌ಸೈಕಲ್ ವಿಭಾಗದಲ್ಲಿನ ನಿರಂತರ ನಾವೀನ್ಯತೆ ಮತ್ತು ಸುಧಾರಣೆಗೆ ಸಾಕ್ಷಿಯಾಗಿದೆ. ಇನ್ನು ಈ ಹೊಸ ಮಾದರಿ ಸವಾರಿರಿಗೆ ಇನ್ನಷ್ಟು ಉತ್ತಮ ಮತ್ತು ಸುರಕ್ಷಿತ ಸವಾರಿಯ ಅನುಭವವನ್ನು ನೀಡುವ ಗುರಿ ಹೊಂದಿವೆ.