Tunga and Bhadra Dam : ತುಂಗಾ ಹಾಗೂ ಭದ್ರ ಜಲಾಶಯಗಳ ಒಳಹರಿವು ಎಷ್ಟಿದೆ ಇವತ್ತು.
ಕಳೆದ ಎರಡು ದಿನಗಳಿಂದ ಮಳೆ ಕಡಿಮೆಯಾಗಿದ್ದರೂ, ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಾದ ತುಂಗಾ ಮತ್ತು ಭದ್ರಾ ಜಲಾಶಯಗಳಲ್ಲಿ ನೀರಿನ ಮಟ್ಟ ಉತ್ತಮವಾಗಿದೆ. ಜಲಾಶಯಗಳ ಇಂದಿನ ಒಳಹರಿವು ಮತ್ತು ಹೊರಹರಿವಿನ ವಿವರ ಇಲ್ಲಿದೆ.
Tunga and Bhadra Dam ಭದ್ರಾ ಜಲಾಶಯ
ಭದ್ರಾ ಜಲಾಶಯಕ್ಕೆ ಇಂದು 9,345 ಕ್ಯೂಸೆಕ್ಸ್ ಒಳಹರಿವು ದಾಖಲಾಗಿದೆ. ಅದೇ ಪ್ರಮಾಣದ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿಗಳಾಗಿದ್ದು, ಪ್ರಸ್ತುತ ನೀರಿನ ಮಟ್ಟ 180 ಅಡಿ 3 ಇಂಚು ಇದೆ. ಇದರ ಒಟ್ಟು ಸಂಗ್ರಹ ಸಾಮರ್ಥ್ಯ 71.535 TMC ಆಗಿದ್ದು, ಇಂದು 64.478 TMC ನೀರು ಸಂಗ್ರಹವಾಗಿದೆ.

ತುಂಗಾ ಜಲಾಶಯ
ತುಂಗಾ ಜಲಾಶಯದಲ್ಲಿ ನೀರಿನ ಮಟ್ಟ ಉತ್ತಮವಾಗಿದ್ದು, ಒಳಹರಿವು 20,555 ಕ್ಯೂಸೆಕ್ಸ್ ಇದೆ. ಹೊರಹರಿವು 20,937 ಕ್ಯೂಸೆಕ್ಸ್ ಇದೆ. ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್ ಆಗಿದ್ದು, ಇಂದು 588.02 ಮೀಟರ್ ನೀರು ಸಂಗ್ರಹವಾಗಿದೆ. ಒಟ್ಟು ಸಂಗ್ರಹ ಸಾಮರ್ಥ್ಯ 3.24 TMC ಇದ್ದು, ಇದರಲ್ಲಿ 3.112 TMC ನೀರು ಸಂಗ್ರಹಗೊಂಡಿದೆ. ಉಪಯುಕ್ತ ಸಂಗ್ರಹ 2.283 TMC ಇದೆ.
