Traffic rules : ಶಿವಮೊಗ್ಗ : ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರು ತಮ್ಮ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ಪಡೆಯಲು ಸರ್ಕಾರ ನೀಡಿರುವ ಅವಕಾಶಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಈ ವಿಶೇಷ ಯೋಜನೆಯು ಮುಕ್ತಾಯಗೊಳ್ಳಲು ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಇವೆ.
ಆಗಸ್ಟ್ 23 ರಿಂದ ಸೆಪ್ಟೆಂಬರ್ 9 ರ ಅವಧಿಯಲ್ಲಿ, ಜಿಲ್ಲೆಯಾದ್ಯಂತ ಒಟ್ಟು 26,728 ಪ್ರಕರಣಗಳನ್ನು ವಾಹನ ಸವಾರರು ಇತ್ಯರ್ಥಪಡಿಸಿಕೊಂಡಿದ್ದಾರೆ. ಈ ಪ್ರಕರಣಗಳಿಂದ ಒಟ್ಟು ₹1,09,70,250 ದಂಡದ ಮೊತ್ತ ಸಂಗ್ರಹವಾಗಿದೆ.
ದಂಡ ಪಾವತಿಗೆ ಸೆಪ್ಟೆಂಬರ್ 12 ಕೊನೆಯ ದಿನಾಂಕವಾಗಿರುವುದರಿಂದ, ಬುಧವಾರ ಶಿವಮೊಗ್ಗದಲ್ಲಿ ದಂಡ ಪಾವತಿಸಲು ವಾಹನ ಸವಾರರು ಹತ್ತಿರದ ಪೊಲೀಸ್ ಠಾಣೆಗಳು ಮತ್ತು ಸಂಚಾರ ಪೊಲೀಸ್ ಠಾಣೆಗಳ ಮುಂದೆ ಸಾಲುಗಟ್ಟಿ ನಿಂತಿರುವುದು ಕಂಡುಬಂತು
2023 ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಯಿಂದ ಸಂಗ್ರಹವಾಗಬೇಕಿರುವ ದಂಡದ ಮೊತ್ತವು ₹19 ಕೋಟಿಗೂ ಹೆಚ್ಚಾಗಿದೆ. ಈ ರಿಯಾಯಿತಿ ಯೋಜನೆಯು ಮುಗಿಯಲು ಕಡಿಮೆ ಸಮಯ ಉಳಿದಿರುವುದರಿಂದ, ವಾಹನ ಸವಾರರು ಸಂಚಾರ ಠಾಣೆ ಪೊಲೀಸರನ್ನು ಹುಡುಕಿಕೊಂಡು ದಂಡ ಪಾವತಿಸಲು ಧಾವಿಸುತ್ತಿರುವುದು ಕಂಡುಬಂದಿತು. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಬಾಕಿ ಇರುವ ದಂಡವನ್ನು ಪಾವತಿಸುವಂತೆ ಸಂಚಾರ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
Traffic rules