SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 14, 2024 thirthahalli court
ಮಹತ್ವದ ಪ್ರಕರಣವೊಂದರಲ್ಲಿ ತೀರ್ಥಹಳ್ಳಿ ಕೋರ್ಟ್ ಆರೋಪಿಯೊಬ್ಬರಿಗೆ ಐದು ವರ್ಷ ಶಿಕ್ಷೆ ವಿಧಿಸಿದೆ. ಹೊಲಕ್ಕೆ ಹೋಗುತ್ತಿದ್ದ ವ್ಯಕ್ತಿ ಮೇಲೆ ಗುಂಡು ಹಾರಿಸಿದ ಪ್ರಕರಣ ಇದಾಗಿದೆ. ವರದಿಯ ಪೂರ್ತಿ ವಿವರ ಹೀಗಿದೆ.
ತೀರ್ಥಹಳ್ಳಿ ಕೋರ್ಟ್ thirthahalli court
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಜಟ್ಟಿನಮಕ್ಕಿ ಗ್ರಾಮದಲ್ಲಿ 23-04-2018 ರಂದು ನಡೆದ ಘಟನೆ ಇದು. ಅವತ್ತು ಗ್ರಾಮದ ನಿವಾಸಿ ಅಶೋಕ ಎಂಬವರ ಮನೆಯ ಪಕ್ಕದಲ್ಲಿರುವ ಜಾಗದಿಂದ ಕೃಷ್ಣಮೂರ್ತಿ ಎಂಬವರು ತಮ್ಮ ಜಮೀನಿಗೆ ಹೋಗುತ್ತಿದ್ದರು.
ಬಂದೂಕು ಗುಂಡೇಟು – gun shot
ಓಡಾಡುವ ಈ ಜಾಗದ ವಿಚಾರಕ್ಕೆ ಮುಂಚೇನೆ ಗಲಾಟೆ ಮತ್ತು ತಂಟೆ ತಕರಾರಿತ್ತು. ಅವತ್ತು ಇದೇ ವಿಚಾರವಾಗಿ ಕೃಷ್ಣಮೂರ್ತಿಯವರ ಜೊತೆಗೆ ಜಗಳ ತೆಗೆದ ಅಶೋಕ ಕೋವಿ (ಬಂದೂಕು) ಹಿಡ್ಕೊಂಡು ಬಂದು, ಕೃಷ್ಣಮೂರ್ತಿಯವರನ್ನ ಗುರಿ ಮಾಡಿ ಫೈರ್ ಮಾಡಿದ್ದಾರೆ. ಅಶೋಕ ಹಾರಿಸಿದ ಗುಂಡು ಕೃಷ್ಣಮೂರ್ತಿ ರವರ ಕುತ್ತಿಗೆಗೆ ತಾಗಿತ್ತು. ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಆನಂತರ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ತೀರ್ಥಹಳ್ಳಿ ಪೊಲೀಸ್ ಠಾಣೆ – thirthahalli police station
ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0380/2018 ಕಲಂ 307 IPC ಮತ್ತು ಕಲಂ 3, 25, 27 Indian Arms Act ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಆ ಬಳಿಕ ಆಗಿನ ತನಿಖಾಧಿಕಾರಿಗಳಾದ ಸುರೇಶ್, ಸಿ.ಪಿ.ಐ, ತೀರ್ಥಹಳ್ಳಿ ವೃತ್ತ ರವರು ಪ್ರಕರಣದ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ತೀರ್ಥಹಳ್ಳಿ ಕೋರ್ಟ್ ತೀರ್ಪು
ಇದೇ ಪ್ರಕರಣದಲ್ಲಿ ತೀರ್ಥಹಳ್ಳಿ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸುರೇಶ್ ಕುಮಾರ್ ಎ. ಎಂ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು. ಸದ್ಯ ಪ್ರಕರಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧಿಶರಾದ ಮಂಜುನಾಥ್ ನಾಯಕ್ ರವರು ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ
ತೀರ್ಪಿನಲ್ಲಿ ಏನಿದೆ?
ದಿನಾಂಕಃ 13-09-2024 ರಂದು ಆರೋಪಿತನಾದ ಅಶೋಕ, 62 ವರ್ಷ, ಜಟ್ಟಿನಮಕ್ಕಿ ಗ್ರಾಮ ತೀರ್ಥಹಳ್ಳಿ ತಾಲ್ಲೂಕು ಈತನಿಗೆ 05 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ 50,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 05 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದು, ಪರಿಹಾರ ರೂಪವಾಗಿ ದಂಡದ ಮೊತ್ತದಲ್ಲಿ 25,000 ರೂಗಳನ್ನು ಗಾಯಾಳು ಕೃಷ್ಣಮೂರ್ತಿರವರಿಗೆ ನೀಡಲು ಕೋರ್ಟ್ ಆದೇಶಿಸಿದೆ.
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ