thirthahalli :  ರಸ್ತೆಗೆ ಅಡ್ಡವಾಗಿ ನಿಂತ ಕಾರು, ಪ್ರಶ್ನಿಸಿದ್ದಕ್ಕೆ ಬಿಯರ್​ ಬಾಟಲ್​ನಿಂದ ಹಲ್ಲೆ

prathapa thirthahalli
Prathapa thirthahalli - content producer

thirthahalli : ತೀರ್ಥಹಳ್ಳಿ : ರಸ್ತೆಗೆ  ಅಡ್ಡವಾಗಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ದುಷ್ಕರ್ಮಿಗಳು ಬಿಯರ್​ ಬಾಟಲ್ ನಿಂದ ಹಲ್ಲೆ ಮಾಡಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಹೊನ್ನಂಗಿಯಲ್ಲಿ ನಡೆದಿದೆ. 

thirthahalli : ಹೇಗಾಯ್ತು ಘಟನೆ

ತೀರ್ಥಹಳ್ಳಿ ತಾಲೂಕಿನ ಹೊಸಂದೂರಿನ ಶೇಡ್ಗಾರ್ ಗ್ರಾಮದ ಕಿರಣ್​ ಎಂಬುವವರು ಅವರ ಪುತ್ರನೊಂದಿಗೆ ಪರಿಚಿತರ ಮನೆಯ ಗೃಹ ಪ್ರವೇಶ ಕಾರ್ಯಕ್ರಮವನ್ನು ಮುಗಿಸಿಕೊಂಡು ಬರುವ ಸಮಯದಲ್ಲಿ ಈ ಘಟನೆ ನಡೆದಿದೆ. ಹೊನ್ನಂಗಿ ರಸ್ತೆಯಲ್ಲಿ ಸಚಿನ್​ ಮತ್ತು ನಾಗರಾಜ್​ ಎಂಬುವವರು ತಮ್ಮ ಕಾರನ್ನು ರಸ್ತೆಗೆ  ಅಡ್ಡಲಾಗಿ ನಿಲ್ಲಿಸಿದ್ದರು ಎಂದು ಆರೋಪಿಸಲಾಗಿದೆ. ಕಾರನ್ನು  ರಸ್ತೆಗೆ ಅಡ್ಡ ನಿಲ್ಲಿಸಿರುವ ಬಗ್ಗೆ  ಕಿರಣ್​ ಮತ್ತು ಅವರ ಪುತ್ರ ಶಕ್ತಿರಾಜ್, ನಾಗರಾಜ್​ ಬಳಿ ಬಂದು ಪ್ರಶ್ನಿಸಿದ್ದಾರೆ. ಆಗ ಹಿಂಬದಿಯಿಂದ ಬಂದ ಸಚಿನ್​ ಬಿಯರ್​ ಬಾಟಲ್​ನಿಂದ ಕಿರಣ್ ಅವರ ತಲೆಗೆ ಹೊಡೆದಿದ್ದಾರೆ ಎನ್ನಲಾಗಿದೆ. ಸಚಿನ್ ನನ್ನು ತಡೆಯಲು ಹೋದ ಕಿರಣ್  ಮಗ ಶಕ್ತಿರಾಜ್​ ಮೇಲೂ ಸಚಿನ್​ ಹಾಗು ನಾಗರಾಜ್​ ಇಬ್ಬರು ಸೇರಿಕೊಂಡು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡಿದ್ದ, ಕಿರಣ್​ ಹಾಗೂ ಶಕ್ತಿರಾಜ್ ಮೆಗ್ಗಾನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮಾಳೂರು ಪೊಲೀಸ್​ ಠಾಣೆಯಲ್ಲಿ  ಕಿರಣ್ ನವರು ಘಟನೆ ಸಂಬಂಧ ದೂರು ದಾಖಲಿಸಿದ್ದಾರೆ.

- Advertisement -

 

TAGGED:
Share This Article
prathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Leave a Comment

Leave a Reply

Your email address will not be published. Required fields are marked *