ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 25, 2025 : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಪಟ್ಟಣದ ತೀರ್ಥಹಳ್ಳಿ ತಾಲ್ಲೂಕು, ಕೊಪ್ಪ ಮಾರ್ಗ ಮಧ್ಯದ ಕುರುವಳ್ಳಿ ಸಮೀಪದ ಕುಂಬಾರದಡಿಗೆ ತಿರುವಿನಲ್ಲಿ ಶುಕ್ರವಾರ ನಡೆದಿದೆ. ಕೊಪ್ಪ ಕಡೆಯಿಂದ ತೀರ್ಥಹಳ್ಳಿಗೆ ಬರುತ್ತಿದ್ದ ಕಾರು, ಚಾಲಕನ ಹಿಡಿತಕ್ಕೆ ಸಿಗದೆ, ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ವಿದ್ಯುತ್ ಕಂಬವು ಮುರಿದು ಬಿದ್ದಿದೆ. ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದೆ. ಅದೃಷ್ಟಕ್ಕೆ ಯಾವುದೆ ಅಪಾಯ ಸಂಭವಿಸಿಲ್ಲ.

ಹೊಸನಗರ: ಖಾಸಗಿ ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ : ಇಬ್ಬರಿಗೆ ಗಂಭೀರ ಗಾಯ

ಇನ್ನೊಂದು ಘಟನೆಯಲ್ಲಿ ಕೊಲ್ಲೂರು ಘಾಟಿಯಲ್ಲಿ ತಿರುವಿನಲ್ಲಿ ಬಸ್ಸು ಮತ್ತು ಸರಕು ಲಾರಿ ಸಿಲುಕಿದ ಪರಿಣಾಮ ಸಂಚಾರ ಕೆಲವು ಹೊತ್ತು ಅಸ್ತವ್ಯಸ್ತವಾಗಿತ್ತು. ಚಾಲಕರ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್ಸು ಮತ್ತು ಸರಕು ತುಂಬಿದ ಲಾರಿ ಎರಡೂ ರಸ್ತೆಯ ಇಕ್ಕೆಲಗಳಲ್ಲಿ ಸಿಲುಕಿಕೊಂಡ ಕಾರಣ, ಕೊಲ್ಲೂರು ಘಾಟ್ ರಸ್ತೆಯಲ್ಲಿ ಗುರುವಾರದಂದು ಕೆಲವು ಹೊತ್ತು ಟ್ರಾಫಿಕ್ ಜಾಮ್ ಆಗಿತ್ತು.
ಮುರುಡೇಶ್ವರದ ಕಡೆಯಿಂದ ಬರುತ್ತಿದ್ದ ಸರ್ಕಾರಿ ಬಸ್ಸೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಒಂದು ಬದಿಗೆ ಇಳಿದು ಸಿಲುಕಿಕೊಂಡಿತ್ತು. ಇದೇ ಸಮಯದಲ್ಲಿ, ಎದುರುಗಡೆಯಿಂದ ಸರಕು ತುಂಬಿಕೊಂಡು ಬಂದ ಮತ್ತೊಂದು ಲಾರಿ ಸಹ ರಸ್ತೆಯ ಇನ್ನೊಂದು ಬದಿಯಲ್ಲಿ ಸಿಲುಕಿದ ಕಾರಣ, ಕೊಲ್ಲೂರು ಘಾಟ್‌ನ ಸಂಚಾರವು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.
Thirthahalli and Kollur
ಶಿವಮೊಗ್ಗ, ಉಡುಪಿ, ಮಂಗಳೂರು, ಕೊಲ್ಲೂರು! ಕೇಂದ್ರ ಸಚಿವೆ ಮುಂದೆ ಸಂಸದರ 3 ಡಿಮ್ಯಾಂಡ್ ಏನದು!?
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!Thirthahalli and Kollur

